Posts

ಶೂನ್ಯ

ಏನಿಲ್ಲದ ಜಗತ್ತಿನಲ್ಲಿ ಏನನ್ನೋ ಹುಡುಕುವುದೇಕೆ ಕಳೆದು ಹೋದದ್ದದು ಏನೆನ್ನುವ ಅರಿವೇ ಇಲ್ಲದೆ, ಅಂತ್ಯವಿಲ್ಲದಂತ್ತೆ ಓಡುತ್ತಲೇ ಇವೆ ಕತ್ತಲು ಬೆಳಕುಗಳು ಮತ್ತೇನಕ್ಕೆ ಏನನ್ನೋ ಕೂಡಿಡುವೆ ಈ ಖಾಲಿ ಜಗ್ಗತ್ತಿನಲ್ಲಿ. ಗುಳ್ಳೆಗಳಂತಹ ಆಸೆಗಳನ್ನ ಅದೆಷ್ಟು ಕೂಡಿಡುವೆ ಕಾಲದ ಪ್ರವಾಹಕ್ಕೆ ಸಿಲುಕಿದಾಗ ಎಲ್ಲವೂ ಎಲ್ಲರೂ ಖಾಲಿ, ಬೆಟ್ಟದೆತ್ತರಕ್ಕೆ ಬೆಳೆದು ಆತ್ಮಕ್ಕಂಟಿದ ಕೊಳೆಗಳವು ಇನ್ನಷ್ಟು ಎತ್ತರಕ್ಕೆ ಏರುತ್ತಲೇ ಇವೆ ಅವುಗಳನ್ನ ಅಳಿಸುವುದ ಬಿಟ್ಟು ಮತ್ತೇಕೆ ಕಟ್ಟುವೆ ಶೂನ್ಯದೊಳಗೆ ಶಯನಗಳ. ಬದುಕಿನ ಆಗುಹೋಗುಗಳವು ಆಗುವವು ಹೋಗವವು ಅವುಗಳನ್ನೇಕೆ ಹಿಂಬಾಲಿಸುವೆ ಬಿಟ್ಟು ನಿನ್ನ ಆತ್ಮವನ್ನ ಮೈಲಿಗಳಷ್ಟು ದೂರ, ಕೂಡಿಡು ನಿನ್ನೊಳಗೆ ಒಂದೇ ನಾದದ ಮೋಕ್ಷದನುರಣನ ಇಂದಲ್ಲ ನಾಳೆಯಾದರು ಸಿಗುವುದಿದೆ ಅವನೆಂಬ ಬೃಹತ್ ಶೂನ್ಯ.                                                       ...........ಬಸವ.

ದಕ್ಷಿಣ ಕಾಶಿ ರಾಮೇಶ್ವರಮ್.

'ರಾಮೇಶ್ವರಮ್' ಚಾರ್ ಧಾಮಗಳಲ್ಲಿ ಇದೂ ಒಂದು. ದಕ್ಷಿಣದ ತುತ್ತತುದಿಯಲ್ಲಿ ಶ್ರೀ ರಾಮನಿಂದಲೇ ಸ್ಥಾಪಿತಗೊಂಡ ಸುಂದರ ಮತ್ತು ಸುಭಧ್ರ ದೇವಾಲಯ. ಮಹಾಬ್ರಾಹ್ಮಣ ರಾವಣನನ್ನ ಸಂಹರಿಸಿದ ಪ್ರಾಯಶ್ಚಿತಕ್ಕಾಗಿ ನಿರ್ಮಿಸಿದ ದೇವಾಲಯ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿನದೊಂದು. ಮಧುರೈ ಅಲ್ಲಿ ಅಡ್ಡಾಡಿದ್ದು ಅಷ್ಟೇನು ಆಯಾಸಕರವಾಗಿರಲಿಲ್ಲ. ಬಸ್ಸು ರಾಮನಾಡ್ ಅಥವಾ ರಾಮನಾಥಪುರದಿಂದ ರಾಮೇಶ್ವರದ ಕಡೆ ತೆರುಳುತ್ತಿತ್ತು. ಸ್ನಿಗ್ದ ಕತ್ತಲು,ಚಳಿಯೋ ಅಥವಾ ತಂಗಾಳಿಯೋ ಎಂದು ವ್ಯಾಖ್ಯಾನಿಸಲಾಗದ ಸಮಯ. ಮೊದಲಿಗೆ ಭೇಟಿಸಿಗುವುದು ಪಂಬನ್ ಎಂಬ ಹಳ್ಳಿ, ರಸ್ತೆಬದಿಯಲ್ಲಿ ಮಿನಿನಂಗಡಿಗಳು,ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡ ಶಿಲುಬೆಗಳು ಕಾಣಸಿಗುತ್ತಿವೆ. ಬ್ರಿಡ್ಜ್ ದಾಟಿದ ನಂತರ ರಾಮೇಶ್ವರಮ್ ದ್ವೀಪ.ಬ್ರಿಡ್ಜ್ ಇಂದಲೇ ಕತ್ತಲಲ್ಲಿ ಕಾಣಸಿಗುವ ದೊಡ್ಡ ಸಮುದ್ರ ನಮ್ಮನ್ನ ಅದಾಗಲೇ ಉತ್ತೇಜನಗೊಳಿಸಿತ್ತು. ರಾಮೇಶ್ವರಮ್ ಅಬ್ದುಲ್ ಕಲಾಂ ರ ಹುಟ್ಟುರು ಸಹ ಹೌದು. ಸುತ್ತಲೂ ಸಮುದ್ರದ ಮಧ್ಯೆಗಿನ ಚಿಕ್ಕ ದ್ವೀಪ,ಲಂಕೆಗೆ ಹನುಮಂತ ಲಗ್ಗೆ ಇಟ್ಟ ಸ್ಥಳ. ಅದೆಷ್ಟೋ ಬಾರಿ ಸುನಾಮಿಗಳನ್ನ ಎದುರಿಸಿದೆ ಈ ಪುಣ್ಯಭೂಮಿ. ಇಲ್ಲಿನ ನಿವಾಸಿಗಳು ಬಾಗಶಃ ಮೀನುಗಾರರೆ, ಸುಮಾರು ನಲವತ್ತಿಕ್ಕಿಂತ ಹೆಚ್ಚು ಚಿಕ್ಕಪುಟ್ಟ ಹಳ್ಳಿಗಳನ್ನ ಈ ದ್ವೀಪ ಸಾಕಿ ಸಲಹುತ್ತಿದೆ. ದೇವಸ್ಥಾನದ ಮಾರ್ಗದಲ್ಲಿಯೇ ಒಳ್ಳೆಯ ಬೆಲೆಗೆ ಸಿಕ್ಕ ಚಿನ್ನಸ್ವಾಮಿ ಖಾಸಗಿ ವಸುಹಾತಿನಲ್ಲಿ ಉಳಿದುಕೊಂಡ್ವಿ. ಅ...

ಯಾರವರು ಒಲವ ಗುತ್ತಿಗೆದಾರರು?

ಒಮ್ಮೆಲೇ ಮಾತನಾಡದೆ ಮನದ ಮೌನ ಮುರಿದು ಹೋದವರು, ಹೃದಯದೊಳಗೆ ಅಗಲಿಕೆಯ ಭೀತಿಯ ಡಮರುಗ ಬಾರಿಸಿದವರು, ಬಿಗಿ ಗಂಟಲ ದುಃಖಗಳನ್ನ ಅಲೆಅಲೆಯಾಗಿ ಕಣ್ಣೀರಲ್ಲಿ ತೇಲಿಸಿಹೋದವರವರು, ಯಾರವರು ಒಲವ ಗುತ್ತಿಗೆದಾರರು? ಎಂದೂ ಕಾಣದ ಹೊಸ ಅನುಭವಗಳಿಗೆ ನಾಂದಿ ಹಾಡಿದವರು, ಉರಿ ಬಿಸಿಲಲ್ಲೂ ತಂಪಿನ ಅನುಭೂತಿಯ ಕೊಟ್ಟವರು, ಸರ್ವಸ್ವವೂ ನಿಸ್ವಾರ್ಥದೊಂದಿಗೆ ಬಿಟ್ಟುಕೊಡುವ ಭರವಸೆಯ ಕೊಟ್ಟವರು, ಎಲ್ಲದಕ್ಕಿಂತಲೂ ಎಲ್ಲರಿಗಿಂತಲೂ ಮಿಗಿಲೆಂದವರು,  ನಗೆ ಮೂಡುವುದೊರಳಗೆಯೇ ಕಣ್ಣೀರ ಮುಡಿಸಿದವರವರು, ಯಾರವರು ಒಲವ ಗುತ್ತಿಗೆದಾರರು? ಅರಿಯದೇ ಇದ್ದ ತೀರಾ ಆತ್ಮೀಯತೆಯ ಅನುಭವವ ಕೊಟ್ಟವರು, ಮನದ ನಿರಂಜತೆಗೆ ಕಾಮನಬಿಲ್ಲಿನ ಚಿತ್ತಾರ ಮುಡಿಸಿದವರು, ಇರುಳುಗಳೇ ಅರಿಯದ ಕಣ್ಣುಗಳಿಗೆ ಹುಣ್ಣಿಮೆಯ ತಂಪ ಪಸರಿಸಿದವರು, ಸದಾ ನಗಿಸುತ್ತಲೇ ಇರುವೆನೆಂದವರು ಒಮ್ಮೆಲೇ ಅಳಲುಗಳ ಕೂಪಕ್ಕೆ ನೂಕಿದವರವರು, ಯಾರವರು ಒಲವ ಗುತ್ತಿಗೆದಾರರು?                                          .............ಬಸವ.

ಟೆಂಪಲ್ ಸಿಟಿ ಮಧುರೈ.

ತಾಂಜಾವೂರಿನ ವೈಭವಪೂರಿತ ದೇವಸ್ಥಾನದಲ್ಲಿ ತಿರುಗಾಡಿದ್ದ ಹರ್ಷವೊಂದೆಡೆ, ಜೊತೆಗೆ ಅಷ್ಟೇ ಆಯಾಸವು ಆಗಿತ್ತು. ಸುಮಾರು 3 ತಾಸಿನ ಬಳಿಕ ಬಸ್ಸು ದೇವಾಲಯ ನಗರಿಗೆ ಸಮೀಪವಾಗಿತ್ತು. ಅಲ್ಲಲ್ಲಿ ಕಾಣಿಸುತ್ತಿದ್ದ ಸ್ವಾಗತಕೋರುವ ಬೋರ್ಡಗಳು,ದೇವಾಲಯದ ಹೆಸರಿನಲ್ಲಿರುವ ಹೋಟೆಲ್ಲುಗಳು ನಾವು ಅದಾಗಲೇ ಮದುರೈಯಲ್ಲಿದ್ದೇವೆ ಅನ್ನುವುದು ತಿಳಿಸುತ್ತಿದ್ದವು. ಶಿವ ತನ್ನ ಜಡೆಯಿಂದ ಅಮೃತದ ಹನಿಗಳನ್ನ ಸುರಿಸಿದ್ದ ಎನ್ನುವುದರ ಅರ್ಥವಾಗಿ ಈ ನಗರ ಮಧುರೈ ಅನ್ನುವ ಹೆಸರನ್ನ ಪಡೆದುಕೊಂಡಿತು. ಮಧುರೈ ಎಂದಾಕ್ಷಣವೇ ಮೀನಾಕ್ಷಿ ಎಂಬ ಹೆಸರು ಉದ್ಘಾರಗೊಳ್ಳುತ್ತದೆ, ಅಷ್ಟೊಂದು ಪ್ರಾಮುಖ್ಯತೆ ಪಡೆದಿದೆ ಮಧುರೈ ಮೀನಾಕ್ಷಿ ದೇವಾಲಯ. ದಕ್ಷಿಣ ಭಾರತದ ಪ್ರಾಚೀನ ನಗರಗಳಲ್ಲಿ ಇದೂ ಕೂಡ ಒಂದು.ಸಂಗಮರ ಸಮಯದ ಇತಿಹಾಸ ಹೊಂದಿದೆ, ತಮಿಳುನಾಡಿನ ಸಾಂಸ್ಕೃತಿಕ ರಾಜಧಾನಿ. ಹಲವಾರು ಪ್ರಮುಖ ರಾಜವಂಶಗಳ ರಾಜಧಾನಿ ಮಧುರೈ. ವಾಗೈ ನದಿಯ ತಟದ ಮೇಲೆ ಹದಿನಾಲ್ಕು ವೈಭವಿಕೃತ ಗೋಪುರಗಳ ಮಧ್ಯೆ ಸ್ಥಿತವಾದ ದೇವಸ್ಥಾನ. ದೇವಸ್ಥಾನದ ಸುತ್ತಲೂ ಕಮಲದ ಆಕಾರದಲ್ಲಿ ಬೆಳೆದ ಸುಸಜ್ಜಿತ ಸುಂದರ ನಗರವದು. ಪಾರ್ವತಿ ಸ್ವರೂಪಿಯಾದ ಮಿನಾಕ್ಷಿಯ ನಗರವಿದು. ತಾಂಜಾವೂರು ಶಿವನದ್ದಾದರೆ ಮಧುರೈ ಮಿನಾಕ್ಷಿಯದ್ದು. ಮಿನಾಕ್ಷಿ ದೇವಿಯೇ ಇಲ್ಲಿಯ ಮಹಾರಾಣಿ. ದೇವಸ್ಥಾನದ ಸುತ್ತಲೂ ಬೆಳದ ನಗರವಾಗಿದ್ದರಿಂದ ಅಲ್ಲಿಯ ನದಿ ನಗರವನ್ನ ಇಬ್ಬಾಗವಾಗಿ ಬೇರ್ಪಡಿಸಿ ಹರಿಯುತ್ತದೆ.ಒಟ್ಟಾರೆ ಚಿಕ್ಕಪುಟ್ಟ ನಾಲ್ಕು ಬ್ರಿಡ್ಜ್...

ತಾಂಜಾವೂರಿನ ಬೃಹದೀಶ್ವರ.

ಐದಾರು ವರ್ಷಗಳ ಹಿಂದೆ ದುಬಾರಿಯಾಗಿದ್ದ ಅಂತರ್ಜಾಲ ಏಕಾಏಕಿ ಅಗ್ಗವಾಯಿತು, ಅಂತರ್ಜಾಲ ಎಲ್ಲೆಡೆ ಹಬ್ಬಿತು,ಅದರೊಂದಿಗೆ ಅನೇಕ ವಿಚಾರಗಳು,ಸಿದ್ಧಾಂತಗಳು,ಸತ್ಯಗಳು,ನೈಜ್ಯತೆಗಳು, ಎಲ್ಲವೂ ಎಲ್ಲರೆದುರಿಗೆ ಅನಾವರಣಗೊಳ್ಳಲಿಕೆ ಶುರುಯಾಯ್ತು. ಈ ಮೊದಲು,ಭಾರತೀಯ ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಬಗ್ಗೆ ಅಭಿರುಚಿ ಹೊಂದಿದ ಅನೇಕರು ಅದೆಲ್ಲವನ್ನ ಪುಸ್ತಕದಲ್ಲಿ ತುಂಬಿಟ್ಟಿದ್ದರು,ಆದರೆ ಅದು ಭಾರತಿಯರೆಲ್ಲರಿಗೂ ತಲುಪಿತು ಅನ್ನುವುದು ಅಜೀರ್ಣದ ಮಾತು. ಈ ಅಂತರ್ಜಾಲದ ಬಳಕೆಯಿಂದ, ಭಾರತದ ವಾಸ್ತುಶಿಲ್ಪದ ಮತ್ತು ಅದರ ಪುರಾತನ ಪ್ರಾಚೀನ ಇತಿಹಾಸದ ಅನುಯಾಯಿಗಳು ಸುಂದರ ಮತ್ತು ಭವ್ಯ ದೇವಾಲಯಗಳ ಬಗ್ಗೆ ಮಾಹಿತಿ ಹಂಚುವದನ್ನ ಪ್ರಾರಂಭಿಸಿದರು,ಅದರ ಕೃತಾರ್ಥವಾಗಿ ಅಂತರ್ಜಾಲದಲ್ಲಿ ಎಲ್ಲೆಡೆ ಹಬ್ಬಿದ ಅನೇಕ ದೇವಾಲಯಗಳ ಚಿತ್ರಗಳಲ್ಲಿ ತಂಜಾವೂರಿನ ವಿಶ್ವವಿಖ್ಯಾತ, ಅಂತಾರಾಷ್ಟ್ರೀಯ ಸ್ಮಾರಕದ ಗುರುತಿನ, ಸಾವಿರ ವರ್ಷದ ಬೃಹದೀಶ್ವರ ದೇವಸ್ಥಾನವೂ ಒಂದು. ಸುಮಾರು ನಾಲ್ಕೈದು ವರ್ಷಗಳ ಹಿಂದಿನಿಂದಲೇ ಈ ದೇವಸ್ಥಾನವನ್ನ ನೋಡಬೇಕು,ಅದರ ಪ್ರಾಂಗಣದಲ್ಲಿ ಸುತ್ತಾಡಬೇಕೆನ್ನುವ ಹಂಬಲ,ಅದು ದಿನ ಕಳೆದಷ್ಟು ಸ್ಪುಟಗೊಳ್ಳುತ್ತಲೇ ಇತ್ತು. ಅದೆಷ್ಟೋ ಬಾರಿ ಕಲಬುರಗಿಯಿಂದ ತಾಂಜಾವೂರಿನ ತನಕ ಹೋಗುವ ವ್ಯವಸ್ಥೆಯ ಬಗ್ಗೆ ಮ್ಯಾಪ್ ನಲ್ಲಿ ವಿಹರಿಸಿ ವಿಚಾರಿಸಿದ್ದುಂಟು,ಒಮ್ಮೊಮ್ಮೆ ನಿಶ್ಚಯಿಸಿದ್ದು ಉಂಟು, ಆದರೆ ಅದ್ಯಾವು ಯಶಸ್ಸು ಕಾಣಲಿಲ್ಲ. ಬೆಂಗಳೂರಿಗೆ ಇದು ಇನ್ನೂ ಸಮೀಪ, ಇವಾಗ ಇ...

ಭೈರಜ್ಜನ "ಕವಲು".

ದೈನಂದಿನ ಒತ್ತಡಗಳು,ಚಿಂತೆಗಳು,ಆಯಾಸಗಳಂತಹ ಹಲವು ವಿಷಯಗಳಿಂದ ದೂರ ಕೊಂಡೊಯ್ಯುವ ವಸ್ತುಗಳ ಪಟ್ಟಿಯಲ್ಲಿ ಪುಸ್ತಕವೂ ಒಂದು ಸ್ಥಾನ ಗಿಟ್ಟಿಸಿಕೊಂಡಿದೆ ಎಂದರೆ ಎಲ್ಲರೂ ಒಪ್ಪುವಂತಹ ವಿಷಯವೇ ಹೌದು.  ಯಾವುದಾದರೂ ಒಂದು ಪುಸ್ತಕದ ದೆಸೆಯಲ್ಲಿ ದಿನದ ಸ್ವಲ್ಪ ಭಾಗವಾದರು ಕಳೆಯಲೇಬೇಕು, ಒಂದು ಹೊಸತನವನ್ನ ಕೊಡುತ್ತಲೇ ಹೋಗುತ್ತವೆ. ಹೀಗಿದ್ದಾಗ,ಮಾಲ್ ವೊಂದರಲ್ಲಿ ಸುತ್ತಾಡುತ್ತಿದ್ದಾಗ ಸಪ್ನ ಪುಸ್ತಕ ಮಳಿಗೆಯಲ್ಲಿ ಮೆರೆಯುತ್ತಿದ್ದ ಹಲವು ಪುಸ್ತಕಗಳ ಕಪಾಟುಗಳಲ್ಲಿ ಎಸ್ ಎಲ್ ಭೈರಪ್ಪನವರ ಪುಸ್ತಕಗಳೂ ತಾವಾರಿಗಿಂತ ಕಮ್ಮಿಯಿಲ್ಲ ಎಂಬಂತ್ತೇ ಕುತಿದ್ದದ್ದು ಕಣ್ಣಿಗೆ ಬಿತ್ತು. ಯಾವೊದೋ ಒಂದು ಪುಸ್ತಕ ತೆಗೆದುಕೊಂಡು ಓದುವ ಮೊದಲು ಅದರ ಮುನ್ನುಡಿ ಓದುವುದು ಒಂದು ರಿವಾಜು ಅಥವಾ ಆ ಪುಸ್ತಕ ಬರೆದವರ ಚಿಂತನೆಗಳನ್ನ  ತಿಳುದುಕೊಳ್ಳುವುದೋ ಅಥವಾ ಅದರ ಬಗೆಗಿನ ಮತ್ತೊರ್ವರು ಬರೆದ ವಿಮರ್ಶೆಯನ್ನ ಓದಿ ಪುಸ್ತಕ ತೆಗೆದು ಕೊಳ್ಳೋದು ಓದುಗರೆಲ್ಲರೂ ಪಾಲಿಸುವಂತಹ ಮತ್ತು ಪಾಲಿಸಲೇಬೇಕಾದ ಒಂದು ಅಲಿಖಿತ ರೂಢಿ. ಇಲ್ಲ ಸಲ್ಲದ ಪುಸ್ತಕ ಓದಿ,ಅದರ ಹುಚ್ಚು ವಿಚಾರವೋ ಅಥವಾ ಸಿದ್ದಂತಾಗಳನ್ನೋ ತಲೆಯಲ್ಲಿ ತುಂಬಿಕೊಂಡು ತಲೆ ಭಾರಗೊಳಿಸುವುದು ಯಾರಿಗೂ ಇಷ್ಟವಿಲ್ಲದ ಸಂಗತಿ. ಒಂದುವೇಳೆ ಓದಿದರೂ, ಅವುಗಳು ನಮ್ಮಲ್ಲಿನ ಸಿದ್ಧಾಂತಗಳಿಗೆ ಧಕ್ಕೆ ತರುವುದಿಲ್ಲವೆಂದು ಅರಿತಿದ್ದರೂ,ಎಲ್ಲೋ ಒಂದು ಕಡೆ ಮರುಳು ಮಾಡಿ ನಮ್ಮ ಸಿದ್ಧಾಂತ ಮತ್ತು ಚಿಂತನೆಗಳಿಗೆ ಒಂದಷ್ಟು ಕಲ್ಮಶ ಬೆರಸ...

ವಿಮುಕ್ತನಾಗು.

ಮುಕ್ತನಾಗು ವಿಮುಕ್ತನಾಗು ವಿರಕ್ತನಾಗು ಹುಸಿ ಸುಖ ದುಃಖಗಳಿಂದ ಪಾರಾಗು, ನೀನಾಗು ನಿನ್ನಲಿರುವವನಿಗೆ ಅಣಿಯಾಗು, ಬಂಧನಗಳ ಭಾರ ಹೆಚ್ಚಾದಷ್ಟು ಮುಳುಗುವೆ ಮುಲುಗುವೆ. ಅದನಿದನರಿಯುವ ಗೋಜಿಗೆ ಬಲಿಯಾಗದೆ ಅರಿಯಬೇಕಿದೆ ಇಲ್ಲಿ ತಾನೇನೆಂಬುದನ, ಬೆಸೆಯಕಿದೆ ಅವನೊಂದಿಗೊಂದು ಕೊಂಡಿ ಅಲ್ಲೆಲ್ಲೋ ಕಳೆದು ಹೋದ ಆತ್ಮದ ಅರಿವಿಗಾಗಿ. ಶೃಂಗಾರ ಜೀವಕ್ಕೂ ಹೌದು ಶವಕ್ಕೂ ಹೌದು ಮತ್ತೇಕೆ ಹಾತೊರೆಯಬೇಕಿದೆ ನಶ್ವರಕ್ಕೆ, ಕಂಡರೂ ಭಾವಸಾಗರದಾಚೆಗಿನ ತೀರ ಅದರೆಡೆಗೆ ಈಜುವಲ್ಲೇಕೆ ತತ್ಸಾರ,ತಿರಸ್ಕಾರ. ಸ್ವಭಾವದ ಮೇಲಿನ ಕ್ಷಣಿಕ ಪ್ರಭಾವಕ್ಕೊ ಲೌಕಿಕ ಬದುಕಿನ ವ್ಯಸನದ ಪ್ರವಾಹಕ್ಕೊ ಚೇತರಿಸಿಕೊ ಬಲಿಯಾಗಿ ಬಳಲುತ್ತಿರುವ ಮನಸ್ಥಿತಿಯ ಮತ್ತೆ ಚಿಗುರೊಡೆದು ಚಿಮ್ಮಬೇಕಿದೆ ಅವನೆಡೆಗೆ ಅವನೆತ್ತರದೆಡೆಗೆ.                                            ...............ಬಸವ.