Posts

Showing posts from April, 2020

ಚಂದ್ರಮೌಳೇಶ್ವರನೆಡೆಗೆ.

ಬೆಳಿಗ್ಗೆ 10ರ ಸುಮಾರು ನಾನು ಮತ್ತೆ ಮಹೇಶ ಎಂದಿನಂತೆಯೇ ತಿಂಡಿ ಮುಗಿಸಿ ಕುಳಿತಿದ್ದೆವು. ಅವಾಗ್ ಅವಾಗ ಅಲ್ಲಲ್ಲಿ ಹೋಗುವ ನನ್ನ ಬೇಡಿಕೆಗಳಿಗೆ ಮಹೇಶ ಕಣ್ಣು ಮುಚ್ಚಿ ಹುಗುಡುತ್ತಿದ್ದ, ಅಂತೆಯೇ ಸುಮ್ಮನೆ ಕುಳ್ತಿದ್ದಾಗ ಪೂಜಾ ಫೋನ್ ಮಾಡಿ ಹುಬ್ಬಳ್ಳಿಗೆ ಹೋಗುವದರ ಬಗ್ಗೆ ಹೇಳಿದ್ದೆ ತಡ ತಕ್ಷಣವೇ ರೆಡಿ ಅದ್ವಿ, ಹೋಗುವುದು ನಿಶ್ಚಯ ವಾಗಿದ್ದು ಬೈಕ್ ಇದ್ರೆ ಚಂದ ಅಂತ ಹೇಳಿ ನಾನು ಮತ್ತೆ ಮಹೇಶ ಬೌನ್ಸ್ ಬೈಕ್ ತಗೆದುಕೊಳ್ಳುವ ನಿರ್ಧಾರಕ್ಕೆ ಬಂದ್ವಿ,ಮಹೇಶನ ಬೈಕ್ ಹೊರಪಡಿಸಿ ಇನ್ನೊಂದು ಬೈಕ್ ನ ಅವಶ್ಯಕತೆ ಇತ್ತು ಹಾಗಾಗಿ ಮಹೇಶನ ಲೈಸೆನ್ಸ್ ಅಲ್ಲಿಯೇ ಬುಕ್ ಮಾಡಿಕೊಂಡೆವು. ಮಹೇಶ ಮತ್ತು ನಾನು ಇಬ್ಬರು ಒಂದೊಂದು ಬೈಕ್ ನ ಮೇಲೆ ಹೋಗಿ ಪೂಜಾ ಮತ್ತೆ ಸೌಮ್ಯಾಳಿಗೆ ಸರ್ಪ್ರೈಸ್ ಕೊಟ್ಟಾಗಿತ್ತು. ನನ್ನದು ಸ್ಕ್ಯೂಟಿ ಇದ್ದ ಕಾರಣ ಇಲಿಯಂತಿದ್ದ ಪೂಜಾಳನ್ನ ನನ್ನ ಗಾಡಿಯ ಮೇಲೆಯೇ ಹತ್ತಿಸಿಕೊಂಡೇ, ಉಳಿದ ಮಾತು ಸೌಮ್ಯಳ ಬಗೆಗಿಂದು ಹೇಳುವ ಅವಶ್ಯಕತೆಯೇ ಬರುವುದಿಲ್ಲ ಇವಳು ಇಲಿ ಅಂದಲ್ಲಿ ಅವಳು ಆನೆ ಅನ್ನುವುದು ಕಣ್ಣೆದುರಿಗಿನ ಸತ್ಯ. ಪೂಜಾ ಹುಬ್ಬಳ್ಳಿಗೆ ಹೋಗಬಯಸಿದ್ದು ದೇವಸ್ಥಾನಕ್ಕೆ, ಹುಬ್ಬಳ್ಳಿಯ ಹತ್ತಿರವೇ ಮಧ್ಯ ರಸ್ತೆಯಲ್ಲೇ ಇರುವ ಶಿವಾಲಯ,"ಕಂಡ ದೇವರಿಗೊಂದು ಹರಕೆ" ಅನ್ನುವಂತ್ತೆ ಪೂಜಾ ಈ ದೇವರಿಗೆ ಬರುತ್ತೇನೆಂಬ ಹರಕೆ ಬಸ್ಸಲ್ಲೇ ಕಣ್ಣು ಮುಚ್ಚಿ ಬೇಡಿಕೊಂಡಿದ್ದಳಂತ್ತೆ ಹಾಗಾಗಿ ಅಲ್ಲಿಗೆ ಹೋಗುವ ನಿರ್ಧಾರವಾಗಿತ್ತು.  ಮಹೇಶ್ ಬೈಕ್ ಓಡಿ

ಬಿಕ್ಕಟ್ಟು

ಓಗೊಡಲೇ ಬೇಕು ಭಗವಂತನ ಕರೆಗೆ ನೋವಾದರೂ ನರ್ತಿಸಲೇ ಬೇಕು ವಿಧಿಗೆ, ನೋವಿನ ಕತ್ತಲಾದರೇನು ಸುಖದ ಬೆಳಕಾದರೇನು  ಸರ್ವವೂ ಕಣ್ ತೆರೆದೇ ನೋಡುತ್ತಿಹನವನು. ಇಲ್ಲಿ ಅತಿಥಿಗಳು ನಾವು ನೀವೆಲ್ಲರೂ ಸಿಕ್ಕಿದ್ದು ಸ್ವೀಕರಿಸು ಮಿಕ್ಕಿದ್ದು ಉಣಬಡಿಸು ನಿರ್ಗತಿಕನಿಗೆ ನಿನ್ನದಲ್ಲವೆಂದು, ಅರಿತಷ್ಟು ಆತ್ಮವರಿಯಬೇಕು ಕರ್ಮಕ್ಕೆ ತಕ್ಕಂತ್ತೆ ಏನೂ ಬಯಸದೆ ಬಾಗು ಭಗವಂತನ ನಡೆಗಳಿಗೆ. ಉದ್ದೇಶವರಿತರು ಉದ್ದಾರವಾಗದಿರಲು ಮತ್ತೊಬ್ಬರ ನೋವುಗಳಿಗೆ ನಗುವ ಚಿತ್ತವೇ ಕಾರಣ, ಬಿರುದುಗಳ ಪಡೆದೇನೆಂದು ಬೀಗಿದಷ್ಟು ಭಯಂಕರ ಬದುಕು ನಟಿಸದಿರು ನೋವುಗಳಿಗೆ ಮರೆತು ನಿನ್ನವವೇ ನೋವೆಂದು. ಖಾಲಿಯದಂತ್ತೆ ಹಗುರವಿರಲಿ ಹಂಗುಗಳ ಹಂದರ ನೈಜ್ಯತೆಯ ಅರಿತು ತಣಿಸು ಜೀವನದ ಜಿಡ್ಡುಗಳ, ಬಂಧನಗಳಲ್ಲಿ ಇಳಿದಷ್ಟು ಬದುಕು ಬಿಕ್ಕಟ್ಟು ಅರಿತರು ಅವ್ಹಾನಿಸದಿರು ಅಲೌಕಿಕ ಇಕ್ಕಟ್ಟು.                                                  .........ಬಸವ