Posts

Showing posts from November, 2019

ಬಹುದೂರಕೆ ಪಯಣ

ನೆನಪುಗಳಿಗೂ ನಿಲಕದಷ್ಟು ದೂರ ಹೋಗುತ್ತಿರುವೆ ನೀನು, ಸಾವೂ ಸೇರಿಸದಷ್ಟು ದೂರ ಹೋಗುತ್ತಿರುವೆ ನೀನು, ನನ್ನಾಲೋಚನೆಗಳ ಕಡಿವಾಣ ಮೀರಿ ಮತ್ತೆಂದೂ ಬಾರದಷ್ಟು ದೂರ ಹೋಗುತ್ತಿರುವೆ ನೀನು. ನೂರೆಂಟು ನೋವುಗಳು ಸಾಕೆಂದರು ಮಿಕ್ಕದ ಕಣ್ಣೀರ ಧಾರೆಯ ಹೊರೆಸುತ್ತಿವೆ, ಜೋರಾಗಿ ಕಿರುಚೆನೆಂದರೆ ದುಃಖದಿ ನುಡಿಯದೆ ಮುಖನಾಗಿರುವೆ, ಅರಿಯದ ಸನ್ನೆಗಳಿಂದ ನುಡಿಯುತ್ತಿದ್ದರು ನಿನ್ನೆದುರು, ಕಂಡು ಕಂಡು ನಗುತ್ತಿರುವೆ ನಿನಿಂದು. ನೆರಳಾಸೆ ನಿರೀಕ್ಷಿಸಿ ನರಳುತ್ತಿರುವೆ, ದಾಹ ತೀರಿಸುವ ನಿರಲ್ಲೇ ಮುಳುಗುತ್ತಿರುವೆ, ಉರಿ ಬಿಸಿಲಿಗೆ ಮೈಯೊಡ್ಡಿ ನರ್ತಿಸುತ್ತಿರುವೆ, ನರ್ತಿಸಿ ನಗಿಸಿ ನಿನ್ನ ಪಡೆಯುವಾಸೆಯಲಿ. ಮರೆತಷ್ಟು ನೆನಪುಗಳು ನರಳಿಸುತ್ತಿವೆ, ಬಯಸಿದ ಬಣ್ಣಗಳೇ ಕಣ್ಣುಮುಚ್ಚಿಸುತ್ತಿವೆ ನಿನ್ನಾದೇಶಗಳಂತೆ, ಕಂಡ ತೀರಕ್ಕೆ ತಲುಪದಂತೆ ದಿಕ್ಕು ತಪ್ಪಿ ಧಾವಿಸುತ್ತಿದೆ ನಿನ್ನ ನೆನಪುಗಳಲ್ಲಿ ಕಟ್ಟಿದ ದೋಣಿ. ಮುಳುಗಿಸಿಲಾರೆನಿ ದೋಣಿಯ ನಿನ್ನ ನೆನಪುಗಳಾಗರವಿದು, ನಿನ್ನಲ್ಲಿರುವೆನೆಂಬ ಹುಸಿ ನೆಪ ಸಾವೆಂಬ ದಾರಿಯಿಂದ ಬಹುದೂರ ದೊರಕ್ಕೆ ಕೊಂಡೊಯ್ಯುತ್ತಿದೆ ಈ ದೋಣಿ.                                              .........ಬಸವ

ಹೆಣ್ಣೇಂಬ ಹಣ್ಣು ನಿ

ಹೆಣ್ಣೇಂಬ ಹಣ್ಣು ನಿ ನಿ ಹೆಣ್ಣೇಂಬ ಹಣ್ಣು ನಿ ಹಲವು ಹರಿತಾದ ಸಮಾಜದ ರೆಂಬೆ ಕೊಂಬೆಗಳಿಗಂಟಿ,ಮೈ ಕೊರೆದು ರಕ್ತ ಸುರಿದು ಪಕ್ವವಾಗಿ ಬಿದ್ದಿರುವ ಹೆಣ್ಣೇಂಬ ಹಣ್ಣು ನಿ........ ತಿಳಿ ಸುಣ್ಣದಲ್ಲಡಗಿದ ಬಿಸಿ ಕಲ್ಲಿನಂತೆ ನಿ, ಕೆಂಪಾಗಿ ತಂಪಾಗಿ ಕಾಣುವ ಬುದಿಯೊಳಡಗಿದ ಕೆಂಡದಂತ್ತೆ ನಿ, ಮುಗಿತಿಯೊಳಗೆ ಕಣ್ಣೀರು ಮುಳುಗಿಸಿದಾಕಿ ನೀ, ಹೆಣ್ಣೇಂಬ ಹಣ್ಣು ನಿ......... ನಿ ತುಳಿಯುವ ಹೆಜ್ಜಗಳೆಲ್ಲ ಅಗ್ನಿಪರೀಕ್ಷೆ, ನಿ ನುಡಿಯುವ ನುಡಿಗಳೆಲ್ಲ ನಿನ್ನೆ  ತಿವಿಯುವ ಈಟಿಗಳಂತ್ತೆ, ಜಗವೇ ಕಾಣದ ಜಗತ್ತೊಂದನ ನಿ ಅನುಭವಿಸಿದಾಕೆ, ಹೆಣ್ಣೇಂಬ ಹಣ್ಣು ನಿ......                                   ...........ಬಸವ.