Posts

Showing posts from January, 2022

ದಕ್ಷಿಣ ಕಾಶಿ ರಾಮೇಶ್ವರಮ್.

'ರಾಮೇಶ್ವರಮ್' ಚಾರ್ ಧಾಮಗಳಲ್ಲಿ ಇದೂ ಒಂದು. ದಕ್ಷಿಣದ ತುತ್ತತುದಿಯಲ್ಲಿ ಶ್ರೀ ರಾಮನಿಂದಲೇ ಸ್ಥಾಪಿತಗೊಂಡ ಸುಂದರ ಮತ್ತು ಸುಭಧ್ರ ದೇವಾಲಯ. ಮಹಾಬ್ರಾಹ್ಮಣ ರಾವಣನನ್ನ ಸಂಹರಿಸಿದ ಪ್ರಾಯಶ್ಚಿತಕ್ಕಾಗಿ ನಿರ್ಮಿಸಿದ ದೇವಾಲಯ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿನದೊಂದು. ಮಧುರೈ ಅಲ್ಲಿ ಅಡ್ಡಾಡಿದ್ದು ಅಷ್ಟೇನು ಆಯಾಸಕರವಾಗಿರಲಿಲ್ಲ. ಬಸ್ಸು ರಾಮನಾಡ್ ಅಥವಾ ರಾಮನಾಥಪುರದಿಂದ ರಾಮೇಶ್ವರದ ಕಡೆ ತೆರುಳುತ್ತಿತ್ತು. ಸ್ನಿಗ್ದ ಕತ್ತಲು,ಚಳಿಯೋ ಅಥವಾ ತಂಗಾಳಿಯೋ ಎಂದು ವ್ಯಾಖ್ಯಾನಿಸಲಾಗದ ಸಮಯ. ಮೊದಲಿಗೆ ಭೇಟಿಸಿಗುವುದು ಪಂಬನ್ ಎಂಬ ಹಳ್ಳಿ, ರಸ್ತೆಬದಿಯಲ್ಲಿ ಮಿನಿನಂಗಡಿಗಳು,ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡ ಶಿಲುಬೆಗಳು ಕಾಣಸಿಗುತ್ತಿವೆ. ಬ್ರಿಡ್ಜ್ ದಾಟಿದ ನಂತರ ರಾಮೇಶ್ವರಮ್ ದ್ವೀಪ.ಬ್ರಿಡ್ಜ್ ಇಂದಲೇ ಕತ್ತಲಲ್ಲಿ ಕಾಣಸಿಗುವ ದೊಡ್ಡ ಸಮುದ್ರ ನಮ್ಮನ್ನ ಅದಾಗಲೇ ಉತ್ತೇಜನಗೊಳಿಸಿತ್ತು. ರಾಮೇಶ್ವರಮ್ ಅಬ್ದುಲ್ ಕಲಾಂ ರ ಹುಟ್ಟುರು ಸಹ ಹೌದು. ಸುತ್ತಲೂ ಸಮುದ್ರದ ಮಧ್ಯೆಗಿನ ಚಿಕ್ಕ ದ್ವೀಪ,ಲಂಕೆಗೆ ಹನುಮಂತ ಲಗ್ಗೆ ಇಟ್ಟ ಸ್ಥಳ. ಅದೆಷ್ಟೋ ಬಾರಿ ಸುನಾಮಿಗಳನ್ನ ಎದುರಿಸಿದೆ ಈ ಪುಣ್ಯಭೂಮಿ. ಇಲ್ಲಿನ ನಿವಾಸಿಗಳು ಬಾಗಶಃ ಮೀನುಗಾರರೆ, ಸುಮಾರು ನಲವತ್ತಿಕ್ಕಿಂತ ಹೆಚ್ಚು ಚಿಕ್ಕಪುಟ್ಟ ಹಳ್ಳಿಗಳನ್ನ ಈ ದ್ವೀಪ ಸಾಕಿ ಸಲಹುತ್ತಿದೆ. ದೇವಸ್ಥಾನದ ಮಾರ್ಗದಲ್ಲಿಯೇ ಒಳ್ಳೆಯ ಬೆಲೆಗೆ ಸಿಕ್ಕ ಚಿನ್ನಸ್ವಾಮಿ ಖಾಸಗಿ ವಸುಹಾತಿನಲ್ಲಿ ಉಳಿದುಕೊಂಡ್ವಿ. ಅ

ಯಾರವರು ಒಲವ ಗುತ್ತಿಗೆದಾರರು?

ಒಮ್ಮೆಲೇ ಮಾತನಾಡದೆ ಮನದ ಮೌನ ಮುರಿದು ಹೋದವರು, ಹೃದಯದೊಳಗೆ ಅಗಲಿಕೆಯ ಭೀತಿಯ ಡಮರುಗ ಬಾರಿಸಿದವರು, ಬಿಗಿ ಗಂಟಲ ದುಃಖಗಳನ್ನ ಅಲೆಅಲೆಯಾಗಿ ಕಣ್ಣೀರಲ್ಲಿ ತೇಲಿಸಿಹೋದವರವರು, ಯಾರವರು ಒಲವ ಗುತ್ತಿಗೆದಾರರು? ಎಂದೂ ಕಾಣದ ಹೊಸ ಅನುಭವಗಳಿಗೆ ನಾಂದಿ ಹಾಡಿದವರು, ಉರಿ ಬಿಸಿಲಲ್ಲೂ ತಂಪಿನ ಅನುಭೂತಿಯ ಕೊಟ್ಟವರು, ಸರ್ವಸ್ವವೂ ನಿಸ್ವಾರ್ಥದೊಂದಿಗೆ ಬಿಟ್ಟುಕೊಡುವ ಭರವಸೆಯ ಕೊಟ್ಟವರು, ಎಲ್ಲದಕ್ಕಿಂತಲೂ ಎಲ್ಲರಿಗಿಂತಲೂ ಮಿಗಿಲೆಂದವರು,  ನಗೆ ಮೂಡುವುದೊರಳಗೆಯೇ ಕಣ್ಣೀರ ಮುಡಿಸಿದವರವರು, ಯಾರವರು ಒಲವ ಗುತ್ತಿಗೆದಾರರು? ಅರಿಯದೇ ಇದ್ದ ತೀರಾ ಆತ್ಮೀಯತೆಯ ಅನುಭವವ ಕೊಟ್ಟವರು, ಮನದ ನಿರಂಜತೆಗೆ ಕಾಮನಬಿಲ್ಲಿನ ಚಿತ್ತಾರ ಮುಡಿಸಿದವರು, ಇರುಳುಗಳೇ ಅರಿಯದ ಕಣ್ಣುಗಳಿಗೆ ಹುಣ್ಣಿಮೆಯ ತಂಪ ಪಸರಿಸಿದವರು, ಸದಾ ನಗಿಸುತ್ತಲೇ ಇರುವೆನೆಂದವರು ಒಮ್ಮೆಲೇ ಅಳಲುಗಳ ಕೂಪಕ್ಕೆ ನೂಕಿದವರವರು, ಯಾರವರು ಒಲವ ಗುತ್ತಿಗೆದಾರರು?                                          .............ಬಸವ.

ಟೆಂಪಲ್ ಸಿಟಿ ಮಧುರೈ.

ತಾಂಜಾವೂರಿನ ವೈಭವಪೂರಿತ ದೇವಸ್ಥಾನದಲ್ಲಿ ತಿರುಗಾಡಿದ್ದ ಹರ್ಷವೊಂದೆಡೆ, ಜೊತೆಗೆ ಅಷ್ಟೇ ಆಯಾಸವು ಆಗಿತ್ತು. ಸುಮಾರು 3 ತಾಸಿನ ಬಳಿಕ ಬಸ್ಸು ದೇವಾಲಯ ನಗರಿಗೆ ಸಮೀಪವಾಗಿತ್ತು. ಅಲ್ಲಲ್ಲಿ ಕಾಣಿಸುತ್ತಿದ್ದ ಸ್ವಾಗತಕೋರುವ ಬೋರ್ಡಗಳು,ದೇವಾಲಯದ ಹೆಸರಿನಲ್ಲಿರುವ ಹೋಟೆಲ್ಲುಗಳು ನಾವು ಅದಾಗಲೇ ಮದುರೈಯಲ್ಲಿದ್ದೇವೆ ಅನ್ನುವುದು ತಿಳಿಸುತ್ತಿದ್ದವು. ಶಿವ ತನ್ನ ಜಡೆಯಿಂದ ಅಮೃತದ ಹನಿಗಳನ್ನ ಸುರಿಸಿದ್ದ ಎನ್ನುವುದರ ಅರ್ಥವಾಗಿ ಈ ನಗರ ಮಧುರೈ ಅನ್ನುವ ಹೆಸರನ್ನ ಪಡೆದುಕೊಂಡಿತು. ಮಧುರೈ ಎಂದಾಕ್ಷಣವೇ ಮೀನಾಕ್ಷಿ ಎಂಬ ಹೆಸರು ಉದ್ಘಾರಗೊಳ್ಳುತ್ತದೆ, ಅಷ್ಟೊಂದು ಪ್ರಾಮುಖ್ಯತೆ ಪಡೆದಿದೆ ಮಧುರೈ ಮೀನಾಕ್ಷಿ ದೇವಾಲಯ. ದಕ್ಷಿಣ ಭಾರತದ ಪ್ರಾಚೀನ ನಗರಗಳಲ್ಲಿ ಇದೂ ಕೂಡ ಒಂದು.ಸಂಗಮರ ಸಮಯದ ಇತಿಹಾಸ ಹೊಂದಿದೆ, ತಮಿಳುನಾಡಿನ ಸಾಂಸ್ಕೃತಿಕ ರಾಜಧಾನಿ. ಹಲವಾರು ಪ್ರಮುಖ ರಾಜವಂಶಗಳ ರಾಜಧಾನಿ ಮಧುರೈ. ವಾಗೈ ನದಿಯ ತಟದ ಮೇಲೆ ಹದಿನಾಲ್ಕು ವೈಭವಿಕೃತ ಗೋಪುರಗಳ ಮಧ್ಯೆ ಸ್ಥಿತವಾದ ದೇವಸ್ಥಾನ. ದೇವಸ್ಥಾನದ ಸುತ್ತಲೂ ಕಮಲದ ಆಕಾರದಲ್ಲಿ ಬೆಳೆದ ಸುಸಜ್ಜಿತ ಸುಂದರ ನಗರವದು. ಪಾರ್ವತಿ ಸ್ವರೂಪಿಯಾದ ಮಿನಾಕ್ಷಿಯ ನಗರವಿದು. ತಾಂಜಾವೂರು ಶಿವನದ್ದಾದರೆ ಮಧುರೈ ಮಿನಾಕ್ಷಿಯದ್ದು. ಮಿನಾಕ್ಷಿ ದೇವಿಯೇ ಇಲ್ಲಿಯ ಮಹಾರಾಣಿ. ದೇವಸ್ಥಾನದ ಸುತ್ತಲೂ ಬೆಳದ ನಗರವಾಗಿದ್ದರಿಂದ ಅಲ್ಲಿಯ ನದಿ ನಗರವನ್ನ ಇಬ್ಬಾಗವಾಗಿ ಬೇರ್ಪಡಿಸಿ ಹರಿಯುತ್ತದೆ.ಒಟ್ಟಾರೆ ಚಿಕ್ಕಪುಟ್ಟ ನಾಲ್ಕು ಬ್ರಿಡ್ಜ್