Posts

Showing posts from June, 2021

ಸ್ತಬ್ಧ ಮುಗಿಲು.

ಅದೆಷ್ಟು ಸ್ತಬ್ಧವಿದು ಮುಗಿಲು  ಮುಗಿಯದಷ್ಟು ಆಳ,ಪರಿಚಯಿಸಿದಷ್ಟು ಅಪರಿಚಿತ ಹುಡುಕಿದಷ್ಟು ಸಿಗದ ದೂರ ತೀರಗಳು,ತರ್ಕಗಳು ಪ್ರಸನ್ನತೆಯ ಪರಿಭಾಷೇಯೂ, ಅಷ್ಟೇ ವಿಸ್ಮಯಗಳ ಸಂತೆಯೂ. ನಾ ಹುಡುಕಿದೆ ಎನ್ನುವಷ್ಟರಲ್ಲಿ ನಾನಾ ನಕ್ಷತ್ರಗಳ ತೋರಿಸಿ ಸೂರ್ಯನಿವನು ಎನ್ನುವಷ್ಟರಲ್ಲಿ ಚಂದಿರನ ತೋರಿಸಿ ಒಂದೇ ಬಣ್ಣದಿದು ಎನ್ನುವದೊರಳಗೆ ಸಪ್ತಬಣ್ಣಗಳ ಬಿತ್ತರಿಸಿ ಸದಾ ಮೊಡಗಟ್ಟಿ ಮಳೆಯ ಸುರಿಸುವುದಿ ಮುಗಿಲು. ಅದೆಷ್ಟೋ ನಾ ಮುಟ್ಟಿದೆ ನಾ ಮೆಟ್ಟಿದೆ ಎನ್ನುವ ಅಹಂಕಾರಗಳ ನುಂಗಿ ಇಲ್ಲೊಂದು ಬೆಳಕು ಅಲ್ಲೊಂದು ಕತ್ತಲೆಯ ಕೊಟ್ಟು ಎಲ್ಲೆಲ್ಲಿಯೂ ನಾನೆಯೇ ಎಂಬುದನ ಬಿಗದೆ ಬದುಕುವವರಿಗೆ ಆಶಯಗಳ ಹೊನಲು ಹರಿಸುತಲಿದೆ ಮುಗಿಲು. ನಾನೆತ್ತರ ಬಾನೆತ್ತರ ಏನ್ನಲಾಗದ ಅರಿವ ಮೂಡಿಸಿ ಕಣ್ಣ ಕೊನೆ ಕೊನೆಗೂ ಕಾಣುತ್ತಲೇ ವಿಜೃಂಭಿಸುತ ಎಲ್ಲೆಡೆ ನಾ ಅವರಿಗೂ ಇವರಿಗೂ ಎಂಬಂತ್ತೆ ವ್ಯಾಪಿಸಿ ಎಲ್ಲರ ಮನದಗಲಕ್ಕೂ ಮೂಡಿ ಮೋಹಿಸಿದೆ ಈ ಮುಗಿಲು.                                              ...........ಬಸವ.

ಅನುಕಂಪದ ತ್ರಿಶೂಲ.

ಮೋಕ್ಷ ಮುಂದಿಟ್ಟದ್ದು ನೀನೆಯೇ ಆದರು ಅತ್ತಿತ್ತ ಮಾಯೆಗಳನ್ನೇಕೆ ಹೊಂದಿಸಿಟ್ಟಿರುವೆ? ಜಾರು ನೆಲದ ಮೇಲೆ ಓಡುವವರು ನಾವು ಬಿದ್ದೆದ್ದು  ಓಡುವ ಓಟದಲ್ಲಿ ಬೇಸರವ ನೀಡದಿರು. ಕೊಳೆತ ಕಣ್ಣಿಗೂ ಹೊಳೆಯುವ ಕಾಂತೀಯ ಕರುಣಿಸಿ ಒಮ್ಮೆಲೇ ಕತ್ತಲೆ ಬಯಸುವಂತಹ ಮನಸ್ಸೇಕೆ ಮಾಡಿಟ್ಟೆ? ಬಾಳ ಬದುಕಲೆಂದು ಈಜು ಕಲಿತವರು ನಾವು ಪ್ರಳಯದಲ್ಲಿ ನೂಕಿ ಈಜು ಈಜೇಂದು ನಗದಿರು. ಮುಗಿಯದಷ್ಟು ಮುಂದಾಲೋಚನೆಗಳ ಕೊಟ್ಟು ಅತೀತದಲ್ಲಿಯೇ ನಾವಾವುದರ ಅತಿಥಿಯೆಂದೇಕೆ ಹೇಳಲಿಲ್ಲ? ಮನದ ನೋವುಗಳಲ್ಲಿಯೂ ನಗುವ ಕಲೆತವರು ನಾವು ಸ್ಮಶಾಣದ ಆವರಣದಲ್ಲಿಯೂ ನಗುವ ಕುಚೇಷ್ಟೆಯ ಕೊಡದಿರು.                                                   .............ಬಸವ.