Posts

Showing posts from June, 2020

ಹೊಸತೇನಿಲ್ಲವಯ್ಯ ಇಲ್ಲಿ

ಅಲ್ಲೆಲ್ಲೋ ಅವಿತ ಅದೃಶ್ಯ ನೋವುಗಳ ಹುಡುಕಿ ಸದಾ ಸಂತಸದಲಿರುವ ಹೃದಯಕ್ಕೇಕೆ ಕೇಕೆ? ಮುದುಡುವ ಮಾಯೆಯಲ್ಲೇಕೆ ಸಿಕ್ಕಿಸುವೆ ಸರಾಗವಾಗಿ ಸಾಗುತ್ತಿರುವ ಸಹನೆಯ ಬದುಕ. ಆದದ್ದಾಗಲಿ,ಸಿಕ್ಕದ್ದು ಸಿಗಲಿ ಎನ್ನುವ ಪರಿ ಅರಿತರು ಮತ್ತೇಕೆ ಅಳುವುದು ಅರಿತೇ ಅಳುಕಿದ ಅಮಲುಗಳಿಗೆ? ಹೊಸತೇನಲ್ಲವಲ್ಲ ಇಂದು ಕಂಡ ಬದುಕ ಕಷ್ಟಗಳು ಸುಖದ ಸಿರಿಗೆ ಮೈಯ್ಯೊಡ್ಡಿ ಮರೆತಿರುವೆ ನಿನಿಂದು ಆದಿನದ ಕಷ್ಟಗಳ. ಬಯಕೆಯು ನಿನ್ನದೇ ಅದರ ಬವಣೆಯು ನಿನ್ನದೇ ಅನುಭವಿಸುವಲ್ಲೇಕೆ ಅಂಜಿಕೆ,ಅಳುಕು,ಅಳಲು? ಹಲವು ನಾದದಿ,ರಾಗದಿ ಕೇಳಿ ಪಡೆದಿರುವೆ ಇವು ಕರ್ಮದಿ ಮತ್ತೇಕೆ ಹಿಂಜರಿಯುವೆ ಇಂದು ಇಹದರೊಂದಿಗೆ ಜೀವಿಸಲು? ಮುಪ್ಪೆಂಬ ಮುರಕ್ಷರದ ನಿರಾಸೆ ಮೂಡುವುದರೊಳಗೆ ಮುನ್ನುಗ್ಗು ಮೋಕ್ಷದೆಡೆಗೆ ಎಡೆಬಿಡದೆ ಅರಿತು ಜೀವದ ಸಾಕ್ಷ್ಯ ಮರುಗದಿರು ಮನಕೆ ಸಿಗದ ಮುದಗಳ ನೆನೆದು ಅಲ್ಲದಿರುವ ಆಲಸ್ಯಗಳೆಂದು ಸುಳಿಯವವು ಅವನ ನೆರಳಲ್ಲಿ.                                                             ......ಬಸವ

ಮೋಡದ ಮಳೆ

ಮರೆಯಾದವವು ನಕ್ಷತ್ರಗಳು ಕಗ್ಗತ್ತಲ ಬಾನಿನಲ್ಲಿ ಎಲ್ಲೆಲ್ಲಿಂದಲೋ ಧಾವಿಸಿ ಬಿರುಗಾಳಿಗೆ  ಬಂದಿಳಿದ ಮೊಡಗಳೊಳಗೆ. ಬಿರು ಬಿಸಿಲಿಗೆ ಬಾಡಿದ ಭುವಿಯ ತಣಿಸಲೋ ಗರಿ ಬಿಚ್ಚಿಸಿ ನವಿಲ ಕುಣಿಸಲೋ ಸುಗೊಡುತ್ತ ಸುರಿದೆ ಬಿಟ್ಟಿತದು ಮೊಡದೊಳಗಿಂದ ಮಳೆ. ಮೈ ಸೋಕುತ್ತಿರುವ ಮಳೆಹನಿಗಳು  ಬಿಡವವು ಕಣ್ ತೆರೆಯಲು ಜಿದ್ದಾಜಿದ್ದಿಯಲ್ಲಿ ನಿಸರ್ಗವೊಮ್ಮೆ ಸವಿಯುವ ಕಂಗಳಿಗೆ ಚಡಪಡಿಕೆ. ಅಲ್ಲಲ್ಲಿ ಕಪ್ಪೆಗಳ ವಾಯುವಿಹಾರ ನಿಂತ ನೀರಲ್ಲಿ ಅವರಂತಿರುವರ ಕುಣಿದಾಟ ತಾವವರಿಯದಿದ್ದರು ಸಲ್ಲಿಸಿರುವವು  ಅವನಿಗೆ ಕೃತಜ್ನ್ಯತೆಗಳು.                                                   ........ಬಸವ