ಮೋಡದ ಮಳೆ

ಮರೆಯಾದವವು ನಕ್ಷತ್ರಗಳು ಕಗ್ಗತ್ತಲ ಬಾನಿನಲ್ಲಿ
ಎಲ್ಲೆಲ್ಲಿಂದಲೋ ಧಾವಿಸಿ ಬಿರುಗಾಳಿಗೆ 
ಬಂದಿಳಿದ ಮೊಡಗಳೊಳಗೆ.

ಬಿರು ಬಿಸಿಲಿಗೆ ಬಾಡಿದ ಭುವಿಯ ತಣಿಸಲೋ
ಗರಿ ಬಿಚ್ಚಿಸಿ ನವಿಲ ಕುಣಿಸಲೋ
ಸುಗೊಡುತ್ತ ಸುರಿದೆ ಬಿಟ್ಟಿತದು ಮೊಡದೊಳಗಿಂದ ಮಳೆ.

ಮೈ ಸೋಕುತ್ತಿರುವ ಮಳೆಹನಿಗಳು 
ಬಿಡವವು ಕಣ್ ತೆರೆಯಲು ಜಿದ್ದಾಜಿದ್ದಿಯಲ್ಲಿ
ನಿಸರ್ಗವೊಮ್ಮೆ ಸವಿಯುವ ಕಂಗಳಿಗೆ ಚಡಪಡಿಕೆ.

ಅಲ್ಲಲ್ಲಿ ಕಪ್ಪೆಗಳ ವಾಯುವಿಹಾರ
ನಿಂತ ನೀರಲ್ಲಿ ಅವರಂತಿರುವರ ಕುಣಿದಾಟ
ತಾವವರಿಯದಿದ್ದರು ಸಲ್ಲಿಸಿರುವವು  ಅವನಿಗೆ ಕೃತಜ್ನ್ಯತೆಗಳು.

       
                                          ........ಬಸವ



Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ