Posts

Showing posts from January, 2020

ನಂಬಿಕೆಗಳೆಂಬ ಅಪನಂಬಿಕೆಗಳು

ಕಗ್ಗತ್ತಲಲ್ಲಿ ಬೆಸೆದ ಬದುಕುಗಳು, ಕತ್ತಲಲ್ಲೇ ಮೂಡಿದ ನಂಬಿಕೆಗಳು, ಕತ್ತಲೇರಚಿಯೇ ಹೋದವು ಸುಳ್ಳುಗಳು. ಸುಳ್ಳುಗಳ ಸೆಲೆಯಲ್ಲಿ ಸಿಲುಕಿಸಿ, ನಂಬಿಕೆಗಳೆಂಬ ಬಣ್ಣದ ಮಾತುಗಳಿಗೆ ಬಾಗಿಸಿ, ಸತ್ಯವೆಂದು ಕಾಣದಂತ್ತೆ ಆಡಂಬರದ ಕಣ್ ಪಟ್ಟಿಯ ಕಟ್ಟಿ, ಬೆರಳ ತುದಿಯಲ್ಲೇ ಕುಣಿಸುವರು,ನರ್ತಿಸುವರು, ಬಾಳೆಲ್ಲ ಹೆಣೆದ ನಂಬಿಕೆಗಳ ಕೊಲ್ಲುವರು. ಅಪನಂಬಿಕೆಯ ಹೊಡೆತಕ್ಕೆ ಹೆದರಿ ಕುರುಡನಂತ್ತೆ ನಂಬಿದೆವು ಎಲ್ಲದಕೂ ಬೆದರಿ, ಅಪನಂಬಿಕೆಯ ವಾಸನೆ ಗ್ರಹಿಸಿದರೂ ಮರೆಸಿತ್ತು ಹುಸಿ ವಿಶ್ವವಾಸವೆಂಬ ದುರ್ನಾತ. ಸುಳಿವೇ ಸಿಗದಂತ್ತೆ, ವಿಷ ಭರಿತ ಸರ್ಪದಂತ್ತೆ, ಮೆಲ್ಲನೆ ಮೈಯೆಲ್ಲಾ ಏರಿ ವಿಷಕಾರಿತ್ತು ನಂಬಿಕೆ, ನಂಬಿಕೆ ಎಂಬ ಅಪನಂಬಿಕೆ ಮೆಲ್ಲಗೆ ನಂಜೇರಿ ಮೈಯೆಲ್ಲಾ ನೀಲಗೊಳಿಸಿ ಅಪನಂಬಿಕೆಯಾಗಿಯೇ ಬಿಟ್ಟಿತ್ತು.                                                       .........ಬಸವ

ಜೀವನ

ಬಯಕೆಗಳಿಗಾಗಿ ಓಡಿಸುತ್ತಿರುವ ದುಬಾರಿ ಜಟಕಾ ಗಾಡಿ, ಇಲ್ಲಿ ನಿಂತಷ್ಟು ಸಮಯ ಜಾಸ್ತಿ, ಬಯಕೆಗಳ ಬೆಲೆ ಜಾಸ್ತಿ, ಬದುಕೇ ಮುಗಿದು ಹೋಗುವುದೇ ಹೊರೆತು ಬಯಕೆಗಳಲ್ಲ. ಸಿಗುವುದೆಂಬ ಸಿಗದಿರುವುದರ ಭ್ರಮೆಗಳ ಮಧ್ಯೆ ಒಂದೊಂದಾಗಿ ಸಾಕಾರಗೊಂಡದ್ದು ಮಾತ್ರ ಕಾಣ ದೇ ಇರುವ ಕನಸುಗಳು, ಸಿಹಿಯಾಗಿ ಸಿಕ್ಕ ಕನಸುಗಳು ಕಹಿಯಾಗಿ ಕಲಿಸಿಯೇ ಹೋದವು ಮತ್ತೆಂದು ಸಿಗಲಾರೆನೆಂದು. ಬೇಡಿಕೆಗಳೇ ಇಡದೆ ಹತ್ತಿ ಮುನ್ನುಗ್ಗಬೇಕಿದೆ ಇಂದು, ಬಯಸಿದ್ದು ಕಾಣದಾದರೇನು ಇಂದು? ಕಂಡಿದ್ದರಲ್ಲೇ ಸ್ವರ್ಗ ಕಾಣುವಂತಿರಲಿ ಬದುಕು, ಹುಸಿ ಅಪೇಕ್ಷೇಗಳ ನಿರೀಕ್ಷೆಯಲ್ಲಿ ವರ್ಣರಂಜಿತ ವರ್ತಮಾನ ಹಾಳಾಗದಿರಲಿ, ನಿರಾಸೆಗೊಳ್ಳದಿರಲಿ. ನುಡಿಯದ ಮೂಖನಂತ್ತೆ, ಕಾಣದ ಕುರುಡನಂತ್ತೆ, ಜಾರಿ ಬಿಡಬೇಕಿದೆ ಅಂದೊಂದು ದಿನ ಕನಸೇ ಕಾಣದ ನಿದ್ರೆಗೆ. ಹಗಲಲ್ಲೇ ಕಂಡು ಕಾಣದ ಕನಸುಗಳ ಸ್ಮರಿಸಿ, ಕತ್ತಲೆಯ ಗೋಡೆಗಳಿಂದ ಕಣ್ಣೀರ ಸುರಿಸಿ, ಎಲ್ಲರಿಗಿಂತಲೂ ಚೆಂದ ನನ್ನ ದೇ ಬದುಕೆಂದು ನಕ್ಕೂ ನಲಿಯಬೇಕಷ್ಟೆ ಇಂದು.                                           ............ಬಸವ

ನಂಬಿಕೆಯ ಬಿಂಬಗಳಲ್ಲಿ

ಹೊಸತೆಂಬ ಅನುಕಂಪದ ಆದರಕ್ಕೆ, ಬಿಟ್ಟು ಕೊಡಲಾಗದ ಬುದ್ಧಿಯ ಮೂಕದಾಟಕ್ಕೆ, ಬಲಿಯಾದದ್ದು ಮಾತ್ರ ಬಯಲೇ ಕಾಣದ ಮನಸ್ಸು. ತನ್ನವರು ಎಂಬ ನಂಬಿಕೆಯಲ್ಲಿ ಎಡೆ ಬಿಡದೆ ನುಡಿದಿದೆ ಮನಸ್ಸಿಲ್ಲಿ, ಕಾಣದೆ ಹೋದಲ್ಲಿ ನಂಬಿಕೆಯ ಬಿಂಬಗಳು ನೂರೆಂಟು ಆತಂಕಗಳ ಸೆಲೆಯಲ್ಲಿ ಚಿತ್ತದ ಚಿತ್ರಗಳು. ಹೊಸತಾದ ಮುಖದೊಡಗಿನ ಒಡನಾಟ ಬಾರದ ಭಾಷೆಗೂ ತಲೆ ಅಲ್ಲಾಡಿಸುತ್ತಿತ್ತು ಅಂದು, ಇಂದೇಕೋ ನನ್ನವರಲ್ಲವೆಂಬ ದೂರದ ಗಾಳಿಗೆ!! ಕಿರುಚಿ ಚಿರಾಡಿದರು ಕೇಳಿಯು ಕೆಳದಂತ್ತೆ ನಟಿಸುತ್ತಿದೆ ಇಂದು. ಈಗಿಗಲೇ ಮೂಡಿದ ಇಳಿ ತಂಪ ಸಂಜೆ ನೋಡು ನೋಡುತ್ತಲೇ ಕಗ್ಗತ್ತಲಾಗಿತ್ತು... ಬೆತ್ತಲಾಯಿತು ಹಲವು ಸತ್ಯಗಳ ಸಂಪತ್ತು ನಂಬಿಕೆ ದ್ರೋಹವೆಂಬ ಹೆಗಲೇರಿ ಬಂದೇಬಿಟ್ಟಿತ್ತು ವಿಪತ್ತು.                                           .....................ಬಸವ