ಜೀವನ

ಬಯಕೆಗಳಿಗಾಗಿ ಓಡಿಸುತ್ತಿರುವ ದುಬಾರಿ ಜಟಕಾ ಗಾಡಿ,
ಇಲ್ಲಿ ನಿಂತಷ್ಟು ಸಮಯ ಜಾಸ್ತಿ,
ಬಯಕೆಗಳ ಬೆಲೆ ಜಾಸ್ತಿ,
ಬದುಕೇ ಮುಗಿದು ಹೋಗುವುದೇ ಹೊರೆತು ಬಯಕೆಗಳಲ್ಲ.

ಸಿಗುವುದೆಂಬ ಸಿಗದಿರುವುದರ ಭ್ರಮೆಗಳ ಮಧ್ಯೆ
ಒಂದೊಂದಾಗಿ ಸಾಕಾರಗೊಂಡದ್ದು ಮಾತ್ರ
ಕಾಣದೇ ಇರುವ ಕನಸುಗಳು,
ಸಿಹಿಯಾಗಿ ಸಿಕ್ಕ ಕನಸುಗಳು
ಕಹಿಯಾಗಿ ಕಲಿಸಿಯೇ ಹೋದವು
ಮತ್ತೆಂದು ಸಿಗಲಾರೆನೆಂದು.

ಬೇಡಿಕೆಗಳೇ ಇಡದೆ ಹತ್ತಿ ಮುನ್ನುಗ್ಗಬೇಕಿದೆ ಇಂದು,
ಬಯಸಿದ್ದು ಕಾಣದಾದರೇನು ಇಂದು?
ಕಂಡಿದ್ದರಲ್ಲೇ ಸ್ವರ್ಗ ಕಾಣುವಂತಿರಲಿ ಬದುಕು,
ಹುಸಿ ಅಪೇಕ್ಷೇಗಳ ನಿರೀಕ್ಷೆಯಲ್ಲಿ ವರ್ಣರಂಜಿತ
ವರ್ತಮಾನ ಹಾಳಾಗದಿರಲಿ, ನಿರಾಸೆಗೊಳ್ಳದಿರಲಿ.

ನುಡಿಯದ ಮೂಖನಂತ್ತೆ,
ಕಾಣದ ಕುರುಡನಂತ್ತೆ,
ಜಾರಿ ಬಿಡಬೇಕಿದೆ ಅಂದೊಂದು ದಿನ
ಕನಸೇ ಕಾಣದ ನಿದ್ರೆಗೆ.

ಹಗಲಲ್ಲೇ ಕಂಡು ಕಾಣದ ಕನಸುಗಳ ಸ್ಮರಿಸಿ,
ಕತ್ತಲೆಯ ಗೋಡೆಗಳಿಂದ ಕಣ್ಣೀರ ಸುರಿಸಿ,
ಎಲ್ಲರಿಗಿಂತಲೂ ಚೆಂದ ನನ್ನದೇ ಬದುಕೆಂದು
ನಕ್ಕೂ ನಲಿಯಬೇಕಷ್ಟೆ ಇಂದು.

                                          ............ಬಸವ

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ