ನೆನಪುಗಳದ್ದು ಸ್ವೇಚ್ಛಾಚಾರ.
ನೆನಪುಗಳೇಕೆ ಹೀಗೆ?
ಬೇಕೆಂದರೂ ಬಾರದೆ
ಬೇಡವೆಂದರೂ ಬಂದು ಪೀಡಿಸುತ
ಅದೆಷ್ಟೋ ಬಾರಿ ಪ್ರಶ್ನಿಸಿದರೂ ಉತ್ತರ ಕೊಡದೆ
ತಮ್ಮದೇ ಹಳೆ ಚಾಳಿ ಮುಂದುವರೆಸುವವು.
ಹಗಲಿಗೋ ಇರುಳ ಚೆಲ್ಲಿ
ಇರುಳಲ್ಲಿ ಹಗಲ ತೇಲಿಸಿ
ತೆಂವಿಸಿಹವು ಕಣ್ಣುಗಳ, ತಳಮಳಸಿ ಮನಸ್ಸು.
ಮರೆತೆನೆಂದಾಗಲೇ ಅಸ್ತಿತ್ವದ ಮೆರವಣಿಗೆಯ ಹೂಡುವವು
ತಾವುಗಳೇ ಇಲ್ಲಿ ರಾಯಭಾರಿಯೆಂದು ಬೀಗುವವು.
ನೆನಪುಗಳವು ಸಹಜ ಅಸಹಜಗಳ ಚರ್ಚಿಸುವವು
ನಟಿಸುವವು ತಮಗೇ ಬೇಕಾದ ರಂಗಮಂಟಪ ನಿರ್ಮಿಸಿ
ನಾನೊಲ್ಲದ ಕೇಳದೆ, ತಾನೊಲಿದುದೇ ತೆರೆಗೆ ಎನ್ನುವವು
ತಾವಾಗುವವು ತಮಗೇ ಬೇಕಾದ ತೆರತೆರನಾಗಿ
ಆವರಿಸುವವು ಹಗಲಿರುಳ ಕನಸಿಗೆ ತಾವೇ ಅಧಿಪತಿಯೆಂದು.
ನೆನಪುಗಳದ್ದು ಎಂತಹ ಸ್ವೇಚ್ಛಾಚಾರ?
ಹಿತವನ್ನೇ ಆಲಿಂಗಿಸುವೆನೆಂಬುದಕೆ ಹಿಯಾಳಿಸಿ
ಹ್ಯೆಯವಾಗಿ ಹೆಣಗುವಾಗ ಒಂದೊಮ್ಮೆ ಹಾಯೆನಿಸಿಹೋಗುವವು
ಕ್ಷಣಕ್ಕಾದರೂ ತಾವು ಹೀಗೂ ಎಂಬುದ ತೋರಲು
ತಿಳಿಯಾಗಿ ಹಿತ ತೇಲಿಸುವವು
ನೆನಪುಗಳವು ಬಿಗುತ್ತಿರುವವು ಸ್ವೇಚ್ಛಾಚಾರದ ಪರಮಾವಧಿಯಲ್ಲಿ.
.......ಬಸವ.
Nice one ...👍
ReplyDelete👌
ReplyDeleteMemories always hurt 🤕
ReplyDeleteMemories can make u happy sometimes and sad at sometimes.
ReplyDelete