Posts

Showing posts from November, 2021

ಅವನಿರುವ ಕುಟೀರದೆಡೆಗೆ.

ಬಾಳ ಬಂಡಿಯಿದು ಸಾಗುತ್ತಲೇ ಇರುವುದು, ಅದನ್ನೋಡಿಸುವುದೂ ಬೇಡ ನಿಲ್ಲಿಸುವುದು ಬೇಡ ತಿಳಿದ ತಿರದೆಡೆಗೆಯೇ ದೂಡುವ ಬಂಡಿಯದು, ಸುಮ್ಮನೆ ಸಾಗುತ್ತಿರಬೇಕದರಲಿ ನಾವು ನೀವು, ಓಡಿಸುತ್ತಿರುವವನು ಅವನು ತಾನೇ ತೋರಿಸಿದ ಹಾದಿಯಡೆಗೆ. ತಗ್ಗಿನಲೊಮ್ಮೆ ಕುಲುಕುವುದು ಜರಿಯಿವುದು ಜಜ್ಜುವುದು, ಒಮ್ಮೊಮ್ಮೆ ಪಾತಾಳದಕಡೆ ವಾಲುವುದು ಬಿದ್ದಂತ್ತಾಗುವುದು, ಇಳಿಜಾರಿನಲ್ಲಿ ಮತ್ತೆ ಮೆತ್ತಗೆ ಓಡುವುದು  ಸುಖ ಶಾಂತಿಯ ಹಾಡುವುದು, ಒಮ್ಮೊಮ್ಮೆ ಅಳಿಸುವುದದು ನಗಿಸುವುದದು ಕಾಲಕಾಲಕ್ಕೆ, ಸುಮ್ಮನೆ ಸಮ್ಮತಿಸಿ ಸಾಗಬೇಕು  ಅವನ ಕೈಯಲ್ಲಿರಲು ಚಾಟಿ. ಅತ್ತಿತ್ತ ಯಾರೋ ಕರೆದಂತ್ತೆ,ಮಾಯೆಗಳು ಕುಣಿದಂತ್ತೆ, ಅಲ್ಲೇನೋ ಅಂದವಂತ್ತೆ ಚಂದವಂತ್ತೇ ಚಿತ್ತಾರವಂತ್ತೆ, ಚಿತ್ತದಲ್ಲೆಲ್ಲಾ ಚಿಂತೆ ಮೂಡಿಸಿ ಸೆಳೆಯುವವಂತ್ತೇ, ಅತ್ತಲೋ ಇತ್ತಲೋ ಇಣುಕದೆ ಕೆಣಕದೆ ವೈಮನಸ್ಸು ಮೆಲ್ಲಗೆ ಸಾಗಬೇಕು ಮುಕುತಿಯಡೆಗೆ ಅದು ಅವನಿರುವ ಕುಟೀರದೆಡೆಗೆ.                                              ...........ಬಸವ.

ಬೇಗುರು ಪಂಚನಾಗಲಿಂಗೇಶ್ವರ ಸ್ವಾಮಿ.

ಅದಾಗಲೇ ನಾವು ಕೂಡ ವೀಕೆಂಡ್ ಗಾಗಿ ಕಾದು ಕುರುವ ಬೆಂಗಳೂರಿಗರಾಗಿದ್ವಿ. ಬೆಂಗಳೂರು ತನ್ನ ಅಷ್ಟ ದಿಕ್ಕುಗಳಿಗೂ ಬಲಿಷ್ಠ ಭುಜಗಳಂತ್ತೆ ಚಾಚಿಕೊಳ್ಳುತ್ತಲೇ ಇದೆ, ಆಧುನಿಕ ನಗರಳ ವೈಭವದ ಒಡೆವಗಳು ಧರಿಸುತ್ತಲೇ ಇದೆ, ಆಧುನಿಕ ನಗರಗಳಂತ್ತೆ ಇದೂ ಕೂಡ ಹಲವಾರು ಆಧುನಿಕ ಹೆಸರುಗಳನ್ನ ಪಡೆದುಕೊಂಡಾಗಿದೆ, ಇತನಮಧ್ಯೆ ಬೆಂಗಳೂರಿನ ಇತಿಹಾಸವನ್ನಾಗಲಿ ಅಥವಾ ಈ ನಗರದ "ಆ" ದಿನಗಳನ್ನಾಗಿ ಅಥವಾ ಅದರ ಬಗ್ಗೆಯಾಗಲಿ ಕೂತು ಯೋಚಿಸಲು ಇಲ್ಲಿ ಕಟ್ಟೆಗಳೂ ಇಲ್ಲ, ಕಟ್ಟೆಗಳಿಗೆ ಓರಗಿ ಕೂತು ಬೀಡಿ ಬಿಗಿಯುತ್ತ ಹರಟೆ ಹೊಡೆಯುವಂತಹ ಮುದುಕರೂ ಇಲ್ಲ.   ಬೆಂಗಳೂರು ಕೇವಲ ಆಧುನಿಕ ನಗರವಲ್ಲದೆ, ಇದೂ ಕೂಡ ಒಂದು ಐತಿಹಾಸಿಕ ಪುರಾತನ ನಗರಿ ಎಂದು ಬಿಂಬಿತಗೊಳ್ಳಲು ಅಲ್ಲಲ್ಲಿ ಕಂಡುಬರುವ ಪುರಾತನ ದೇವಸ್ಥಾನಗಳು. ಅವುಗಳ ಸಾಲಿನಲ್ಲಿ ಬೇಗುರಿನ ಪಂಚನಾಗಲಿಂಗೇಶ್ವರ ದೇವಸ್ಥಾನವೂ ಒಂದು, ಇತಿಹಾಸದ ಕೆಲ ಪುಟಗಳು ಹೊರಳಿಸಿದ್ದಲ್ಲಿ ಗಂಗರು ಮತ್ತು ಚೋಳರ ಸಮಯದ ಹೆಗ್ಗುರುತಿನಲ್ಲಿ ಬೇಗುರಿನ ಹೆಸರು ಕೇಳಿಬರುತ್ತದೆ. ಅಂತೆಯೇ ಬೇಗುರಿನ ಪಂಚನಾಗಲಿಂಗೇಶ್ವರ ದೇವಾಸ್ಥಾನಕ್ಕೆ ಹೋಗಿ ಬರುವುದಾಗಿ ಪ್ಲಾನ್ ಮಾಡಲಾಯಿತು. ಬೆಂಗಳೂರಿಗೆ ಸೂರ್ಯ ಸಂಬಂಧವೇ ಇಲ್ಲವೇನೋ ಅನ್ನುವಂತ್ತೆ ದಿನವಿಡೀ ಮೋಡದ ಒಳಗೆ ಮರೆಯಾಗಿ ಬಿಟ್ಟಿದ್ದ, ಅದರಜೊತೆಗೆ ಬೆಂಗಳೂರಿಗೆ ಅವಾಗವಾಗ ಮಲೆನಾಡಾಗುವ ಆಸೆ, ಅಂತೇಯೇ ಹಲವು ಬಾರಿ ಕೆಲವು ದಿನಗಳ ಮಟ್ಟಿಗೆ ಸಾಧಿಸಿಯೂ ತಿರುತ್ತದೆ, ಅಂತಹದೇ ಸಮಯಕ್ಕೆ ಇತ್ತೀಚಿನ ದ