ಬೇಗುರು ಪಂಚನಾಗಲಿಂಗೇಶ್ವರ ಸ್ವಾಮಿ.

ಅದಾಗಲೇ ನಾವು ಕೂಡ ವೀಕೆಂಡ್ ಗಾಗಿ ಕಾದು ಕುರುವ ಬೆಂಗಳೂರಿಗರಾಗಿದ್ವಿ. ಬೆಂಗಳೂರು ತನ್ನ ಅಷ್ಟ ದಿಕ್ಕುಗಳಿಗೂ ಬಲಿಷ್ಠ ಭುಜಗಳಂತ್ತೆ ಚಾಚಿಕೊಳ್ಳುತ್ತಲೇ ಇದೆ, ಆಧುನಿಕ ನಗರಳ ವೈಭವದ ಒಡೆವಗಳು ಧರಿಸುತ್ತಲೇ ಇದೆ, ಆಧುನಿಕ ನಗರಗಳಂತ್ತೆ ಇದೂ ಕೂಡ ಹಲವಾರು ಆಧುನಿಕ ಹೆಸರುಗಳನ್ನ ಪಡೆದುಕೊಂಡಾಗಿದೆ, ಇತನಮಧ್ಯೆ ಬೆಂಗಳೂರಿನ ಇತಿಹಾಸವನ್ನಾಗಲಿ ಅಥವಾ ಈ ನಗರದ "ಆ" ದಿನಗಳನ್ನಾಗಿ ಅಥವಾ ಅದರ ಬಗ್ಗೆಯಾಗಲಿ ಕೂತು ಯೋಚಿಸಲು ಇಲ್ಲಿ ಕಟ್ಟೆಗಳೂ ಇಲ್ಲ, ಕಟ್ಟೆಗಳಿಗೆ ಓರಗಿ ಕೂತು ಬೀಡಿ ಬಿಗಿಯುತ್ತ ಹರಟೆ ಹೊಡೆಯುವಂತಹ ಮುದುಕರೂ ಇಲ್ಲ.  

ಬೆಂಗಳೂರು ಕೇವಲ ಆಧುನಿಕ ನಗರವಲ್ಲದೆ, ಇದೂ ಕೂಡ ಒಂದು ಐತಿಹಾಸಿಕ ಪುರಾತನ ನಗರಿ ಎಂದು ಬಿಂಬಿತಗೊಳ್ಳಲು ಅಲ್ಲಲ್ಲಿ ಕಂಡುಬರುವ ಪುರಾತನ ದೇವಸ್ಥಾನಗಳು. ಅವುಗಳ ಸಾಲಿನಲ್ಲಿ ಬೇಗುರಿನ ಪಂಚನಾಗಲಿಂಗೇಶ್ವರ ದೇವಸ್ಥಾನವೂ ಒಂದು, ಇತಿಹಾಸದ ಕೆಲ ಪುಟಗಳು ಹೊರಳಿಸಿದ್ದಲ್ಲಿ ಗಂಗರು ಮತ್ತು ಚೋಳರ ಸಮಯದ ಹೆಗ್ಗುರುತಿನಲ್ಲಿ ಬೇಗುರಿನ ಹೆಸರು ಕೇಳಿಬರುತ್ತದೆ. ಅಂತೆಯೇ ಬೇಗುರಿನ ಪಂಚನಾಗಲಿಂಗೇಶ್ವರ ದೇವಾಸ್ಥಾನಕ್ಕೆ ಹೋಗಿ ಬರುವುದಾಗಿ ಪ್ಲಾನ್ ಮಾಡಲಾಯಿತು.

ಬೆಂಗಳೂರಿಗೆ ಸೂರ್ಯ ಸಂಬಂಧವೇ ಇಲ್ಲವೇನೋ ಅನ್ನುವಂತ್ತೆ ದಿನವಿಡೀ ಮೋಡದ ಒಳಗೆ ಮರೆಯಾಗಿ ಬಿಟ್ಟಿದ್ದ, ಅದರಜೊತೆಗೆ ಬೆಂಗಳೂರಿಗೆ ಅವಾಗವಾಗ ಮಲೆನಾಡಾಗುವ ಆಸೆ, ಅಂತೇಯೇ ಹಲವು ಬಾರಿ ಕೆಲವು ದಿನಗಳ ಮಟ್ಟಿಗೆ ಸಾಧಿಸಿಯೂ ತಿರುತ್ತದೆ, ಅಂತಹದೇ ಸಮಯಕ್ಕೆ ಇತ್ತೀಚಿನ ದಿನಗಳು ಸಾಕ್ಷಿಯಾಗಿದ್ದವು, ಎಲ್ಲೆಡೆ ಮೋಡ ಆವರಿಸಿ ಮಂದ ಬೆಳಕಿನಲ್ಲಿ ಬಿಗುತ್ತಿತ್ತು ಬೆಂಗಳೂರು, ವಾರ ರವಿವಾರವಾಗಿದ್ದರೂ ರವಿ ಇರಲಿಲ್ಲವಷ್ಟೇ, ಒಳ್ಳೆ ಸಮಯ ಮತ್ತು ಒಳ್ಳೆ ವೇದರ್ರು ಅಂತ ಹೇಳಿ ಬೇಗುರಿಗೆ ಹೊರಡಬೇಕೆಂದು ಸಿದ್ಧಲಿಂಗನಿಗೆ ಸಿದ್ಧಗೊಳಿಸಿದ್ದಾಯ್ತು, ಅವನೊಂದಿಗೆ ಜಿನ್ನಣ್ಣನೂ ಚಪ್ಪಲಿ ಧರಿಸಿ ಸಿದ್ಧನಿದ್ದ.

ಬೊಮ್ಮನಹಳ್ಳಿ ಇಂದ ಬಲಕ್ಕೆ ಐದು ಕಿಲೋ ಮೀಟರ್ ದೂರದಲ್ಲಿ ಬೇಗುರು. ಬೇಗುರಿನ ಮಧ್ಯದಲ್ಲಿಯೇ ಇರುವ ಕೆರೆಯ ದಡದ ಮೇಲೆ ಸುತ್ತ ನಾಲ್ಕು ರಾಜ ಗೋಪುರಗಳ ಮಧ್ಯೆ ಇತಿಹಾಸಿಕ ಪಂಚನಾಗಲಿಂಗೇಶ್ವರ ದೇವಸ್ಥಾನ. ಒಟ್ಟು 5 ಲಿಂಗಗಳನ್ನ ಒಳಗೊಂಡ ದೇವಸ್ಥಾನ ಇದಾಗಿದ್ದು, ಇಲ್ಲಿ ನಾಗೇಶ್ವರ,ನಗರೇಶ್ವರ,ಚೋಳೆಶ್ವರ,ಕಾಳಿಕಾಮಟೇಶ್ವರ ಮತ್ತು ಕರ್ಣೇಶ್ವರ ಲಿಂಗಗಳಿವೆ. ಪ್ರತಿಯೊಂದು ಲಿಂಗವೂ ಒಂದೊಂದು ಗರ್ಭಗೃಹದೊಂದಿಗೆ ಶಿಖರಗಳನ್ನ ಹೊಂದಿವೆ, ಮುಖ್ಯ ದೇವಸ್ಥಾನವಾಗಿ ಪಾರ್ವತಿ ಸಮೇತ ನಾಗೇಶ್ವರ ಸ್ವಾಮಿ ದೇವಸ್ಥಾನವಿದೆ, ಅದೇ ಒಳಪ್ರಾಂಗಣದಲ್ಲಿ ಚೋಳೇಶ್ವರ ಸ್ವಾಮಿ ದೇವಸ್ಥಾನ ಮತ್ತು ಬಲತುದಿಯ ಕೆಳಗೆ ಉತ್ತರಾಭಿಮುಖವಾಗಿ ಪಾರ್ವತಿ ದೇವಸ್ಥಾನವಿದೆ. ಎಡತುದಿಯ ಕೊನೆಯಲ್ಲಿ ನಗರೇಶ್ವರ ಸ್ವಾಮಿ ಮತ್ತು ಕಾಳಿಕಾಮಟೇಶ್ವರ ಸ್ವಾಮಿ ದೇವಸ್ಥಾನಗಳು ಪ್ರತ್ಯೇಕವಾಗಿ ಕಂಡು ಬರುತ್ತವೆ ಮತ್ತು ಬಲತುದಿಯ ಹೊರಗಡೆ ಪ್ರತ್ಯೇಕವಾಗಿ ಕರ್ಣೇಶ್ವರ ದೇವಸ್ಥಾನ ಕಂಡು ಬರುತ್ತದೆ.

ನಾಗೇಶ್ವರ ಮತ್ತು ನಗರೇಶ್ವರ ಸ್ವಾಮಿ ದೇವಸ್ಥಾನಗಳನ್ನ ಗಂಗರ ರಾಜರಾಗಿದ್ದ ಮೊದಲನೇ ನೀತಿಮಾರ್ಗ ಮತ್ತು ಎರಡನೇ ನೀತಿಮಾರ್ಗರು ನಿರ್ಮಿಸಿದ್ದರು ಎಂದು ಹೇಳುತ್ತದೆ ಇತಿಹಾಸ, ಇನ್ನುಳಿದ ಲಿಂಗಗಳನ್ನ ಚೋಳರು ನಿರ್ಮಿಸಿದ್ದಾರೆ. ದೇವಸ್ಥಾನವು ಗ್ರಾನೈಟ್ ಕಲ್ಲಿನಿಂದ ಮಾಡಲ್ಪಟ್ಟಿದ್ದು,ಗೋಡೆಗಳ ಮೇಲಿನ ಶಿಲ್ಪಕಲೆ ಮತ್ತು ಶಿಖರಗಳು ಚೋಳರ ಸಮಯದ ವಾಸ್ತುಶಿಲ್ಪವನ್ನ ಬಿಂಬಿಸುತ್ತವೆ. ಸುತ್ತಲಿನ ರಾಜಗೋಪುರಗಳು ಇತ್ತೀಚಿನಲ್ಲಿ ನಿರ್ಮಾಣಗೊಂಡಿವೆ, ಸುಮಾರು 40 ಕೋಟಿ ವೆಚ್ಚದಲ್ಲಿ ಇವುಗಳು ನಿರ್ಮಾಣಗೊಳ್ಳುತ್ತಿದ್ದು ಸರ್ಕಾರದ ಸಹಾಯವಿಲ್ಲದೆ, ಗೋಪುರ ನಿರ್ಮಾಣ ಸಮಿತಿ ರಚಿಸಿಕೊಂಡು ಭಕ್ತರೆ ತಮ್ಮ ಹಣದಿಂದಲೇ ಇವುಗಳನ್ನ ನಿರ್ಮಿಸುತ್ತಿದ್ದಾರೆ, ದಕ್ಷಿಣದ ಗೋಪುರದ ಕಾರ್ಯ ಇನ್ನು ಪೂರ್ಣಗೊಂಡಿಲ್ಲವಾದರೂ  ಇನ್ನುಳಿಯದ ಎಲ್ಲಾಗೋಪುರಗಳು ತಲೆ ಎತ್ತಿ ವಿಜೃಂಭಿಸುತ್ತಿವೆ.

ಎಲ್ಲಾ ಪಂಚಲಿಂಗಗಳು ಪೂರ್ವಾಭಿಮುಖವಾಗಿವೆ. ನಾಗೇಶ್ವರ,ಚೋಳೇಶ್ವರ ದೇವಸ್ಥಾನಗಳನ್ನ ಒಳಗೊಂಡ ಪ್ರಾಂಗಣದಲ್ಲಿ ಮುಖ ಮಂಟಪ,ನವರಂಗ,ಅಂತರಾಳ ಮತ್ತು ಗರ್ಭಗೃಹ ಕಾಣಬಹುದು, ಅಂತರಾಳ ಗರ್ಭಗೃಹ ಮತ್ತೆ ನವರಂಗವನ್ನ ಸಂಪರ್ಕಿಸುತ್ತದೆ.  ಮುಖಮಂಟಪದಲ್ಲಿ ಪದ್ಮಪೀಠದಲ್ಲಿ ನಂದಿ ವಿಗ್ರಹವಾಗಿ ವಿರಮಿಸಿದ್ದಾನೆ, ಒಳಗಡೆಯ ಕಂಬಗಳು ಸಾಮಾನ್ಯರಿತಿಯಲ್ಲೇ ಕಂಡುಬರುತ್ತವೆ,ಇಡೀ ಮಂಟಪದಲ್ಲಿ,ನಾ ಎಲ್ಲೂ ತಲೆ ಎತ್ತಿ ನಿಲ್ಲಲಿಕೆ ಆಗಲಿಲ್ಲ,ಅಷ್ಟು ಕಡಿಮೆ ಎತ್ತರದ ಮಂಟಪಗಳು. ನವರಂಗದ ಒಳಗೋಡೆಯ ಸೂರುಗಳಲ್ಲಿ ಗಂಗರ ಸಮಯದ ಶಿಲ್ಪ ಕಲೆ ಕಾಣಬಹುದು, ಅಷ್ಟದಿಕ್ಪಾಲಕರು ಮತ್ತು ಉಮಾಮಹೇಶ್ವರನ ಕೆತ್ತನೆಗಳು ವಿಶೇಷವಾಗಿ ಗುರುತಿಸಬಹುದು. ಪ್ರವೇಶದ್ವಾರದ ಬಲ ಮತ್ತು ಎಡ ಹೊಸ್ತಿಲುಗಳಲ್ಲಿ ಬಳ್ಳಿಯ ಕೆತ್ತನೆಗಳು ಮತ್ತು ಮೇಲಿನ ಹೊಸ್ತಿಲಿನಲ್ಲಿ ಲಲಿತೆಗಳ ಮಧ್ಯೆ ಗಜಲಕ್ಷ್ಮೀ ಎರಡು ಆನೆಗಳ ಮಧ್ಯೆ ಇರುವ ಕೆತ್ತನೆಗಳು ಕಂಡು ಬರುತ್ತವೆ.

ಇಲ್ಲಿನ ಪ್ರತಿಯೊಂದು ಲಿಂಗವೂ ವಿಶಿಷ್ಟವಾದ ಶಕ್ತಿಯುಳ್ಳ ಲಿಂಗಗಳಾಗಿವೆ,ಅದರಲ್ಲೂ ನಾಗೇಶ್ವರ ಸ್ವಾಮಿ ಲಿಂಗವು ವಿಶಿಷ್ಟವಾದ ತರಂಗಗಳನ್ನ ಹೊರಸೂಸುತ್ತದಂತ್ತೆ, ಹಬ್ಬ ಹುಣ್ಣಿಮೆ ಅಮವಾಸೆಯ ದಿನಗಳಂದು ಇತರಹದ ಶಕ್ತಿ ಹೆಚ್ಚಾಗಿ ಕಂಡು ಬರುತ್ತದೆ, ಅದೇ ಕಾರಣಕ್ಕೆ ಆ ದಿನಗಳಂದು ಲಿಂಗಕ್ಕೆ ಪಂಚಲೋಹದ ಕವಚವನ್ನ ದರಿಸುತ್ತಾರಂತ್ತೆ.  ಹಲವರ ಕುಂದು ಕೊರತೆಗಳನ್ನ ನೀಗಿಸುವ ಮತ್ತು ಇಷ್ಟಾರ್ಥಗಳನ್ನ ಈಡೇರಿಸುವ ದೈವಶಕ್ತಿಗಳು ಇವಾಗಿವೆ ಮತ್ತು ಇದಕ್ಕೆ ಹಲವಾರು ಉದಾಹರಣೆಗಳನ್ನ ಇಲ್ಲಿನ ಸ್ಥಳೀಯರು ಹೇಳುತ್ತಾರೆ. ದೇವಸ್ಥಾನದ ಆವರಣದಲ್ಲಿ ಅನೇಕ ಕೆತ್ತನೆಗಳು ಕಾಣಬಹುದು. 

ಬೇಗುರು ಬೆರಗು ಮೂಡಿಸುವ ವಿಷಯವೆಂದರೆ ಇಲ್ಲಿನ ಶಾಸನ, ಕ್ರಿ.ಶ 890 ರಲ್ಲಿ ನಡೆದು ಬೆಂಗಳೂರು ಯುದ್ಧದ ಉಲ್ಲೇಖ ಈ ಶಾಸನ ಮಾಡುತ್ತದೆ.  ಬೆಂಗಳೂರಿನ ಮೊದಲ ಹೆಸರು ಬೆಂದಕಾಳೂರು ಅನ್ನುವದನ್ನ ಅಲ್ಲಗಳೆಯುವ ಶಾಸನ ಇದಾಗಿದೆ, ಸುಮಾರು 1300 ವರ್ಷಗಳ ಹಿಂದೆಯೂ ಬೆಂಗಳೂರು ಬೆಂಗಳುರಾಗಿಯೇ ಇತ್ತು ಅನ್ನುವದನ್ನ ಪ್ರತಿಪಾದಿಸುವ ಶಾಸನ ಇದಾಗಿದ್ದು ತನ್ನಲ್ಲಿಯೇ ತಾ  ವಿಶೇಷತೆಯನ್ನ ಹೊಂದಿದೆ.

ಬೇಗುರಿನ ಕೆರೆಯ ಮಧ್ಯದಲ್ಲಿ ಶಿವನ 22 ಅಡಿಯ ಮೂರ್ತಿನ್ನ ನಿರ್ಮಿಸಲಾಗಿದ್ದು,ಇನ್ನು ಅನಾವರಣಗೊಳ್ಳಬೇಕಿದೆ, ಇದೂ ಸಹ ದೇವಸ್ಥಾನ ಸಮಿತಿಯಿಂದಲೇ ನಿರ್ಮಾಣಗೊಳ್ಳುತ್ತಿದೆ, ಅದಲ್ಲದೆ ಕೆರೆಯ ಸ್ವಚ್ಛತೆಯ ಜವಾಬ್ದಾರಿಯೂ ಸಮಿತಿ ಕೈಗೆತ್ತಿಕೊಂಡಿದೆ. ಇದಾದಮೇಲೂ ದತ್ತಿ ಇಲಾಖೆ ದೇವಸ್ಥಾನದ ಹುಂಡಿಯ ಮೇಲೆ ಕಣ್ಣು ಹಾಕದೆ ಇದ್ರೆ ಸಾಕು.
ಸ್ವಲ್ಪ ಹೊತ್ತು ಅಲ್ಲೇ ಕೂತು,ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾಯ್ತು. ಹಳ್ಳಿಗಳಲ್ಲಿ ದೇವಸ್ಥಾನದ ಆವರಣದಲ್ಲಿ ಕೂತು ಪಂಚಾಯಿತಿ ನಡೆಸುವ ಸನ್ನಿವೇಶಗಳ ಅಣುಕು ಸಹ ಮಾಡಿದ್ದಾಯ್ತು, ದೇವಸ್ಥಾನದ ಸುತ್ತೆಲ್ಲಾ ತಿರುಗಾಡಿ ಫೋಟೋ ಕ್ಲಿಕ್ಕಿಸಿ, ಶಿಲ್ಪಿಗಳ ಶ್ರಮ ಮತ್ತು ಚಾತುರ್ಯವನ್ನ ಮನದಲ್ಲೇ ನೆನೆದು ಕೃತಜ್ಞತೆಯೂ ಹೇಳಿದ್ದಾಯ್ತು, ಮನಸ್ಸು ಸಮಚಿತ್ತವಾಗಿತ್ತು,ಮನದೊಳಗೆ ಧನ್ಯತಾ ಭಾವನೆ ಮನೆಮಾಡಿತ್ತು. ಮೇಲೆದ್ದು ಕೈ ಮುಗಿದು ಹೊರಡಲು ಸಿದ್ದರಾದ್ವಿ.

ದೇವಸ್ಥಾನದ ಉತ್ತರ ದಿಕ್ಕಿನೆಡೆಗೆ ವಾಲಿ ನೋಡಿದ್ರೆ ಉದ್ದನೆಯ ಎರಡು ಮಿನಾರ್ ಗಳ ಮೇಲೆ ಶಿಲುಬೆಗಳು. ಬ್ರಿಟಿಷರ ಮಂತಾತರಕ್ಕೆ ಕೇವಲ ಮದ್ರಾಸ್ ಅಷ್ಟೇ ಅಲ್ಲದೆ ಬೆಂಗಳೂರು ಸಹ ಬಲಿಯಾಗಿದೆ ಅನ್ನುವದಕ್ಕೆ ಇಂತಹ ಚರ್ಚ್ ಗಳು ಬೆಂಗಳೂರಿನಲ್ಲೆಲ್ಲಾ ಸುಮಾರು ಕಂಡುಬರುತ್ತವೆ, ರೈಸ್ ಬ್ಯಾಗ್ ಹಂಚಿಕೆ ಜೋರಾಗಿಯೇ ನಡೀತಿದೆ ಅನ್ನುವದಕ್ಕೆ ಇವೆಲ್ಲಾ ದೃಷ್ಟಾಂತಗಳು. ಇದನ್ನ ಕಂಡದ್ದೆ ಸಾಕು, ಸೆಕ್ಯುಲರ್ ಸಿದ್ಲಿಂಗ್ ಸಾಹೇಬರು "ನಡ್ರಿ ಮಸ್ತ್ ಅದಾ ಹೋಗಿ ಬರಮ್" ಅಂತ ರಾಗ ಎಳೆದೆ ಬಿಟ್ಟಿದ್ದ. "ಐತಿಹಾಸಿಕವಾಗಿ ಅದ್ರಾಗ್ ಎನ್ ಅದಾ? ಏನೂ ಇಲ್ಲ,ಯಾಕ್ ಹೋಗ್ಬೇಕು ಸುಮ್ನೆ" ಹೋಗೋದು ಬೇಡಾ ಅಂತ ನಮ್ಮ ವಾದವಾಗಿತ್ತು, "ಹಂಗೇನ್ ಇಲ್ಲಾ, ಎಲ್ಲಾನೂ ನೋಡ್ಬೇಕ್ ಆಗ್ತದಾ, ಸ್ಪೆಷಲ್ಲಿ ನೀವ್ ಏನಾ ನಾ ಬರೀಬೇಕು ಅನ್ನೋರು ಮೊದ್ಲು ಹಿಂತವೆಲ್ಲಾ ನೋಡಲೇಬೇಕು" ಅಂತ ಪಟ್ಟು ಹಿಡಿದುಬಿಟ್ಟಿದ್ದ, ಅವನು ಹೋಗಲೇಬೇಕು ಅಂದಿದಕ್ಕೋ ಅಥವಾ ನಮ್ಮೆಲ್ಲರ ಜಿಜ್ಞಾಸೆಗೋ ಹೋಗಬೇಕೆಂದು ಹೊರಟ್ವಿ. 

ದೂರದಿಂದ ಕೇವಲ ಉದ್ದನೆಯ ಮಿನಾರ್ ತರಹದ ಕಟ್ಟಡಗಳು ಕಂಡಿದ್ದವಷ್ಟೇ, ಸಮೀಪ ಹೋದಷ್ಟು ಸ್ಪಷ್ಟವಾಗಿ ಒಂದು ದೊಡ್ಡ ಡೂಮ್ ಮತ್ತೆ ಪಕ್ಕದಲ್ಲಿ ಎರಡು ಚಿಕ್ಕ ಡೂಮ್ ಗಳು, ಎಕ್ಕರೆಗಟ್ಟಲೇ ಜಾಗದಲ್ಲಿ ಕೋಟ್ಯಂತರ ರೂಪಾಯಿಯಲ್ಲಿ ಪುನರನಿರ್ಮಾಣಗೊಳ್ಳುತ್ತಿದ್ದ ಚರ್ಚ್ ಅದು, ಒಳಗೆ ಹೋಗಬೇಕು ಎಂದು ನಿರ್ಧರಿಸಿ ಹೊರಟ್ಟದ್ದಾಯ್ತು. ಚರ್ಚಾ ಆವರಣದಲ್ಲಿ ಅವರ ಫಾಧರ್ ಸಮಾಧಿ ಕಾಣಿಸಿತ್ತು,1930ರ ಆಸುಪಾಸಿನಲ್ಲಿ ಅವರು ಫಾದರ್ ಆಗಿದ್ದರು ಅನ್ನುವ ಉಲ್ಲೇಖ ಅಲ್ಲಿತ್ತು,ಇದೂ ಬ್ರಿಟಿಷರ ಅವಧಿಯ ಚರ್ಚಾ ಅನ್ನುವುದು ಖಾತ್ರಿಯಾಗಿತ್ತು. ಆ ಸಮಯದಲ್ಲೇ ರೈಸ್ ಬ್ಯಾಗ್ ಪಡೆದ ಮಹಾನುಭಾವ ಅಂತ ಗೊತ್ತಾಯ್ತು.  ದೇವಸ್ಥಾನದ ನಿರ್ಮಾಣದ ಕಾರ್ಯಕ್ಕಿಂತ ಇದರ ಕಾರ್ಯ ತುಂಬಾ ಚುರುಕಾಗಿಯೇ ನಡೀತಿದೆ, ರೋಮ್ ನ ಹಣ ಚೆನ್ನಾಗಿಯೇ ವ್ಯಯ ಆಗ್ತಿದೆ ಅನ್ನುವುದು ಮನದಟ್ಟವಾಗಿತ್ತು. ಇಂತಹ ವಿಷಯಗಳಲ್ಲಿ ವಿಪರ್ಯಾಸವೆಂದರೆ ನಮ್ಮ ದೇವಾಲಯಗಳು ನಿರ್ಮಾಣಗೊಳ್ಳುತ್ತಿರುವಾಗ "ಈ ಜಾಗದಲ್ಲಿ ದೇವಸ್ಥಾನದ ಬದಲು ಶಾಲೆ ಕಟ್ಟಿಸಬೇಕು,ಆಸ್ಪತ್ರೆ ಕಟ್ಟಿಸಬೇಕು,ಬಸ್ ಸ್ಟ್ಯಾಂಡ್ ಕಟ್ಟಿಸಬೇಕು" ಎಂದು ಬೊಬ್ಬೆ ಹೊಡೆಯುತ್ತಿದ್ದ ಯಾವೊಬ್ಬ ಸೋ ಕಾಲ್ಡ್ ಬುದ್ದಿ ಜೀವಿಗಳು ಇತರಹದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿನ ಚರ್ಚ್ ಗಳ ಬಗ್ಗೆ ಮಾತಾಡಲು ಮೂಕರಾಗಿ ಬಿಡ್ತಾರೆ, ಯಾಕ್ ಅಂದ್ರೆ ಸಿಕ್ಕ ಸಿಕ್ಕವರ ಅಳಲು ಕೇಳಲಿಕೆ, ಬೆರಳು ಮಾಡಿ ತೋರಿಸಲಿಕೆ "ಸರ್ವೆಜನ ಸುಖಿನೌ ಭವಂತು" ಅನ್ನುವ ಸನಾತನ ಸಂಸ್ಕೃತಿ ಇದೆಯಲ್ಲ, ತೆಗಳಿದಾಗ ಅವರ ಮನೆಗಳಿಗೆ ಕಲ್ಲು ಹೊಡೆಯುವ,ಬೆಂಕಿ ಇಡುವ ಹೀನ ಮನಸ್ಥಿತಿ ನಮ್ಮಲ್ಲಿ ಇಲ್ಲ, ಹಾಗಾಗಿ ಅವರ ಸ್ವೇಚ್ಚಾಚ್ಚಾರದ ಟೀಕೆಗಳಿಗೆ ಮಿತಿ ಇಲ್ಲ. ಇರಲಿ ಬಿಡಿ, ಇನ್ನೂ ಜಾಸ್ತಿ ಹೇಳಿದ್ರೆ ಕೋಮುವಾದಿ ಅನ್ನೋ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತೆ.

ಒಳಗಡೆ ತುಂಬಾ ಅಚ್ಚುಕಟ್ಟಾಗಿ ಅಲಂಕೃತವಾಗಿದೆ ಚರ್ಚ್, ಅದರ ಮಧ್ಯಭಾಗದಲ್ಲಿ ಸ್ಥಾಪಿಸಲು ರೆಡಿ ಮಾಡಿ ಇಟ್ಟಿದ್ದ POP ಯದ್ದೋ ಅಥವಾ ಸಿಮೆಂಟಿನದ್ದೋ ಒಂದು ದೊಡ್ಡ ಗೊಂಬೆ ಅಥವಾ ಮೂರ್ತಿ, ಅದು ಏಸುವಿನದ್ದೋ ಯಾರದ್ದೋ ಅಂತ ನೋಡಿದ್ರು ಗೊತ್ತಾಗಲಿಲ್ಲ. ಅಷ್ಟಕ್ಕೇ ಸುಮ್ಮನಿರದ ಸಿದ್ಲಿಂಗ್ "ನಡ್ರಿ ಮ್ಯಾಗ್ ಹೋಗಮ್" ಅಂದ. "ಮೊದಲನೆಯದಾಗಿ ನಾವು ಅದಕ್ಕೆ ಅಸಂಬಂಧಿತರು,ಒಳಗ ಬಂದಿದ್ದೆ ದೊಡ್ಡದು, ಮತ್ ಮ್ಯಾಗ್  ಹೋಗೋದು ಯಾಕ್, ಯರನಾ ನೋಡಿದ್ರ್ ಸೀದಾ ಕೈಯಾಗ್ ರೈಸ್ ಬ್ಯಾಗ್ ಇಟ್ಟು ಹೆಸರು ಚೇಂಜ್ ಮಾಡ್ತಾರ್, ನಮಗ್ ಯಾಕ್ ಉದ್ರಿ ಕೆಲ್ಸ"  ಅಂತೆಲ್ಲ ಹೇಳಿದರೂ ಪಟ್ಟು ಬಿಡದ ಅವನು ಒಂದನೇ ಮಹಡಿ ಹತ್ತಿಯೇ ಬಿಟ್ಟಿದ್ದ, ಸುತ್ತಲೂ ಅಲಂಕೃತ ಗಾಜಿನ ಕಿಟಕಿಗಳು, ಅದೇನೋ ದುಬಾರಿ ಗಾಜು ಇವು ಅಂತ ಸಿದ್ಲಿಂಗ್ ಹೇಳ್ತಿದ್ದ, ಮೊದಲೆಲ್ಲಾ ಇದು ಬಂಗಾರಕ್ಕಿಂತ ಕಾಸ್ಲಿ, ಡೆಕೋರೇಷನ್ ಹುಚ್ಚು ಅಷ್ಟಿತ್ತು ಅಂತ ಹೇಳ್ತಿದ್ದ.  "ಇದ್ರು ಇರಬಹುದು, ಅಕ್ಕಿ ಹಂಚಿಕೆ ಚೆನ್ನಾಗಿಯೇ ನಡೀತಿದೆ" ಅಂದಿದ್ಕೆ ಹಲ್ಲು ಕಿಸಿದು ಮುಖ ತಿರುಗಿಸಿದ.
ಮೇಲಿನ ಮಿನಾರ್ ಒಳಗೆ ಹೊಗಲಿಕೆ ಕಬ್ಬಿಣದ ಎಣಿಯ ವ್ಯವಸ್ಥೆ ಇತ್ತು, "ಅಲ್ಲಿಗೂ ಹೋಗಬೇಕು,ಅಲ್ಲಿಂದ ವಿವ್ ಭಾರಿ ಇರ್ತದ ನಡಿ" ಅಂದಿದ್ಕೆ ಅಳಕುತ್ತ ಮೇಲಕ್ಕೆ ಎರಿದ್ವಿ.
ಭಾಗಶಃ ಬೇಗುರು ಕಾಣಿಸುವಷ್ಟು ಎತ್ತರದ ಮಿನಾರ್ ಗಳು, ಒಂದೆರಡು ಫೋಟೋ ಕ್ಲಿಕ್ಕಿಸಿದ್ದಾಯ್ತು.

ಅಲ್ಲಿಂದ ಮೈನ್ ಡೂಮ್ ಕಡೆ ಹೋಗಿ, ಸ್ವಲ್ಪ ಕೂತು, ರೈಸ್ ಬ್ಯಾಗ್ ಸರಬಾರಾಜು ಮತ್ತಿತರ ವಿಷ್ಯಗಳ ಮಂಥನವಾಯ್ತು. ಈ ವಿಷಯಗಳ ಬಗ್ಗೆ ಎಲ್ಲರೂ ಒಂದೇ ನಿಲುವಿಟ್ಟು ಕೊಂಡು ಮಾತಾಡಿದ್ದು ಅದೇ ಮೊದಲಬಾರಿ ಅನಿಸುತ್ತದೆ, ಉದಾರವಾದಿ ಸಿದ್ಲಿಂಗ್ ಇಂತಹ ವಿಷಯಗಳಿಗೆ ಚರ್ಚ್ ಮೇಲೆ ಕೂತು ಸಮ್ಮತಿ ಸೂಚಿಸಿದ್ದು ಪಂಚನಾಗಲಿಂಗೇಶ್ವರನ ಕೃಪೆ ಅನ್ನಿಸುತ್ತದೆ.
ಅಲ್ಲಿಂದ ದೇವಸ್ಥಾನದ ಮನೋಜ್ಞ ವೈಭವಪೂರಿತ ದೃಶ್ಯಗಳನ್ನ ಕಣ್ಣಲ್ಲಿಯೂ, ಫೋಟೋಗಳಲ್ಲಿಯೂ ಸೆರೆಹಿಡಿದಾಗಿತ್ತು. ಇತ್ತ ಸೂರ್ಯ,ಇದು ಮುಂಜಾವೋ,ಮಧ್ಯಾನವೋ ಅಥವಾ ಸಂಜೆಯೊ ಎಂದು ಹೇಳಲಿಕೆ ನಕಾರ ಮಾಡುತ್ತಿದ್ದನೇನೋ ಅನ್ನುವಷ್ಟು ಒಂದೇ ತೆರನಾದ ವಾತಾವರಣ ಮೂಡಿತ್ತು. ಸಮಯ ನೋಡಿ, ಇದು ಸಂಜೆಯೇ ಅಂದು ಗುರುತಿಸಿ ಅಲ್ಲಿಂದ ಹೊರಟು ಮನೆಕಡೆ ಮುಖ ಮಾಡಿದ್ದ ಬಸ್ ಗೆ ಹತ್ತಿದ್ದಾಯ್ತು.

ಬೆಂಗಳೂರಿನ ಆಸುಪಾಸಿನಲ್ಲಿರುವರು ಹೋಗಿ ಬರಬಹುದಾದ ಒಳ್ಳೆಯ ದೇವಸ್ಥಾನ, ಜೇಬು ಹಗುರವಾಗಿದ್ದರೂ ಸಾಕು, ಮನಸ್ಸು ಧನ್ಯತಾ ಭಾವದಿಂದ ತುಂಬಿಕೊಂಡು ಬರಬಹುದು.

                                                    ........ಬಸವ.

Comments

  1. ಅದೇನ ಬರವಣಿಗೆ ಅದೇನ ಬರವಣಿಗೆ. ನಾನು ಆ ಜಾಗಕ್ಕೆಲ್ಲ ಭೇಟಿ ಕೊಡಬೇಕ ಆಗ್ತದ ಈಗ .

    ReplyDelete
  2. ಕಳೆದ ದಿನಗಳು ಕಳೆದು ಹೋಗುವುದರೋಳಗೆ ಕಣ್ಮುಚ್ಚಿ ಮನ ತೆರೆದು ನೆನಪಿನ ಮೆರೆವಣಿಗೆಗೆ ಹೊರಟಿದಂತಿದೆ

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ