Posts

Showing posts from April, 2021

ನಗುತ್ತಲೇ ಇರುವನು ದೇವರು.

ದೇವರೇ ಕೊಟ್ಟ ಲೌಕಿಕ ಬದುಕ ಬದುಕುವವನಿಗೇಕೆ ಮನೋಲ್ಲಾಸದ ಕಡಿವಾಣಗಳು, ಹರುಷಕ್ಕೊಂದು ನಗು,ದುಃಖಕ್ಕೊಂದು ಅಳಲು ಸಹಜ ಸಾಮಾನ್ಯವಿಲ್ಲದೆ ಇಲ್ಲಿ ಮತ್ತೇನು ಜಯಿಸುವುದಿದೆ ಅಲ್ಲಿ, ಅವನಿಗರಿವಿಲ್ಲದ್ದೆನಿದೆ ಎಂದರಿತರು ಮತ್ತದೇ ಕ್ರೌರ್ಯಗಳ ಕರ್ತು ನಾವಾಗಿರುವುದು ದೇವರಿಗಿದು ಅಸಮಂಜಸ. ಬಾನು ಭುವಿಯನಿಟ್ಟ ದೇವನಿಗೆಯೇ ಮನೆಯ ಮಾಡಿ ಮುದ್ದಾಡುವ ಮನುಜನಿವ, ತಾನು ಹುಟ್ಟಿಸಿದವರೆ ತನ್ನ ಹುಟ್ಟು ಆಚರಿಸುವದನ ಕಂಡು ನಗುತ್ತಲೇ ಇರುವನು ದೇವರು ನಮ್ಮವರ ಮುಗ್ದತೆಗೆ, ಸಿಡಿದ್ದೆದ ಕೋಪಗಳಿಗೂ,ದಾರುಣ ದುಃಖಗಳಿಗೂ,ಹರ್ಷೋದ್ಗಾರಕ್ಕೂ ತನ್ನನ್ನೇ ನೆನೆಯುವರ ಕಂಡು ತನ್ಮಯನಾಗಿಹ ದೇವರು. ನಮ್ಮೆಲ್ಲರ ಬಯಕೆಗಳು ಅವನರಿತರು ಅವನಿಗೆಯೇ ಆಸೆಯನೊಡ್ಡಿ ಪಡೆಯುವ  ನಮ್ಮ ಕುಚೇಷ್ಟೆ ಅವನ ಲೀಲೆಗಳನ್ನೇ ಹಿಂದಿಕ್ಕಿವೆ, ಅವನೆಂದೂ ಅರಿಯದ ತಾರತಮ್ಯಗಳ  ಅವನಲ್ಲಿಯೇ ಮೂಡಿಸಿ ಮುಜುಗರಗೊಳಿಸಿದ ನಾವು ಇನ್ನೂ ಅವನನ್ನ ಅರಿಯುವಲ್ಲಿ ಅಂಬೆಗಾಲನ್ನಿಡುತ್ತಿರುವೆವು.                                                               .........ಬಸವ.

ಮುಗಿಯದ ಮಾಯೆಗಳು.

ಉರಿ ಬಿಸಿಲಿನಲ್ಲೊಂದು ಹಸಿರ ಕಾನನ ತಮಗೊಂದು ತನಗೊಂದು ಎಂಬಂತ್ತೆ ಅಡಗಿಹರು ಅದರೊಳಗೆ ನಿನ್ನ ಪಾದದ ಉಗುರಿನಲ್ಲೊಂದು ಮನೆಯ ಬೇಡವೇ ನನಗೆ? ಗಹಗಹಿಸಿ ನಗುವ ನೂರು ವಿಚಲಿತ ಮನಗಳು ತಿಳಿದೋ ತಿಳಿಯದೆಯೋ ತಿವಿದು ನಗುತಿಹರು ಎಲ್ಲೆಡೆ ನಿನ್ನ ಕಣ್ಣೆದುರಲ್ಲಿ ನನಗೊಂದು ಮುಗುಳುನಗೆಯೂ ಬೇಡವೇ? ನಾನರಿಯದ ಅರಿವಿನಲ್ಲಿ ಅದದ್ದೊಂದು ಅಕರ್ಮ ಅರಿವಿನಲ್ಲೇಕೆ ಅದಕೆ ಶಿಕ್ಷೆಯನ್ನಿಟ್ಟಿರುವೆ ನೀನು ಅವರಂತೆಯೇ ನನಗೆಂದು ಕರುಣಿಸುವೆ ಹೊಸ ಕನಸುಗಳು? ಎಲ್ಲವೂ ನಿನ್ನದೇ ಇದ್ದರು ನಿನ್ನೆ ಮರೆತಿಹರು ಅವರು ಒಳಿತೋ ಕೆಡಕೋ ಎನ್ನದೆ ಎಲ್ಲವೂ ಸ್ವೀಕರಿಸಿರುವೆನು ನಾನು ನಿ ಇನ್ನು ಮುಗಿಸಲೊಲ್ಲೆ ಏಕೆ ಮಾಯೆಯೊಳಗಿನ ಮಾಯೆ?                                                        .........ಬಸವ.