Posts

Showing posts from December, 2019

ಹೃದಯ ಸಾಮ್ರಾಜ್ಞಿ

ಭೇದಿಸಲಾಗದ ರಣತಂತ್ರಗಳ ಕಣ್ಣಲ್ಲೇ ಹೆಣೆದಿಹಳು, ಕೇಳರಿಯದ ಕಾಳಗಗಳ ಎದುರಿಸುತ್ತಿದೆ ಬಡಪಾಯಿ ಹೃದಯ, ವ್ಯಾಕುಲ ಮನದಿ ಏಕಾಂಗಿಯಾಗಿ ಹೋರಾಡುತ್ತಿರುವೆ ನಿಶಸ್ತ್ರನಾಗಿ, ಇಲ್ಲಿ ಪರವಶವೇ ಪರಮಜಯವೆಂದು ಅರಿತಿರುವೆ. ಅವಳಂದಗಳ ಅಸ್ತ್ರಗಳು ಶರಣಾಗತಿಗೆ ಸಮೀಪಿಸುವಂತೆ ಪಿಡಿಸುತ್ತಿವೆ, ಅವಳ ಮೌನದ ಹೊಡೆತಗಳಿಗೆ ಮಾಗದ ಗಾಯಗಳು ಮೂಡಿವೆ ಹೃದಯದಲ್ಲಿ, ಅವಳಂದಕ್ಕೆ ಗಾಯಗೊಂಡಿರುವ ಮನಸ್ಸು ಸೋಲೇ ಸ್ವರ್ಗವೆಂದು ಒಪ್ಪಿಕೊಂಡಿದೆ. ಪರವಶನಾಗಲೆಂದಿನಿಸಿದಾಗಲೊಮ್ಮೆ ವಿರಹದ ಭಯ ಹೋರಾಟಕ್ಕೆ ಪ್ರೇರಣೆ ನಿಡುತ್ತಿದೆ, ಸಾಗಲಿ ಸುಂದರ ಕದನವೆನ್ನುತ್ತಿದೆ ವಿಚಲಿತ ಮನಸ್ಸು , ಬಿಡದ ಹೊಡೆತಗಳಿಗೆ ಸೋತ ಹೃದಯ ಆನಂದಿಸುತ್ತಿದೆ ಅವಳಂದಗಳೆಂಬ ಅಸ್ತ್ರಗಳ. ನಾನಿರುವ ಪ್ರೇಮಸಮರದಲ್ಲಿ ವಿರಹವೆ ಸಾವು, ಸಾಮರಸ್ಯವೇ ಸ್ವರ್ಗ, ಪರಾಜಯವೇ ಪ್ರೀತಿ, ಅರಿತಾಗಿದೆ ಇಂದು ಅವಳು ಹೃದಯಸಾಮ್ರಾಜ್ಞಿ ಎಂದು.             ...................ನಿಶಸ್ತ್ರಧಾರಿ ಬಸವ

ಸೃಷ್ಟಿಕರ್ತ

ನುರಿತ ಮನಸುಗಳ ನೇಕಾರ ಅವನು, ನಮ್ಮ ನಿಮ್ಮೆಲ್ಲರ ಆಡಂಬರಗಳ, ಅಳಲುಗಳ,ಆವೇಶಗಳ, ರೂವಾರಿ ಅವನು ಜಗದೊಡೆಯನವನು ಸೃಷ್ಟಿಕರ್ತ ಅವನು. ನಿನ್ನ ಸ್ವೀಕಾರವು ಅವನದೇ, ನಿರಾಕಾರವು ಅವನದೇ. ನಿನರಿಯದಂತೆ ನಿನ್ನ ನಡೆಸುತಿಹನವನು, ಬಯಸಿದ ಬಯಕಗೆಳೆಲ್ಲ ಸುಳ್ಳು , ಸಿಕ್ಕಿದ್ದು ಸ್ವಾಗತಿಸು,ಅನುಕರಿಸು,ಆರಾಧಿಸು, ತಿಳಿದುಕೊಡುವನವನು ಸ್ರಷ್ಟಿ ಕರ್ತ ಪ್ರಶ್ನಿಸುವ ಹಕ್ಕು ನಿನಗಿಲ್ಲ. ನಿನ್ನಾಸೆಗಳನ್ನ ಮೂಡಿಸಿದ್ದುಅವನೇಯೇ, ಒಳಗೊಳಗೇ ನಿರಾಕರಣೆಯ ಮುನ್ಸೂಚನೆ ನೀಡಿದವನು ಅವನೇಯೇ. ಅಳಲುಗಳು ನಿನ್ನ ಕರ್ಮಕ್ಕಿರಲಿ, ದೂರದಿರನು ಅವನನ್ನು, ತಿಳಿದೇ ಕರುಣಿಸಿಹನು ನಿನ್ನ ಭಾಗ್ಯ. ಯಾವ ಸ್ವರ್ಗ ನರಕವು ಶಾಶ್ವತವಲ್ಲ, ಕಾಲ ಚಕ್ರ ಉರುಳಿದಂತೆಯೇ ಜೀವನ. ಸ್ವೀಕರಿಸಿ ಸ್ವಾಗತಿಸಿ ಮುನ್ನಡೆ ಜಗದೊಡೆಯನ ಆಜ್ಞೆ ಇದು, ಅರಿತುಕೊ ಕೇಳುವ ಮುನ್ನ ನಿನ್ನ ಪ್ರಶ್ನೆಗಳನ ಪ್ರಶ್ನಿಸಿದ್ದು ಅವನೆಯೇ. ಅವನ ನೆರಳು ಕತ್ತಲೆನ್ನುವದಕ್ಕಿಂತ ತಂಪೆಂದು ಮುನ್ನಡೆ ಮುನ್ನುಗ್ಗು.                                                  .................ಬಸವ

ನಡುಕದ ನುಡಿಗಳು.

ನೀನೆಂಬ ಉತ್ತುಂಗಕ್ಕೆ ಅಂತರಾಳದಿ ಚುಂಬಿಸಿದ್ದೆ, ಇಂದು ನೀನಿಲ್ಲದ ನನ್ನನ್ನು  ನಾ ಕಂಡುಕೊಂಡಿರುವೇ, ಮತ್ತೆ ನೀನೆಂಬ ಕಲ್ಪನೆಗಳಿಗೆ ವ್ಯಸನಿಯ ನಾನಾಗಲಾರೆ. ನನ್ನತನವೇ ಹುಸಿಎನ್ನುವ ಮಟ್ಟಕ್ಕೆ ನಿನ್ನ ಅಲಂಕರಿಸಿದ್ದೆ, ನಿ ಸಿಗದಿದ್ದರೂ ನಿನ್ನ ನೆನಪುಗಳಲ್ಲೇ ಸ್ವರ್ಗ ಅನುಭವಿಸುವೆ, ಎಲ್ಲದಕ್ಕಿಂತ ನೀನೇ ಮಿಗಿಲೆನ್ನುವ ಪದ ತುಂಬಾ ಅಚ್ಚಾಗಿ ಪರಿಪಾಲಿಸಿದ್ದೆ. ನೀನಿಲ್ಲದ,ನಿನ್ನೊಂದಿಗಿಲ್ಲದ ತನು ಮನಗಳೆರಡು ಚಡಪಡಿಸುತ್ತಿವೆ, ನಿನ್ನೊಂದಿಗಿದ್ದು ನಿ ಉಣಬಡಿಸುವ ತಾರತಮ್ಯಕ್ಕಿಂತ ನಾ ಸದಾ ನಿನ್ನ ನೆನಪುಗಳಲ್ಲಿ ಏಕಾಂಗಿಯಾಗಿ ಇರಬಯಸುವುದೇ ನೆಮ್ಮದಿಯಂತ್ತಿದೆ. ಅದ್ಹೇಗೆ ಮರೆಯಲಿ ನಿನ್ನ? ನಿನ್ನ ನುಡಿ ನಡೆಗಳನ್ನ ಸದಾ ಕಾಣಬಯಸಿದವನು ನಾ, ಅದ್ಹೇಗೆ ಮರೆಯಲಿ ನಿನ್ನ? ನೀನಿಲ್ಲದೆಯೇ ನಿ ನನ್ನವಳು ಎಂದು ಕೂಗಿಹೇಳಿದವನು ನಾ, ಅದ್ಹೇಗೆ ಮರೆಯಲಿ ನಿನ್ನ? ನನಗಿಂತ ನೀನೇ ಸದಾ ಅಪರಂಜಿ ಎಂದವನು ನಾ , ಅದ್ಹೇಗೆ ಮರೆಯಲಿ ನಿನ್ನ ?                            ................ಬಸವ

ಮಾಯವಾದ ಮಾಯೆ.

ನೀನೆಂಬ ಮುಖಪುಟಕ್ಕೆ ಮಾರುಹೋದವನು ನಾನು, ನೀನೆಂದು ಬಿಚ್ಚಿಡಲಿಲ್ಲ ನೀನೆಂಬ ಪುಸ್ತಕವ, ನಿನ್ನರಿಯುವ ಜೀಜ್ನ್ಯಾಸೆಯೋಮ್ಮೊಮ್ಮೆ ನಾನೆಲ್ಲಿ ನಿನ್ನ ಕಳೆದುಕೊಂಡು ಬಿಡುವೆನೆಂಬ ಭಯದ ನಾಂದಿಹಾಡುತ್ತಿದೆ. ಮತ್ತೊಂದು ಹೃದಯಕ್ಕೆ ಗಾಯಗೊಂಡು ನನ್ನಾವರಿಸಿದೆಯಾ ನೀನು.....? ಘಾಸಿಗೊಳಿಸಿದ ಹೃದಯ ಅಪ್ಪಿಕೊಂಡಾಗ ಇಂದು, ಮೆಲ್ಲನೆ ಮಂಕಾಗಿ ಮರೆಯಾದೇಯಾ.....? ಎಂದು ಪ್ರಶ್ನಿಸುತ್ತಿದೆ ತಬ್ಬಲಿ ಹೃದಯ, ಸಿಗದಾದಲ್ಲಿ ಉತ್ತರಗಳು ತನ್ನಲ್ಲಿ ತಾನೇ ಖಾತರಿಗೊಂಡಿದೆ ಪ್ರಶ್ನಿಸಿದ ಪ್ರಶ್ನೆಗಳೇ ಉತ್ತರಗಳೆಂದು. ನಿನ್ನ ತಲುಪುವುದೊಂದೆ ಗುರಿ ಎಂದುಕೊಂಡಿತ್ತು ಈ ಹೃದಯ, ಬಿಟ್ಟೆನೆಂದರು ಬಿಡದಂತ್ತೆ ಗಟ್ಟಿಯಾಗಿ ಸಾಗುತ್ತಿತ್ತು ನಿ ನುಡಿಸಿ ಮೂಡಿಸಿದ ಹಳಿಗಳಮೇಲೆ, ಕಾಣದ ಗುರಿ ತಲುಪಲೇಲ್ಲಿ ಎಂದು ತಟಸ್ತವಾಗಿ ನಿಂತಿದೆ ಇಂದು. ಓಲೈಕೊಗೋ,ಆರೈಕೆಗೊ....! ಮನವೊಲಿಕೆಗೊ,ಮನವರಿಕೆಗೋ...! ನಾಟಕಕ್ಕೊ,ಆಡಂಬರಕ್ಕೋ.....! ಆವೇಶಕ್ಕೋ,ಅಭಾಸಕ್ಕೋ....! ನೀನೊಮ್ಮೊಮ್ಮೆ ಹತ್ತಿರವಾದದ್ದು ಮಾತ್ರ ಕಟು ಸತ್ಯ. ನನ್ನಲ್ಲಿ ನಾ ಮುಳುಗುವ ತನಕ ನೀನೆಂಬ ಮಾಯೆ ಬಿಡದು ನನ್ನ, ನಿನ್ನಗಲಿದರು ಇಂದು ನಾ ಕಾಣಲಾರೆ ನಿನ್ನಲ್ಲಿ ಅದಾಗದ ಮಾಗದ ದುಃಖ ಶೋಕಗಳ, ಡಾಂಭಿಕತೆಗೂ ಕೋರುಗದಿರು ನನ್ನಗಲಿಕೆಯಿಂದ, ಮತ್ತೆ ನಿನ್ನಲ್ಲಿ ಜಾರಿ ಬೀಳಲು, ಬಿದ್ದು ಪರಿತೇಪಿಸುವುದು ಹೊಸತೇನಲ್ಲ.                                                       ........

ನೀನೆಂಬ ಉತ್ತುಂಗ

ನೀನೆಂಬ ಊಹಿಸದ ಸಾಹಿತ್ಯದಲ್ಲಿ ಉತ್ತುಂಗಕ್ಕೇರಿರುವೆ, ಆಳ ಸಾಗರದಲ್ಲಡಗಿದ ನುಡಿಮುತ್ತುಗಳಿಗೆ ಬಲೆಬಿಸಿರುವೆ, ದೂರವಾಗ ಬಯಸಿದ್ದಷ್ಟು ಮತ್ತಿಷ್ಟು ಹತ್ತಿರವಾಗಿರುವೆ, ಮುಗಿಯದ ಕಡಲ ಅಲೆಗಳೆಂಬ ನಿನ್ನ ನೆನಪುಗಳಿಗೆ ಶಾಶ್ವತವಾಗಿ ಮಾರುಹೋಗಿರುವೆ. ಬಿಡದೆ ಹರಿಯುವ ನದಿಗೆ ಬಂದಿಸಲಾಗದಂತ್ತೆ, ಸೂರ್ಯನ ಪ್ರಕಾಶತೆಯ ಮುಚ್ಚಿಡಲಾಗದಂತ್ತೆ, ನನ್ನೊಳಿರುವ ನಿನ್ನ ಮಾಗಿಸಲಾಗದೆಂದು. ಸಿಕ್ಕಷ್ಟು ಸ್ವೀಕರಿಸುವಾಸೆ ನಿನ್ನ, ಬಯಕಗಳಿಗಿಲ್ಲ ನನ್ನಲ್ಲಿ ಕೊನೆ, ನಿನ್ನವನಾಗುವ ಬಯಕೆ ನನ್ನಲ್ಲೇ ನಾ ಅತಿಗಾಡವಾಗಿ ಗೀಚಿಕೊಂಡಿರುವೆ. ನೂರೆಂಟು ನೆಲೇಗಳಿದ್ದರು ನಿನ್ನಲ್ಲಿಯೇ ನಿನ್ನ ನೆರಳಲ್ಲಿಯೇ ದಣಿವಾರಿಸಿಕೊಳ್ಳುವಾಸೆ, ನಾ ಸುಖವಾಗಿದ್ದರು ನಿನ್ನನ್ನ ನೋವಾಗಿಯಾದರು ನನ್ನೊಳು ಮಾಗದ ಗಾಯದಂತ್ತೆ ಮುಡಿಸಿಕೊಳ್ಳುವಾಸೆ, ನೀನೊಂದು ಅರಿಯದ ಭಾಷೆಯಾದರು ಸರಿ ನಿನ್ನೊಡನೆ ಮುಗಿಯದ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುವಾಸೆ.                                                   ........ಬಸವ