Posts

Showing posts from July, 2020

ಖಾಲಿ ಪತ್ರ

ಖಾಲಿ ಪತ್ರದ ಸಂದೇಶವಿದು ನಿನಗೆ ಸಖಿ ಹೇಳಿಕೊಳ್ಳಲಾಗದೊಂದು ಮನವಿಯನಿಟ್ಟಿರುವೆ, ನಿ ಮಾತ್ರವರಿಯುವೆ ಎಂಬ ಆಶಯದಲ್ಲಿ ಗಿಚಲಿಲ್ಲವೇನೂ ಅರಿಯುವೆ ನೀನಿದನೆಂಬ ಬಯಕೆ ಹಾಳೆಯಷ್ಟೇ ಸ್ಪಷ್ಟವಾಗಿದೆ. ನನ್ನ ಭಾವನೆಗಳ ಪ್ರತಿಯೊಂದನ್ನ ಅಂಟಿಸಿರುವೆ ಅದಕೆ, ನಿ ಮಾತ್ರ ಅರಿಯುವ ಅರ್ಥದಲ್ಲಿ ಅಚ್ಚೊಂದ ಮುಡಿಸಿರುವೆ, ಸೂರ್ಯನ ಬೆಳಕಿಗೊ ಚಂದ್ರನ ಶಿತಕ್ಕೊ  ಅರಳಿಸಿ ತಳುಕಿಸಿ,ಬಾಗಿಸಿ ತೇಲಿಸಿ ನೋಡೋಮ್ಮೆ ಖಾಲಿ ಪತ್ರವ. ಅವರಿವರ ಅವಿವೇಕಕ್ಕೆ ಅಳುಕದೆ ಅರ್ಥಭರಿತವಾಗಿ ನಾ ಮಾತ್ರವಿದು ಎಂಬ ನಾನಾಗಿ ಒಂದೇಯರ್ಥದಲ್ಲಿ ಮಾಗದ ಶಾಹಿಯಿಂದ,ಕಂಗಳೆಂಬ ಲೇಖನದಿಂದ ಗೀಚಿರುವೆ ನಿನಗಷ್ಟೇ ಅರ್ಥವಾಗುವ ಖಾಲಿ ಪತ್ರವೊಂದನ. ಹಗಲಲ್ಲಿ ಇರುಳ ಹುಡುಕುವೆಯೋ,ಇರುಳಲ್ಲಿ ಹಗಲೋ, ಹಾಸ್ಯದಲ್ಲೊಂದು ಅಳಲೋ, ಅಳಲಲ್ಲೊಂದು ಹಾಸ್ಯವೋ,ನಾರಿಯೇ, ಮುಖನಾಗಿಯೇ ಕಣ್ಮುಚ್ಚಿಯೇ ಭಾವೋದ್ವೇಗದಿ ಮನದ ನುಡಿಗಳ ನುಡಿಸಿರುವೆ,ಕೇಳೋಮ್ಮೆ ಖಾಲಿಪತ್ರದಲ್ಲಿ.                                                  ..............ಬಸವ