Posts

Showing posts from March, 2022

"ಕಾಶ್ಮೀರ್ ಫೈಲ್ಸ್" ಎಂಬ ರಕ್ತ ಸಿಂಚನದ ಕಥೆ.

ಯುವ ಸಮೂಹವೊಂದು "ಜೈ ಶ್ರೀ ರಾಮ್" ಎನ್ನುತ್ತಲೋ ಅಥವಾ "ಭಾರತ್ ಮಾತಾ ಕಿ ಜೈ" ಎನ್ನುತ್ತಲೋ ಗುಂಪು ಗುಂಪಾಗಿ ಹೊರ ಬರುತ್ತಿದ್ದಾರೆ. ಬೀದಿಗಳಲ್ಲೊ ಅಥವಾ ರಾಜಕೀಯ ಪಕ್ಷದ ಸಭೆಯಿಂದಲೋ ಅಲ್ಲಾ, ಬದಲಾಗಿ ಒಂದು ಚಿತ್ರ ಮಂದಿರದಿಂದ ಹೊರಬರುತ್ತಿದ್ದಾರೆ. ವಯಸ್ಕ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ, ಗಂಡಸರು "ಈಗಲಾದರೂ ಎಚ್ಚೆತ್ತುಕೊಳ್ಳಿ" ಎಂಬ ಎಚ್ಚರಿಕೆಯ ಮಾತುಗಳನ್ನ ಯುವಸಮೂಹಕ್ಕೆ ಹೇಳುತ್ತಿದ್ದಾರೆ, ಅತ್ತಕಡೆ ಇನ್ನೊಂದು ಬಣ ಹಲವು ದಶಕಗಳ ಹಳೆಯ ರಾಜಕೀಯ ಪಕ್ಷಕ್ಕೆ ಛಿ!, ಥು! ಎನ್ನುತ್ತಾ ಹೊರಬರುತ್ತಿದ್ದಾರೆ.  ಏನಿದು? ಯಾವಚಿತ್ರವಿದು? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ "ದಿ ಕಾಶ್ಮೀರ್ ಫೈಲ್ಸ್" ಅನ್ನುವ ರಕ್ತ ಸಿಂಚನದ ಕಥೆ ಹೊರಹೊಮ್ಮುತ್ತದೆ. ಚಲನಚಿತ್ರವೆಂದರೆ ಹೀರೋ ಹೀರೋಯಿನ್, ವಿಲನ್, ಸಿಳ್ಳೆಗಳು, ಚಪ್ಪಾಳೆಗಳಿಂದ ಕುಡಿರುತ್ತಿತ್ತು, ಆದರೆ ಇದು ಸಂಪೂರ್ಣ ವಿಭಿನ್ನ. ಚಿತ್ರದುದ್ದಕ್ಕೂ ಇಲ್ಲಿ ಪರಿಪೂರ್ಣ ನಿರವತೆ, ಅಲ್ಲೆಲ್ಲೋ ಮೂಲೆಯಲ್ಲಿರುವವರು ದುಃಖಿಸುವ ಸದ್ದು ಸಹ ಕೇಳಬಹುದಾದಂತಹ ನಿಶಬ್ದ ಚಿತ್ರಮಂದಿರದಲ್ಲಿ. ಚಿತ್ರಮಂದಿರದಲ್ಲಿ ನಿರವತೆ ತುಂಬಿದೆಯಾದರು, ಅಲ್ಲಿಯ ಮನಸ್ಸುಗಳಲ್ಲಿ ಭಾವೋದ್ವೇಗ ಉಕ್ಕುತ್ತಿದೆ. ಕೆಲವರು ದುಃಖದಲ್ಲಿದ್ದಾರೆ, ಕೆಲವರು ಕೋಪದಲ್ಲಿದ್ದಾರೆ, ಇನ್ನೂ ಕೆಲವರು ತಮ್ಮನ್ನ ಆ ಸ್ಥಿತಿಯಲ್ಲಿ ಕಲ್ಪಿಸಿಕೊಳ್ಳುತ್ತಿದ್ದಾರೆ. ಹೀಗೆ ಹತ್ತು ಹಲವು ಚಿಂತನೆಗಳಲ್ಲಿ

ಕತ್ತಲೆ ಮತ್ತು ಸತ್ಯ.

ಚಿಕ್ಕ ಹಳ್ಳಿಯ ಸಾಮಾನ್ಯ ರೈತ ಭಧ್ರಯ್ಯ, ಅಂಗೈಯಷ್ಟು ಭೂಮಿಯಲ್ಲಿ ಚೀಟಿಕೆಯಷ್ಟು ಬೆಳೆ ಬೆಳೆದು ಸ್ವತಂತ್ರವಾಗಿ ಜೀವಿಸುವ ಬಡವ. ಚಿಕ್ಕ ಪುಟ್ಟ ವಸ್ತುಗಳಿಗೂ ಹತ್ತಾರು ಮೈಲಿ ದೂರದ ಪೇಟೆಗೆಯೇ ಹೋಗಬೇಕು.ಮತ್ತು ಹೋಗಲೇಬೇಕು. "ಮನೆ ಖಾಲಿ ಆಗಿದೆ, ನಾಲ್ಕು ದಿನ ಹಿಂಗೆ ಹೋದ್ರೆ ನಾಲಿಗೆ ಹಿತ ಅನ್ನುದೆ ಮರ್ತ್ ಹೋದಾತು, ನಾಳಿಗ್ ಪ್ಯಾಟಿ ಕಡಿ ಹೋಗಿಬರ್ಬೇಕ್ ನಿ" ಭಧ್ರಯ್ಯನ ಮಡದಿ ಗಂಗವ್ವ ಕಠೋರವಾಗಿಯೇ ಆಜ್ಞೆ ಮಾಡ್ತಿದ್ದಾಳೆ, ಎನಿಲ್ಲದಿದ್ದರೂ ತಿನ್ನಲಿಕೆ ತಟ್ಟೆಯಲ್ಲಿ  ಏನನ್ನಾದರೂ ಮಾಡಿ ಇಡುವಾಕೆ. ಎರಡು ಮಕ್ಕಳು ಮತ್ತು ಗಂಡನ ಹೊಟ್ಟೆ ಸುಡದಂತ್ತೆ ನೋಡಿಕೊಳ್ಳುವುದೇ ಆ ಭಗವಂತ ಆಕೆಗೆ ಕೊಟ್ಟ ಮೋಕ್ಷದ ಹಾದಿ ಅನ್ನುವಂತ್ತೆ ಬದುಕುವಾಕೆ. "ಆಯ್ತ್ ಮಾರಾಯ್ತಿ, ಅದಕ್ ಎನಕ್ ಗಂಟಲು ಹರಿಯುವಂತ್ತೆ ಉದ್ತಿಯ, ನಾಳೆನೆ ಹೋಗ್ತೀನಿ" ಭಧ್ರಯ್ಯ ಅನಿವಾರ್ಯತೆ ಅರಿತಿದ್ದಾನೆ. ಅಮವಾಸೆ ಒಳಗಾಯಿತೋ ಹೊರಗಾಯಿತೋ ಗೊತ್ತಿಲ್ಲದ ದಿನವದು. ಕಗ್ಗತ್ತಲು ಆವರಿಸಿಕೊಳ್ಳುವ ದಿನ, ಆದರೂ ಹೋಗಲೇಬೇಕು. ಜೀವನದಲ್ಲಿ ಕಗ್ಗತ್ತಲೇ ಹೊಂದಿದವನಿಗೆ ಈ ಪ್ರಕೃತಿಯ ಕತ್ತಲು ಕತ್ತಲೇ ಅಲ್ಲ ಅನ್ನುವುದು ನಗ್ನ ಸತ್ಯ.  ಭಧ್ರಯ್ಯ ಪೇಟೆಯಲ್ಲಿ ಬೇಕಾದದ್ದು ಬೇಕೋ ಬೇಡವೋ ಅನ್ನುವಷ್ಟು ಚೀಲಕ್ಕೆ ತುಂಬಿಸಿಕೊಂಡ. ಹೊಟ್ಟೆಗೆ ಬೇಕಾದ ಹಿಟ್ಟಿನ ಜೊತೆಗಿನ ನಾಲ್ಕಾರು ಪದಾರ್ಥಗಳು,ಮತ್ತೆ ಮತ್ತೆ ಒಡೆದು ಹೋಗುವ ಮಣ್ಣಿನ ಪಾತ್ರೆಗಳು ಇನ್ನು ಕೆಲ ಮನೆಗೆ ಬೇಕಾದ ಸಾಮಗ್ರಿಗಳು