Posts

Showing posts from August, 2020

ಆತ್ಮ ದಾಹ

ತನು ಮನ ಕಾಣದ ಸುಖದಲ್ಲೇ ಸೋಲುತ್ತಿಹೇ ನೀನು ತಡಬಡಿಸುವ ಆತ್ಮದ ಕೊರಗೊಮ್ಮೆ ಕೇಳದೆ ಹಗಲೊತ್ತಲ್ಲೇ ಇಳಿ ಸಂಜೆಯಡೆಗೆ ನುಗ್ಗುತ್ತಿರುವೆ ನೀನು, ಕೈ ಹಿಡಿಯುವ ಜ್ಞಾನವ ಇಚ್ಚಿಸೋಮ್ಮೆ ಕರುಣಿಸಾನು ಅವನು ನಿನ್ನಲ್ಲೇ ಅಡಗಿದವ. ಮೆಚ್ಚಲು ಮೆಚ್ಚಿಸಲು ದುಡುಕುವ ಹೆಜ್ಜೆಗಳು ದರಿದ್ರವನೂ ಮೆಟ್ಟಿ ನಿಲ್ಲಲು ನಿಂತಿವೆ ಕಣ್ಮುಂದೆ, ಅರಿತರು ಮತ್ತಷ್ಟು ಆಳಕ್ಕಿಳಿಯುವ ಮೂರ್ಖತೆ ಮೂಕನಾದಮೇಲೆ ಕಿರುಚುವ ನಿನ್ನ ರಗಳೆಗೆ  ಬಿಟ್ಟದ್ದಲ್ಲ ಹುಚ್ಚನ ಪಟ್ಟ ನಿನಗೆ. ಅತೃಪ್ತಿಯದು ಅಳುಕುತ್ತಿಹದು ಜೀವದಲ್ಲಿ ಮತ್ತದೇ ಮದ ದ ಬೆನ್ಹತ್ತಿ ಬಾಗುತ್ತಿರುವೆ, ಹೇಳುವರನ್ನೇಕೆ ಹುಡುಕಲಿಲ್ಲ ನೀನು  ಬೇಕಾಗಿದ್ದು ಜ್ಞಾನವದು, ಅಜ್ಞಾನದ ಹೊರೆಯಲ್ಲವೆಂದು. ಭಯವಿರದ ಭಕ್ತಿಯನ್ನೊಮ್ಮೆ ಅನುಭವಿಸಲು, ತಾನೇ ಪರಮಾತ್ಮನೆಂಬುದನ ಅರಿಯಲು, ಕತ್ತಲು-ಬೆಳಕೆನ್ನದ, ಧನ-ಋಣವೆನ್ನದ ಲೋಕವನರಿಯಲು, ಅರಿಯೊಮ್ಮೆ ನಿನ್ನಲ್ಲೇ ಪರಮಾತ್ಮನ ಅರಿವ ಜ್ಞಾನವ.                                            ...........ಬಸವ

ನೂಲಿಗೊಲೇದ ಸ್ವಾತಂತ್ರ್ಯವಲ್ಲವಿದು

ಗರಿ ಗರಿಯಾದ ನೂಲಿಗೊಲೇದ ಸ್ವಾತಂತ್ರ್ಯವಲ್ಲವಿದು ಗುರಿ ಇಲ್ಲದ ಗುಂಡುಗಳನ್ನೆದುರಿಸಿ  ನದಿಯಂತೆ ಹರೆದ ನೆತ್ತರಿನಲಿ ತೇಲಿಬಂದ ಸ್ವಾತಂತ್ರ್ಯವಿದು. ಮರಣ ಮೃದಂಗಗಳ ಮಧ್ಯೆಯೂ  ಜನ್ಮಭೂಮಿಯ ಅಳಲು ಕೇಳಿ ಆಳುವವರ ಅಸ್ತಿತ್ವನ್ನಳಿಸಿಯೇ ಬಿಡುವೆನೆಂಬ  ಧೀರ ದಿಟ್ಟತನಕ್ಕೊಲಿದ  ಸ್ವಾತಂತ್ರ್ಯವಿದು. ಸಾಗರದಷ್ಟು ಬಲಿದಾನಿಗಳ ಮೇಲೆ  ಅಳುಕದೆ ನಿಂತ ತ್ರಿವರ್ಣದ ತೇಜಸ್ಸು ಒಲಿದದ್ದಿದು ಅಳಲುಗಳಿಗಲ್ಲ ಭಾರತಾಂಬೆಯ ಪಾದಕ್ಕಂಟಿದ ನೆತ್ತರಕ್ಕೊಲಿದ ಸ್ವಾತಂತ್ರ್ಯವಿದು. ಹಗಲಿರುಳೆನ್ನದೆ,ಬೆವರೋ ರಕ್ತವೆಂದರಿಯದೆ ಸ್ವಾಭಿಮಾನವೋ, ದೇಶಭಕ್ತಿಯೆಂದರಿಯದೆ ವಂದಿಸುತ ವಂದಿಸುತ ವಧೆಗೊಂದಲ್ಲಿ ಒಲಿದ ಸ್ವಾತಂತ್ರ್ಯವಿದು.                                               ....ಬಸವ ಸ್ವಾತಂತ್ರ್ಯೋತ್ಸವದ ಶುಭಾಶಯಗಳು🇮🇳🇮🇳🙏