Posts

Showing posts from October, 2019

ನಮ್ಮವರ ಸುತ್ತೋಲೆಗಳಲ್ಲಿ

ನನ್ನವರೆಂಬ ಸುತ್ತೋಲೆಗಳಲ್ಲಿ ಮೂಡಿದ ಬಯಕೆಗಳು ದುರಾಸೆ ಎಂದೇನಲಾಗದು, ಬಯಕೆ ಸಹಜವಾದರು ನೀರಿಕ್ಷೆಗಳು ಸಹಜವಲ್ಲ. ಮತ್ತೆ.... ಅಪೇಕ್ಷೆಗಳಿರುವದೇ ನೋಯಿಸುದಕ್ಕೆಂದು ಅರಿತು ಸುಮ್ಮನಾದೆ, ಸುಮ್ಮನಾದವನೆ ದುಃಖಗಳಿಗೆ ಕೊರಳೊಡ್ಡಿದೆ. ಅವ ನೆಡೆಸಿದಂತೆ ನಡೆಯಲಿ ಬದುಕು ನಮ್ಮವರೆಂಬ ಹಂಗಿಲ್ಲದೆ, ಹಂಗಿಲ್ಲದ ಬದುಕಲ್ಲಿ ದಕ್ಕಿದ್ದೆ ಅವನ ದಯೆ ಎಂದು ಕೊಂಡಿರುವೆ ಬೇಡವಾದದ್ದು ಬರಲಿಲ್ಲವೆಂದುಕೊಂಡಿರುವೆ.                             🖋️...................ಬಸವ

ನಿನ್ನೊಲಿದವ

ನಿನೋಂದು ಅರಿಯದ ಪ್ರಣೀತ ಗಣಿತ ತಿಳಿಯದ ನುಡಿಗಳ ಮತ್ತೆ ಮತ್ತೆ ಸ್ಮರಿಸಿದಂತೆ ನಿನ್ನೊಡನೆ ಮೂಡಿ ಮಾಗಿದ ನೆನಪುಗಳ ಸ್ಮರಣೆಯಲೇ ಕಾಲಹರಣಿಸುತ್ತಿರುವೆ. ಬೆಚ್ಚಿ ಬೀಳುವ ಮುಂಚೆ ಎಚ್ಛೆತ್ತು ಅಪ್ಪಿಕೊಳ್ಳುವೆ ಸದ್ದಿಲ್ಲದೆ ಸಾಗುವ ಸರ್ಪದಂತೆ ಹಿಂಬಾಲಿಸುವೆ ನಿನ್ನ ಪಿಡಿಸುವ ವ್ಯಥೆಗಳನ್ನಲ್ಲೇ  ಬೇಡವಾಗಿಸುವೇ ನಿನ್ನಾಸೆ ನಿ ಕೇಳುವ ಮುನ್ನವೇ ಪೂರೈಸುವೆ. ಸಜ್ಜಾದ ಜೇನಿನಂತೆ ಸಿದ್ಧಗೊಳಿಸುವೆ ನಿನ್ನ ನಿ ಕಾಣಬಯಸುವ ಬಣ್ಣವನ್ನೇ ಬಳೆಯುವೆ ಈ ಜಗಕೆ ನಿನ್ನಿಚ್ಛೆಯಂತೆ ವಯ್ಯಾರಗೊಳಿಸುವೆ ಆ ಚಂದಿರನ ನಿನ್ನೊಲ್ಲದ ಸಂಜೆ ಬಾರದದು.... ಬಾರದು ಬಾರದಂತೆ ಬಂಧಿಸುವೆ ಆ ರವಿಯ.                         .................ನಿನ್ನೊಲಿದವ

ಕತ್ತಲೆಗಳ ಕಾಳಗಗವಿದು

ಕತ್ತಲೆಗಳ ಕಾಳಗವಿದು ಕತ್ತಲೆಗಳ ಕಾಳಗಗವಿದು ವಿಕೃತ ಮನಸ್ಸುಗಳ ಚೆಲ್ಲಾಟವಿದು ಭವ್ಯತೆಯ ಅಂದಗೆಡಿಸುವ ನೀಚ ಮನಸ್ಸುಗಳ ಮಾರ್ಮಿಕ ಕುಣಿತವಿದು. ತತ್ತರಿಸದ್ದು ನೆಮ್ಮದಿಗಳಿಲ್ಲಿ ಭಿಕರಿಯಾದದ್ದು ಭಾವನೆಗಳಿಲ್ಲಿ ಮೃತ್ಯು ಕೂಪ ಕಂಡದದ್ದಿಲ್ಲಿ ಬರಿ ಬಣ್ಣ ಬಣ್ಣದ ಜೀವನಗಳು. ಹೊಟ್ಟೆ ಕಿಚ್ಚಿನ ರಕುತದೋಕುಳಿ ಇದು ಸಂತೋಷ ನೆಮ್ಮದಿಗಳ ಭಕ್ಷಣೆ ಇದು ಬೆಳದಿಂಗಳಿಗೆ ಕತ್ತಲೆರೆಚುವ ನೀಚತ್ವವಿದು ಮಾನವಿಯತೆಗಳ ಮಾರಣಹೋಮವಿದು. ಮುಖವಾಡ ಧಾರಿಗಳೆಂಬ ಭಕ್ಷಕರು ನಂಬಿಕೆಗಳೆಂಬ ಬಿಂಬಗಳಿಗೆ ಕತ್ತಲಲ್ಲೇ ಕತ್ತರಿಸುವ ಕ್ರೂರತ್ವದಾಟವಿದು.                                                   ....ಬಸವ