ಕತ್ತಲೆಗಳ ಕಾಳಗಗವಿದು

ಕತ್ತಲೆಗಳ ಕಾಳಗವಿದು

ಕತ್ತಲೆಗಳ ಕಾಳಗಗವಿದು
ವಿಕೃತ ಮನಸ್ಸುಗಳ ಚೆಲ್ಲಾಟವಿದು
ಭವ್ಯತೆಯ ಅಂದಗೆಡಿಸುವ ನೀಚ ಮನಸ್ಸುಗಳ ಮಾರ್ಮಿಕ ಕುಣಿತವಿದು.

ತತ್ತರಿಸದ್ದು ನೆಮ್ಮದಿಗಳಿಲ್ಲಿ
ಭಿಕರಿಯಾದದ್ದು ಭಾವನೆಗಳಿಲ್ಲಿ
ಮೃತ್ಯು ಕೂಪ ಕಂಡದದ್ದಿಲ್ಲಿ
ಬರಿ ಬಣ್ಣ ಬಣ್ಣದ ಜೀವನಗಳು.

ಹೊಟ್ಟೆ ಕಿಚ್ಚಿನ ರಕುತದೋಕುಳಿ ಇದು
ಸಂತೋಷ ನೆಮ್ಮದಿಗಳ ಭಕ್ಷಣೆ ಇದು
ಬೆಳದಿಂಗಳಿಗೆ ಕತ್ತಲೆರೆಚುವ ನೀಚತ್ವವಿದು
ಮಾನವಿಯತೆಗಳ ಮಾರಣಹೋಮವಿದು.

ಮುಖವಾಡ ಧಾರಿಗಳೆಂಬ ಭಕ್ಷಕರು
ನಂಬಿಕೆಗಳೆಂಬ ಬಿಂಬಗಳಿಗೆ
ಕತ್ತಲಲ್ಲೇ ಕತ್ತರಿಸುವ ಕ್ರೂರತ್ವದಾಟವಿದು.

                                                  ....ಬಸವ

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ