ಮನಸ್ಸು ಮೌನಕ್ಕೆ ಶರಣಾಗಿದೆ.

ಮನಸ್ಸು ಮೌನಕ್ಕೆ ಶರಣಾಗಿದೆ
ತಿಳಿಯಾಗದೆ ಉಳಿದ ಮನದ ಕೆಲವು ಜಟಿಲಗಳು ಜೋರಾದಾಗ,
ಎಂದಿಗೂ ಉತ್ತರ ಸಿಗದ ಒಲವ ಪ್ರಶ್ನೆಗಳು ಮತ್ತೆ ಮತ್ತೆ ಹಾಜರಿಯನ್ನಿಟ್ಟಾಗ,
ಶಾಶ್ವತ ಸಾಂಗತ್ಯದ ಶಪತವನಿಟ್ಟ ಒಲವೊಂದು ಸೂಚನೆಯೂ ಇಲ್ಲದೆ ಕಣ್ಮರೆಯಾಗುತ್ತಿರುವಾಗ
ಮನಸ್ಸು ಮತ್ತೆ ಮೌನಕ್ಕೆ ಶರಣಾಗಿದೆ.

ಮನಸ್ಸು ಮೌನಕ್ಕೆ ಶರಣಾಗಿದೆ
ಹೃದಯದ ಕಂಪನಗಳನ್ನ ಆಲಿಸಬೇಕಿದ್ದ ಒಲವೇ
ಬದಿರವಾದಾಗ,
ಮಾಗದಂತೆ ಎದೆಯ ಗೋಡೆಯಲ್ಲಿ ಪ್ರೇಮಾಂಕುರವನಿಟ್ಟ ಲೇಖನಿಯ ಶಾಹಿಯೇ ಖಾಲಿಯಾದಾಗ,
ಹೃದಯದ ಬಡಿತಕ್ಕೂ ಪರವಾನಗಿ ಕೇಳುತ್ತಿದ್ದ ಕಣ್ಣುಗಳು ದೃಷ್ಟಿಯನ್ನೇ ಬದಲಾಯಿಸಿದಾಗ
ಮನಸ್ಸು ಮತ್ತೆ ಮೌನಕ್ಕೆ ಶರಣಾಗಿದೆ.

ಮನಸ್ಸು ಮೌನಕ್ಕೆ ಶರಣಾಗಿದೆ
ಸದಾ ಮುದವನಿಕ್ಕುವ ಹೃದಯದ ಆಲಿಂಗನವೊಮ್ಮೆ ಕೇವಲ ಯಾಂತ್ರಿಕ ಸ್ಪರ್ಶವಾದಾಗ,
ಎಂದೋ ಹದವಾಗಿ ಬೆಸೆದ ಭಾವಗಳು ಬೇಸರಗೊಂಡು ಭಾವೋದ್ವೇಗ ತಾಳಿದಾಗ,
ಒಲವೊಂದು ತನ್ನ ಅಂತಿಮವಿದಾಯದ ಮುನ್ನ ನಗುಮೊಗದ ಕಣ್ಣೀರನಿಟ್ಟಾಗ
ಮನಸ್ಸು ಮತ್ತೆ ಮೌನಕ್ಕೆ ಶರಣಾಗಿದೆ.


                                     ...........ಬಸವ.

Comments

Post a Comment

Thank you

Popular posts from this blog

ಕೆಲವು ಲೆಕ್ಕಾಚಾರಗಳು.

ಊಟಿ - ಬೆಟ್ಟಗಳಲ್ಲೊಂದು ಸ್ವರ್ಗ. ಭಾಗ-1