ಒಲವ ಬೀದಿಗಳು.
ಗುರುತಿಲ್ಲದೆ ಇದ್ದ ಬೀದಿಗಳೇ ಅದೆಷ್ಟೋ ನೆಮ್ಮದಿಗಳ ಹಾಸುತಿದ್ದವಲ್ಲ,
ಇಂದು ಅದೇ ಬೀದಿಗಳು ಪರಿಚಯವಾದ ಮೇಲೆ ಅಸಂಬಂಧಿತ ಎಂಬಂತ್ತೆ ದೂರಿತ್ತಿವೆ,
ಮರುಗನ್ನಡಿಯನ್ನ ತೋರಿಸುತ್ತಿವೆ ಅಂದಿಗೂ ಇಂದಿಗೂ ಕಂಡ ಬಿಂಬಗಳ ಸೂತ್ರ ಬಿಡಿಸಿ,
ಅದೇ ಬೀದಿಯ ಎರಡೂ ದಂಡೆಯ ಮೇಲೆ ನಿಂತ ಒಲವುಗಳ ಪ್ರಶ್ನೆಗಳಿಗೆ ಉತ್ತರ ಮಾತ್ರ ನಿರುತ್ತರ.
ಒಟ್ಟಿಗೆ ಅದೆಷ್ಟೋ ಸಾವಿರ ಹೆಜ್ಜೆಗಳ ತುಳಿದರೂ ಅಗದಿದ್ದ ಆಯಾಸ ಇಂದೊಂದೇರೇಡ್ಹೆಜ್ಜೆಗೆ ದಣಿವಾವರಿಸಿದೆ,
ಒಲವಿನೆದುರು ಎತ್ತಲೂ ಹೊರಳಿದಿದ್ದ ಕಣ್ಣೋಟಗಳು ಇಂದು ಕ್ಷಣಕ್ಕೂ ದೃಷ್ಟಿ ಬೆರೆಸುತ್ತಿಲ್ಲ,
ಸದಾ ಉತ್ಸಾಹಗಳಿಂದ ಸ್ವಾಗತಿಸುತಿದ್ದ ಬೀದಿಗಳ ತಿರುವುಗಳು ಮೆಲ್ಲಗೆ ನಿರಾಸಕ್ತಿಯನ್ನ ಹೊರಚೆಲ್ಲುತ್ತಿವೆ,
ಒಮ್ಮೆ ಆ ಬೀದಿಗಳ ಕಾಣಲು ಹಾತೊರೆಯುತ್ತಿದ್ದ ಹೃದಯ
ಇಂದು ತಲ್ಲಣಿಸುತ್ತಿದೆ ಕಂಡು ನೋವೆಂಬ ಭಿತ್ತಿಚಿತ್ರಗಳ.
ಕೋನೆಯದೊಂದು ಹೆಜ್ಜೆ ಕೂಡಿಡುವ ಸಮಯ ಈ ಬೀದಿಗಳಲ್ಲಿ ಇನ್ನೆಂದೂ ತುಳಿಯೇನೆಂಬ ಸತ್ಯಕ್ಕೆ ಹ್ಞೂಗೊಟ್ಟು,
ಹೋಗುತ್ತ ಮೂಡಿಸಿದ್ದ ಅದ್ರ್ಯಶ್ಯ ಹೆಜ್ಜೆಗಳನ್ನ ಅಳಿಸುತ್ತ ಬರಬೇಕಿದೆ ಒಂದೊಮ್ಮೆ ಮತ್ತದೇ ಬೀದಿಗಳಲ್ಲಿ, ರುಜುಹಾಕಬೇಕಿದೆ ಆ ಬೀದಿಗಳಲ್ಲಿ ಮೂಡಿದ ಅಳು ನಗುಗಳು ತಾತ್ಕಾಲೀಕವೆಂಬ ಸ್ಪಷ್ಟಿಕರಣದ ಕಡತಕ್ಕೆ,
ದುಃಖಿಸುವ ಉಸಿರಲ್ಲೂ ಒಂದೊಮ್ಮೆ ಬಿಡುವಿಟ್ಟುಕೊಂಡು
ಕೊಡಬೇಕಿದೆ ನಿಟ್ಟುಸಿರ ಹಿನ್ನೋಟ ಆ ಒಲವ ಬೀದಿಗಳಲ್ಲಿ ಅಂತಿಮ ವಿಧಾಯವೆಂಬಂತ್ತೆ.
...................ಬಸವ.
ನಮ್ಮದೇ ಎಳೆ ವಯಸ್ಸಿನ ಕಡೆಗಿನ ಮೆಲುಕು...!
ReplyDeleteExllent.. ✨
🥲
ReplyDeleteNice
ReplyDeleteNice one 👍
ReplyDelete