Posts

Showing posts from March, 2020

ಅಳಿವ ದೇಹಕ್ಕೆ ಅಳುವ ನಂಟುಗಳೇಕೆ?

ಬಿಡದ ಬಂಧನಗಳಿಗೆ ಸೆರೆಯಾಗಿರುವೆವು ಕಣ್ಣೆದುರೇ ಕಾಣದಾಗುವವೆಂದು ಮರೆತಿರುವೆವು, ನೋಯಿಸುವ ನೋವುಗಳಿಗೆ ಸೆರೆಯಾಗಿರುವೆವು ಅಸರೆಗಳೆಂಬ ಉಸಿರುಗಳಿಗೆ ಸೋತಿರುವೆವು. ವಯ್ಯಾರವೆಂಬ ಬಣ್ಣ ಬಣ್ಣದ ಚಿತ್ರಗಳಿವು ರಂಗು ರಂಗಾಗಿರುವ ತನಕವಷ್ಟೆ ಸೊಗಸು, ಎಡವಿದೋಡೆ ಕೆಡುವ ಭಾವನೆಗಳಿವು ನಿಸ್ವಾರ್ಥವೇ ಪರಮಸತ್ಯವೆಂದು ನುಡಿದಿವೆ. ಭಗವಂತನ ಆಣೆಯಿಡದೆ ಆಟಕ್ಕೆ ಒಪ್ಪಿ ಅಳುವುದೇಕೆ ಜೀವನೊದ್ಧೇಶವ ತಪ್ಪಿ? ಅರಿಯದ ಮನಕೆ ಮುನಿಸು ಕಲಿಸುವುದುಕೆ? ಅಳಿವ ದೇಹಕ್ಕೆ ಅಳುವ ನಂಟುಗಳೇಕೆ? ಭಿನ್ನತೆಗೆ ಬಡಿದಾಡುವ ಹೃದಯ ಮರೆತಂತಿತಿದೆ ತಾನು ಬಯಸಿದ್ದು ತನ್ನತನದ ಹೃದಯವೆಂದು, ಹೆಸರಿಡದೆ ಉಸಿರಾಡುವ ಜೀವಕ್ಕೆ ಬಿಸಿಯುಸಿರೆಳೆವ ಗತಿ ಬಾರದಿರಲಿ.                                                  .................ಬಸವ.

ಸಂಬಂಧಗಳ ಬಂಧನಗಳು.

ಕರಿ ಮೊಡದಾಚೆಗಿಚೆ ಆಡುವ ಚಂದ್ರನಂತ್ತೆ, ಕಗ್ಗತ್ತಲ ಕತ್ತಲೋ ಬೆಳದಿಂಗಳ ಬೆಳಕೋ ಚಂದ್ರನರಿಯನು, ಎಡೆ ಬಿಡದೆ ಓಡುವ ಮೋಡಗಳವು ಕತ್ತಲು ಬೆಳಕಿನ ಮಾಲೀಕರು, ಅಂತೆಯೇ ಅರಿತಂತ್ತೆ ಬದುಕು,ಅರಿತಂತ್ತೆ ಅವರಿವರುಗಳು. ಕತ್ತಲೆಯೊಳಗೆ ಅವಿತ ಕಣ್ಣುಗುಡ್ಡೆ ಅರಿಯದಾಗಿತ್ತು ರೆಪ್ಪೆಯ ಹೊರಗೊಂದಿದೆ ಹೊಳೆಯುವ ಜಗತ್ತೆಂದು, ಸಂಕುಚಿತ ಮನಸ್ಸು ಎಂದೂ ಕಾಣದೆ ಅಳುತ್ತಿತ್ತು ತಾನೇ ದೂರಿದ ಸಮಾಜ ತನಗಿಂತ್ತ ಚಲುವೆಂದು. ಸಂಬಂಧಗಳಾಚೆಗಿರಲಿ ತಕ್ಕಡಿಯ ಆಟ, ಸಂಬಂಧಗಳವು ಹಿಡಿದಿಟ್ಟುಕೋ ನಿಲ್ಲಲಾರವವು ಯಾರ ಉಪಕಾರಕ್ಕೂ. ದುಂಡನೆ ಜಗತ್ತಿನಲ್ಲಿ ಎಂಟರಲ್ಲೊಬ್ಬರು ದೊರೆಯುವರಷ್ಟೇ, ಕಳೆದುಕೊಂಡು ಮರುಗುವಂತಾಗದಿರಲಿ ಮನಸ್ಸು, ಸಂಬಂಧಗಳಿವು ಹಿಡಿದಷ್ಟು ಸಡಿಲ,ಅಪ್ಪಿಕೊಂಡಷ್ಟು ಜಟಿಲ, ಅಹಂಕಾರ ಸ್ವಾರ್ಥದ ಹೊಡೆತಕ್ಕೆ ಮಾಯವಾಗದಿರಲಿ ನುಲಿದು ನಲಿದ ನಮ್ಮವರದ್ದೇ ಬದುಕುಗಳು.                                                                .........ಬಸವ

ಹಳೆ ಸಂತೆಯ ವ್ಯಾಪಾರಿ.

ನಾ ಅದೇ ಹಳೆ ಸಂತೆಯ ವ್ಯಾಪಾರಿ, ನೋವು ನಲಿವುಗಳೆಂಬ ಏರುಪೇರು, ಕೈಗಟುಕದ ನಲಿವುಗಳು, ನೋವುಗಳನ್ನೇ ಖರೀದಿಸಿ ಸಾಗುವಂತ್ತಾಗಿದೆ. ಸಾಗರ ದಡದಲ್ಲಿನ ಮರುಳಿನಂತ್ತೆ ಕನಸುಗಳು, ಕಟ್ಟಿಯೇ ತಿರುವೆವು ನಾವು ಕಲ್ಪನೆಗಳ ಮಹಲುಗಳು, ಬಿಡದೆ ಬಹಿಸ್ಕರಿಸುವವು ಅಲೆಮಾರಿ ಅಲೆಗಳು. ಕತ್ತಲೆಯಲ್ಲಿ ಕಾಣದ ಚಿತ್ರ ಚಿತ್ರಿಸಿ, ನಮ್ಮಿಂದಾಗದ ಬೆಲೇಯೊಂದ ಹೇರಿ, ಬೆಳಕಿಗೆ ಮಂಕಾಗಿ ಮನೆಗೆ ನಡೆಯುವದೇ ದಿನ ನಿತ್ಯದ ಕಂಬನಿಗಳ ಕರೆಯೋಲೆಯಾಗಿದೆ. ಕಂತೆಗಳ ಹೊತ್ತು ತರುವರು ಬಾಳ ಸಂತೆಗೆ, ಕಿಂಚಿತ್ತೂ ಕರಗದೆ ರೋಧಿಸಿ ಹೋಗುವರು ಎಲ್ಲಾ, ಬಣ್ಣ ಬಳಿದಾದರು ಸರಿ ಮಾರಿಯೇ ತಿರುವೆನೆಂಬ ಹುಚ್ಚು ಪಡೆದವರ ಹೊಟ್ಟೆತಂಪು ಕೆಡಿಸದಿರಲಿ.                                       ................ಬಸವ.