ಸಂಬಂಧಗಳ ಬಂಧನಗಳು.

ಕರಿ ಮೊಡದಾಚೆಗಿಚೆ ಆಡುವ ಚಂದ್ರನಂತ್ತೆ,
ಕಗ್ಗತ್ತಲ ಕತ್ತಲೋ ಬೆಳದಿಂಗಳ ಬೆಳಕೋ ಚಂದ್ರನರಿಯನು,
ಎಡೆ ಬಿಡದೆ ಓಡುವ ಮೋಡಗಳವು
ಕತ್ತಲು ಬೆಳಕಿನ ಮಾಲೀಕರು,
ಅಂತೆಯೇ ಅರಿತಂತ್ತೆ ಬದುಕು,ಅರಿತಂತ್ತೆ ಅವರಿವರುಗಳು.

ಕತ್ತಲೆಯೊಳಗೆ ಅವಿತ ಕಣ್ಣುಗುಡ್ಡೆ ಅರಿಯದಾಗಿತ್ತು
ರೆಪ್ಪೆಯ ಹೊರಗೊಂದಿದೆ ಹೊಳೆಯುವ ಜಗತ್ತೆಂದು,
ಸಂಕುಚಿತ ಮನಸ್ಸು ಎಂದೂ ಕಾಣದೆ ಅಳುತ್ತಿತ್ತು
ತಾನೇ ದೂರಿದ ಸಮಾಜ ತನಗಿಂತ್ತ ಚಲುವೆಂದು.

ಸಂಬಂಧಗಳಾಚೆಗಿರಲಿ ತಕ್ಕಡಿಯ ಆಟ,
ಸಂಬಂಧಗಳವು ಹಿಡಿದಿಟ್ಟುಕೋ
ನಿಲ್ಲಲಾರವವು ಯಾರ ಉಪಕಾರಕ್ಕೂ.

ದುಂಡನೆ ಜಗತ್ತಿನಲ್ಲಿ ಎಂಟರಲ್ಲೊಬ್ಬರು ದೊರೆಯುವರಷ್ಟೇ,
ಕಳೆದುಕೊಂಡು ಮರುಗುವಂತಾಗದಿರಲಿ ಮನಸ್ಸು,
ಸಂಬಂಧಗಳಿವು ಹಿಡಿದಷ್ಟು ಸಡಿಲ,ಅಪ್ಪಿಕೊಂಡಷ್ಟು ಜಟಿಲ,
ಅಹಂಕಾರ ಸ್ವಾರ್ಥದ ಹೊಡೆತಕ್ಕೆ ಮಾಯವಾಗದಿರಲಿ
ನುಲಿದು ನಲಿದ ನಮ್ಮವರದ್ದೇ ಬದುಕುಗಳು.

           
                                                   .........ಬಸವ

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ