Posts

Showing posts from May, 2020

ಕುಣಿಯೊಮ್ಮೆ ಜೀವನದ ರಂಗದಲ್ಲಿ.

ಅರಿಯದೊಂದು ಘಳಿಗೆಯ ನೆನಪಿಸಿಕೊಂಡು ಮೂಕನಂತ್ತೆ ರೋಧಿಸುವಾಸೆಯೊಂದು ಮೂಡಿದೆ, ಬಯಸಿದ ಬಯಕೆಗಳು ಬಾರಲಿಲ್ಲವೆಂದು ನೆನೆದು ಕಣ್ಣಿಗೊಮ್ಮೆ ತಂಪೆರಚಲು ಕಣ್ಣೀರ ಸುರಿಸಬೇಕಿದೆ. ಹೇಳಲಾಗದ ಹಲವು ಗಂಟಲು ಬಿಗಿಯುವ ದುಃಖಗಳಿದ್ದರು ನನ್ನ ನೆರಳಾಟದ ರೂವಾರಿ ನಾನೊಬ್ಬನೆಂದು ಕಣ್ಮುಚ್ಚಿ ತೆರೆಯಬೇಕಿದೆಯಷ್ಟೇ, ಸುಖಕ್ಕೆ ಶರಣಾಗುವ ನಾನು ಅದಾವ ಘನತೆಗೆ ದುಃಖ ಧಿಕ್ಕರಿಸಲಿ? ಸ್ವೀಕರಿಸುವ ಹಿರಿಮೆ ಸಮವಿರಲಿ ಸಕಲ ಸರ್ವೋತ್ತಮನಂತ್ತೆ. ಬೆಳಗಲಿ ಬಿಡು ಬೆಳಕೊಮ್ಮೆ ಕತ್ತಲೆಯ ಮನದಲ್ಲಿ ಕತ್ತಲಾಗಲಿ ಬಿಡುವೊಮ್ಮೆ ಸದಾ ಸುಖವನುಂಡ ಮನದಲಿ, ಮಾಗಿದ ಘಳಿಗೆಗಳ ಮರೆತು ಮುನ್ನಡೆಯೀಲ್ಲಿ  ಅನುಭವಿಸಿ ಹಲವು ಅರ್ಥಗಳ ಮತ್ತೆಂದು ಅಳುಕದಿರಲೆಂದು. ಹಗುರವಾಗಲಿ ಮನದ ಭಾರ  ಹಲವು ಹಾಳು ಹಿರಿಮೆ ಗರಿಮೆಗಳಿಂದ, ಕಿರುಚಾಡಿ ಬಿಡೋಮ್ಮೆ ಬಿಗಿದ ಗಂಟಲ ಸುಧಾರಿಸಲು ನಕ್ಕು ಬಿಡುವೊಮ್ಮೆ ಎಲ್ಲರೂ ನನ್ನವರೆಯೇ ಎಂದು, ಸಲ್ಲದ ಘಳಿಗೆಗೆ ಸಾಲದ ಬೆಟ್ಟವನೆರದೆ  ತಲೆಯೆತ್ತಿ ನೋಡುವ ಬದಲೊಮ್ಮೆ ತಲೆ ಬಗ್ಗಿಸಿ ತಣ್ಣಗಾಗು, ಆತ್ಮದಲ್ಲದ ಆನಂದಗಳ ಆಸೆಗಳ ಬಯಸದೆ ಕುಣಿಯೊಮ್ಮೆ ಜೀವನದ ರಂಗದಲ್ಲಿ ತನಗೆ ಸಂದ ಬಣ್ಣವೇ ಸೂಕ್ತವೆಂದು.                                                  ..........ಬಸವ

ಇಣುಕಿ ನೋಡೋಮ್ಮೆ

ಆತ್ಮವು ಅಂಟಿಕೊಳ್ಳದ ದೇಹವಿದು ಮತ್ತೇಕೆ ಮರುಗುವೆ ಅಳಲು ಕೊರಗುಗಳೊಂದಿಗೆ ಮುಂದೊಂದು ದಿನ ಮಾಯವಾಗುವ ದೇಹಕ್ಕೆ. ಸಿಕ್ಕಿತೋ ಸೌಖ್ಯವೆನ್ನುವ ಮನಸ್ಥಿತಿಯೇ ಅಸ್ಥಿತಿ ಸಿಗದದೊಂದು ಸುಣ್ಣಕ್ಕೆ ಸೋಗುಡುವುದೇಕೆ? ಶೃಂಗಾರಗೊಳಿಸುವ ಸಾವಿರಬಣ್ಣಗಳಿವಲ್ಲಿ ಮರೆತು ಮುನ್ನಡೆ ನೂಕು ನುಗ್ಗಲ ಮಧ್ಯೆ. ಹಾತಾಶೆಗಳಿದ್ದಷ್ಟು ಹರಿತ ಹೊಡೆತ ಹೃದಯಕ್ಕೆ ಮರೆಯಲೆತ್ನಿಸಿದಷ್ಟು ಮೆಲಕುವುದು ಮನ  ಬೇಡದ ನೆನಪುಗಳ, ಪದೇ ಪದೇ ನೋವುಗಳಿಗಷ್ಟೇ ಕುಣಿದಂತ್ತಾಗುತ್ತಿದೆ ಮರೆತು ಮನದಲಿರುವ ಸಾವಿರ ಸಡಗರಗಳ. ಎಲ್ಲೋ ಮುರಿದು ಮುಳುಗಿ ನೋಡುವದಕ್ಕಿಂತ ನನ್ನವರೊಡನೆ ಎದ್ದು ನೋಡುವಂತಾಗಲಿ ಬದುಕು, ಅದಾವುದೇ ಮನಸ್ಸಿಗಾಗಿ ಬಿಕ್ಷುಕನಂತೇಕೆ ಬೇಡುವೆ? ಮರುಗುತಿಹದದು ನಿನ್ನಲ್ಲೇ ನಿನ್ನದೊಂದು ಮನಸು, ಇಣುಕಿ ನೋಡೋಮ್ಮೆ ಅಣುಕಿಸುವವರ ಮರೆತೊಮ್ಮೆ.                                                                                                      ......ಬಸವ