ಕುಣಿಯೊಮ್ಮೆ ಜೀವನದ ರಂಗದಲ್ಲಿ.

ಅರಿಯದೊಂದು ಘಳಿಗೆಯ ನೆನಪಿಸಿಕೊಂಡು
ಮೂಕನಂತ್ತೆ ರೋಧಿಸುವಾಸೆಯೊಂದು ಮೂಡಿದೆ,
ಬಯಸಿದ ಬಯಕೆಗಳು ಬಾರಲಿಲ್ಲವೆಂದು ನೆನೆದು
ಕಣ್ಣಿಗೊಮ್ಮೆ ತಂಪೆರಚಲು ಕಣ್ಣೀರ ಸುರಿಸಬೇಕಿದೆ.

ಹೇಳಲಾಗದ ಹಲವು ಗಂಟಲು ಬಿಗಿಯುವ ದುಃಖಗಳಿದ್ದರು
ನನ್ನ ನೆರಳಾಟದ ರೂವಾರಿ ನಾನೊಬ್ಬನೆಂದು ಕಣ್ಮುಚ್ಚಿ ತೆರೆಯಬೇಕಿದೆಯಷ್ಟೇ,
ಸುಖಕ್ಕೆ ಶರಣಾಗುವ ನಾನು ಅದಾವ ಘನತೆಗೆ ದುಃಖ ಧಿಕ್ಕರಿಸಲಿ?
ಸ್ವೀಕರಿಸುವ ಹಿರಿಮೆ ಸಮವಿರಲಿ ಸಕಲ ಸರ್ವೋತ್ತಮನಂತ್ತೆ.

ಬೆಳಗಲಿ ಬಿಡು ಬೆಳಕೊಮ್ಮೆ ಕತ್ತಲೆಯ ಮನದಲ್ಲಿ
ಕತ್ತಲಾಗಲಿ ಬಿಡುವೊಮ್ಮೆ ಸದಾ ಸುಖವನುಂಡ ಮನದಲಿ,
ಮಾಗಿದ ಘಳಿಗೆಗಳ ಮರೆತು ಮುನ್ನಡೆಯೀಲ್ಲಿ 
ಅನುಭವಿಸಿ ಹಲವು ಅರ್ಥಗಳ ಮತ್ತೆಂದು ಅಳುಕದಿರಲೆಂದು.

ಹಗುರವಾಗಲಿ ಮನದ ಭಾರ 
ಹಲವು ಹಾಳು ಹಿರಿಮೆ ಗರಿಮೆಗಳಿಂದ,
ಕಿರುಚಾಡಿ ಬಿಡೋಮ್ಮೆ ಬಿಗಿದ ಗಂಟಲ ಸುಧಾರಿಸಲು
ನಕ್ಕು ಬಿಡುವೊಮ್ಮೆ ಎಲ್ಲರೂ ನನ್ನವರೆಯೇ ಎಂದು,

ಸಲ್ಲದ ಘಳಿಗೆಗೆ ಸಾಲದ ಬೆಟ್ಟವನೆರದೆ 
ತಲೆಯೆತ್ತಿ ನೋಡುವ ಬದಲೊಮ್ಮೆ ತಲೆ ಬಗ್ಗಿಸಿ ತಣ್ಣಗಾಗು,
ಆತ್ಮದಲ್ಲದ ಆನಂದಗಳ ಆಸೆಗಳ ಬಯಸದೆ
ಕುಣಿಯೊಮ್ಮೆ ಜೀವನದ ರಂಗದಲ್ಲಿ ತನಗೆ ಸಂದ ಬಣ್ಣವೇ ಸೂಕ್ತವೆಂದು.

                                                 ..........ಬಸವ

Comments

  1. ACTUALLY I CAN'T UNDERSTAND FULLY. FEELS SO HIGH THOUGHTS. KEEP IT UP. KEEP GROWING. 👌👌👍👍👍

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ