Posts

Showing posts from July, 2021

ನಾ ಆಶಾವಾದಿ.

ಬಿರುಸು ಮಳೆಗಾಳಿಗೆ ಅಂಜಿ ನಿನ್ನ ಅಡಿಯಲ್ಲಿ ಅವಿತುರುವೆನು ನಾನು ಅಣುಕಿಸದೆಯೇ ಆಶ್ರಯವ ಕರುಣಿಸು ನನಗೆ. ಮನದ ನೂರೆಂಟು ದಿಗಿಲುಗಳ ಮಧ್ಯೆಯೂ ನಿನ್ನನ್ನೇ ಸ್ಮರಿಸುತ್ತಲಿ ಸಾಗುತ್ತಿರುವೆನು ನಾನು ಅಂಧಕಾರವನ್ನ ಅಳಿಸಿ ನಿನ್ನ ಆಶಾವಾದಿಯನ್ನಾಗಿಸು ನನ್ನ. ಹಲವು ಭ್ರಮೆಗಳು ಬೆಳೆದು ನಿಂತರೂ ನನ್ನಲ್ಲಿ ನಿನ್ನ ಅಸ್ತಿತ್ವದ ಸತ್ಯಶೋಧನೆಯಲ್ಲಿಯೇ ತೊಡಗಿಹೆನು ನಾ ನೀನೇ ಸತ್ಯವೆಂಬ ಪ್ರಕಾಶವನೊಮ್ಮೆ ಅನುಗ್ರಹಿಸು ನನ್ನಲ್ಲಿ. ನಿನ್ನಲ್ಲಿಯೇ ಸೇರುವ ಹಸಿವಿಂದ ಬಳಲುತ್ತಿರುವೆನು ನಾನು ನನ್ನಲ್ಲಿನ ಈ ಲೋಕದ ಲೋಭಗಳ ಲೋಪವನ್ನ ಅಳಿಸಿ ನಿನ್ನಡೆಗಿನ ಹಾದಿ ಎಂದಿಗೂ ತಪ್ಪದಂತ್ತೆ ಆಶಿಸು ನನ್ನ.                                                   ..............ಬಸವ.

ಮೌನವೇ ನೀನೇಕೆ ಅಷ್ಟು ಮೌನ?

ಮುರಿದ ಮನಗ ಳ ಲ್ಲಿಯೂ ನಿ ಮಿಡಿದ ಮನಗಳಲ್ಲಿಯೂ ನಿ, ಏನನ್ನು ನುಡಿಯದೆಯೇ ಹಲವು ನುಡಿಗಳ ಹೇಳುವ ನಿ ಮೆಲ್ಲಗೆ ತಟಸ್ಥತೆ ತಾಳಿ ನಿಂತುರುವೆ ನಿ ಅಷ್ಟೇಕೆ ಮೌನ ನೀನು? ಸಮ್ಮತಿಗೂ,ಅಸಮ್ಮತಿಗೂ ನೀನೇ ಸಾಕ್ಷಿ ಸಮಾಧಾನಕ್ಕೂ,ಅಸಮಾಧಾನಕ್ಕೂ ನೀನೇ ಉತ್ತರ ಹೇಳಲಾಗದ,ಹೇಳಬಯಸುವ ಬಯಕೆಗಳಿಗೆಲ್ಲದಕ್ಕೂ ಉದ್ದನೆಯ ಚಿಂತೆಯ ಹಿಂದೆ ಅವಿತಿರುವೆ ನಿ ಅಷ್ಟೇಕೆ ಮೌನ ನೀನು? ಕಣ್ಣ ಅಂಚಿನಿಂದಲೋ ಅದರಗಳ ತಡಬಡಿಕೆಯಿಂದಲೋ ಏನನ್ನೋ ಉದ್ಗರಿಸುವ ಇಚ್ಛೆಯಿದ್ದರು ಗಂಟಲು ಬಿಗಿಯುವ ದುಃಖದಲ್ಲಿ ಅಡಗಿದೆ ನಿ ಅಷ್ಟೇಕೆ ಮೌನ ನೀನು? ಅರಿತವರಿಗೊಂದು ಅರ್ಥ ಅರಿಯದವರಿಗೊಂದು ಅರ್ಥವೆಂಬಂತ್ತೆ ಅಂತಃಕರಣದ ಆಳದಿಂದ ಘರ್ಜಿಸುವ ನಿರವತೆ ನೀನು, ನಿನ್ನ ಮೆಟ್ಟಿ ಕಣ್ಣಂಚಿನ ಹೊರಗೆ ಚಿಮ್ಮಲ್ಲೆತ್ನಿಸುವ ಕಣ್ಣಿರುಗಳ  ಹಿಡಿದಿಟ್ಟುಕೊಂಡಿರುವೆ ನಿ ಅಷ್ಟೇಕೆ ಮೌನ ನೀನು?                                    ............ಬಸವ.