ಮೌನವೇ ನೀನೇಕೆ ಅಷ್ಟು ಮೌನ?


ಮುರಿದ ಮನಗಲ್ಲಿಯೂ ನಿ
ಮಿಡಿದ ಮನಗಳಲ್ಲಿಯೂ ನಿ,
ಏನನ್ನು ನುಡಿಯದೆಯೇ
ಹಲವು ನುಡಿಗಳ ಹೇಳುವ ನಿ
ಮೆಲ್ಲಗೆ ತಟಸ್ಥತೆ ತಾಳಿ ನಿಂತುರುವೆ ನಿ
ಅಷ್ಟೇಕೆ ಮೌನ ನೀನು?

ಸಮ್ಮತಿಗೂ,ಅಸಮ್ಮತಿಗೂ ನೀನೇ ಸಾಕ್ಷಿ
ಸಮಾಧಾನಕ್ಕೂ,ಅಸಮಾಧಾನಕ್ಕೂ ನೀನೇ ಉತ್ತರ
ಹೇಳಲಾಗದ,ಹೇಳಬಯಸುವ ಬಯಕೆಗಳಿಗೆಲ್ಲದಕ್ಕೂ
ಉದ್ದನೆಯ ಚಿಂತೆಯ ಹಿಂದೆ ಅವಿತಿರುವೆ ನಿ
ಅಷ್ಟೇಕೆ ಮೌನ ನೀನು?

ಕಣ್ಣ ಅಂಚಿನಿಂದಲೋ
ಅದರಗಳ ತಡಬಡಿಕೆಯಿಂದಲೋ
ಏನನ್ನೋ ಉದ್ಗರಿಸುವ ಇಚ್ಛೆಯಿದ್ದರು
ಗಂಟಲು ಬಿಗಿಯುವ ದುಃಖದಲ್ಲಿ ಅಡಗಿದೆ ನಿ
ಅಷ್ಟೇಕೆ ಮೌನ ನೀನು?

ಅರಿತವರಿಗೊಂದು ಅರ್ಥ
ಅರಿಯದವರಿಗೊಂದು ಅರ್ಥವೆಂಬಂತ್ತೆ
ಅಂತಃಕರಣದ ಆಳದಿಂದ ಘರ್ಜಿಸುವ ನಿರವತೆ ನೀನು,
ನಿನ್ನ ಮೆಟ್ಟಿ ಕಣ್ಣಂಚಿನ ಹೊರಗೆ ಚಿಮ್ಮಲ್ಲೆತ್ನಿಸುವ ಕಣ್ಣಿರುಗಳ  ಹಿಡಿದಿಟ್ಟುಕೊಂಡಿರುವೆ ನಿ
ಅಷ್ಟೇಕೆ ಮೌನ ನೀನು? 

                                  ............ಬಸವ.

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ