ಹೃದಯ ಹಂದರದೊಳಗೆ.



ಇನ್ನೇಕೆ ವಿಳಂಬ ತಳುಕಿಸುವಲ್ಲಿ ಅಂತರಾಳ
ಎಂದಿಗೂ ಮಿಡಿಯದೇ ಇದ್ದದ್ದಲ್ಲ ಇದು
ಬರಲಿ ಮತ್ತೆ ಬೆಳಕಿಗೆ ಸ್ವಾರ್ಥದ ಮಂಪರಿನಿಂದ.
ಎಲ್ಲೋ ಮರೆಯಾಗಿರುವ ಅಂತಃಕರಣದ ಕನ್ನಡಿ
ಇಂದು ಮಿಡಿದು ನಗಲಿ ಬಿಡು ತನ್ನಿಚ್ಛೆಯಂತ್ತೆ ತನ್ನವರಿಗಾಗಿ.

ಅದೆಷ್ಟು ಭಾರವಾಯಿತಲ್ಲ ಹೃದಯ
ಬಿಗಿ ಹಿಡಿದು ಗಂಟಲು ಬಿಗಿಯುವ ದುಃಖಗಳಿಂದ,
ಹಗುರಾಯಿಸು ಒಂದೊಮ್ಮೆ ಬಿಟ್ಟು ಅಂತರಂಗದ ಸ್ವೇಚ್ಚಾಚಾರ
ಮುದ ನೀಡು ಹೃದಯಕ್ಕೊಮ್ಮೆ ಮಿಡಿದು ಎಲ್ಲದಕ್ಕೂ,
ಹೇಳದೆಯೂ ಮಿಡಿಯಲು ತುಡಿಯುವ ಮನಕ್ಕೆ
ಬಿಟ್ಟು ಬಿಡೋಮ್ಮೆ ಹಗುರಾಗಲು ಹೊಕ್ಕಿ ಹೃದಯ ಹಂದರದೊಳಗೆ.

ಕಾಯಬೇಕಿಲ್ಲ ಯಾವುದಕ್ಕೂ ಬಿಗಿದು ನುಡಿಸಲು
ತುಂಡುಗೊಂಡ ಆತ್ಮೀಯತೆಯ ಒಲವ ತಂತಿಗಳ,
ಸಾಕಲ್ಲವೇ ಹೃದಯದಲ್ಲಿ  ಹುಟ್ಟಿ ಕಣ್ಣುಗಳಲಿ ಮೂಡಿದ ತೆಂವ 
ಬಿಗಿದ ಗಂಟಲು ದಾಟಿ ಉದ್ಘರಿಸಲು ಒಲವ ಗೀತೆ,
 ಬಿಡೊಮ್ಮೆ ಹಾತೊರೆಯುತ್ತಿರುವ ಅಂತರಂಗಕ್ಕೆ
ಒಂದೊಮ್ಮೆ ತಬ್ಬಿ ತುಳುಕಲು ಭಾವೋದ್ವೇಗದಿ  ತನ್ನೊಲವುಗಳ.

                                                    ......ಬಸವ.

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ