Posts

Showing posts from December, 2021

ತಾಂಜಾವೂರಿನ ಬೃಹದೀಶ್ವರ.

ಐದಾರು ವರ್ಷಗಳ ಹಿಂದೆ ದುಬಾರಿಯಾಗಿದ್ದ ಅಂತರ್ಜಾಲ ಏಕಾಏಕಿ ಅಗ್ಗವಾಯಿತು, ಅಂತರ್ಜಾಲ ಎಲ್ಲೆಡೆ ಹಬ್ಬಿತು,ಅದರೊಂದಿಗೆ ಅನೇಕ ವಿಚಾರಗಳು,ಸಿದ್ಧಾಂತಗಳು,ಸತ್ಯಗಳು,ನೈಜ್ಯತೆಗಳು, ಎಲ್ಲವೂ ಎಲ್ಲರೆದುರಿಗೆ ಅನಾವರಣಗೊಳ್ಳಲಿಕೆ ಶುರುಯಾಯ್ತು. ಈ ಮೊದಲು,ಭಾರತೀಯ ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಬಗ್ಗೆ ಅಭಿರುಚಿ ಹೊಂದಿದ ಅನೇಕರು ಅದೆಲ್ಲವನ್ನ ಪುಸ್ತಕದಲ್ಲಿ ತುಂಬಿಟ್ಟಿದ್ದರು,ಆದರೆ ಅದು ಭಾರತಿಯರೆಲ್ಲರಿಗೂ ತಲುಪಿತು ಅನ್ನುವುದು ಅಜೀರ್ಣದ ಮಾತು. ಈ ಅಂತರ್ಜಾಲದ ಬಳಕೆಯಿಂದ, ಭಾರತದ ವಾಸ್ತುಶಿಲ್ಪದ ಮತ್ತು ಅದರ ಪುರಾತನ ಪ್ರಾಚೀನ ಇತಿಹಾಸದ ಅನುಯಾಯಿಗಳು ಸುಂದರ ಮತ್ತು ಭವ್ಯ ದೇವಾಲಯಗಳ ಬಗ್ಗೆ ಮಾಹಿತಿ ಹಂಚುವದನ್ನ ಪ್ರಾರಂಭಿಸಿದರು,ಅದರ ಕೃತಾರ್ಥವಾಗಿ ಅಂತರ್ಜಾಲದಲ್ಲಿ ಎಲ್ಲೆಡೆ ಹಬ್ಬಿದ ಅನೇಕ ದೇವಾಲಯಗಳ ಚಿತ್ರಗಳಲ್ಲಿ ತಂಜಾವೂರಿನ ವಿಶ್ವವಿಖ್ಯಾತ, ಅಂತಾರಾಷ್ಟ್ರೀಯ ಸ್ಮಾರಕದ ಗುರುತಿನ, ಸಾವಿರ ವರ್ಷದ ಬೃಹದೀಶ್ವರ ದೇವಸ್ಥಾನವೂ ಒಂದು. ಸುಮಾರು ನಾಲ್ಕೈದು ವರ್ಷಗಳ ಹಿಂದಿನಿಂದಲೇ ಈ ದೇವಸ್ಥಾನವನ್ನ ನೋಡಬೇಕು,ಅದರ ಪ್ರಾಂಗಣದಲ್ಲಿ ಸುತ್ತಾಡಬೇಕೆನ್ನುವ ಹಂಬಲ,ಅದು ದಿನ ಕಳೆದಷ್ಟು ಸ್ಪುಟಗೊಳ್ಳುತ್ತಲೇ ಇತ್ತು. ಅದೆಷ್ಟೋ ಬಾರಿ ಕಲಬುರಗಿಯಿಂದ ತಾಂಜಾವೂರಿನ ತನಕ ಹೋಗುವ ವ್ಯವಸ್ಥೆಯ ಬಗ್ಗೆ ಮ್ಯಾಪ್ ನಲ್ಲಿ ವಿಹರಿಸಿ ವಿಚಾರಿಸಿದ್ದುಂಟು,ಒಮ್ಮೊಮ್ಮೆ ನಿಶ್ಚಯಿಸಿದ್ದು ಉಂಟು, ಆದರೆ ಅದ್ಯಾವು ಯಶಸ್ಸು ಕಾಣಲಿಲ್ಲ. ಬೆಂಗಳೂರಿಗೆ ಇದು ಇನ್ನೂ ಸಮೀಪ, ಇವಾಗ ಇ

ಭೈರಜ್ಜನ "ಕವಲು".

ದೈನಂದಿನ ಒತ್ತಡಗಳು,ಚಿಂತೆಗಳು,ಆಯಾಸಗಳಂತಹ ಹಲವು ವಿಷಯಗಳಿಂದ ದೂರ ಕೊಂಡೊಯ್ಯುವ ವಸ್ತುಗಳ ಪಟ್ಟಿಯಲ್ಲಿ ಪುಸ್ತಕವೂ ಒಂದು ಸ್ಥಾನ ಗಿಟ್ಟಿಸಿಕೊಂಡಿದೆ ಎಂದರೆ ಎಲ್ಲರೂ ಒಪ್ಪುವಂತಹ ವಿಷಯವೇ ಹೌದು.  ಯಾವುದಾದರೂ ಒಂದು ಪುಸ್ತಕದ ದೆಸೆಯಲ್ಲಿ ದಿನದ ಸ್ವಲ್ಪ ಭಾಗವಾದರು ಕಳೆಯಲೇಬೇಕು, ಒಂದು ಹೊಸತನವನ್ನ ಕೊಡುತ್ತಲೇ ಹೋಗುತ್ತವೆ. ಹೀಗಿದ್ದಾಗ,ಮಾಲ್ ವೊಂದರಲ್ಲಿ ಸುತ್ತಾಡುತ್ತಿದ್ದಾಗ ಸಪ್ನ ಪುಸ್ತಕ ಮಳಿಗೆಯಲ್ಲಿ ಮೆರೆಯುತ್ತಿದ್ದ ಹಲವು ಪುಸ್ತಕಗಳ ಕಪಾಟುಗಳಲ್ಲಿ ಎಸ್ ಎಲ್ ಭೈರಪ್ಪನವರ ಪುಸ್ತಕಗಳೂ ತಾವಾರಿಗಿಂತ ಕಮ್ಮಿಯಿಲ್ಲ ಎಂಬಂತ್ತೇ ಕುತಿದ್ದದ್ದು ಕಣ್ಣಿಗೆ ಬಿತ್ತು. ಯಾವೊದೋ ಒಂದು ಪುಸ್ತಕ ತೆಗೆದುಕೊಂಡು ಓದುವ ಮೊದಲು ಅದರ ಮುನ್ನುಡಿ ಓದುವುದು ಒಂದು ರಿವಾಜು ಅಥವಾ ಆ ಪುಸ್ತಕ ಬರೆದವರ ಚಿಂತನೆಗಳನ್ನ  ತಿಳುದುಕೊಳ್ಳುವುದೋ ಅಥವಾ ಅದರ ಬಗೆಗಿನ ಮತ್ತೊರ್ವರು ಬರೆದ ವಿಮರ್ಶೆಯನ್ನ ಓದಿ ಪುಸ್ತಕ ತೆಗೆದು ಕೊಳ್ಳೋದು ಓದುಗರೆಲ್ಲರೂ ಪಾಲಿಸುವಂತಹ ಮತ್ತು ಪಾಲಿಸಲೇಬೇಕಾದ ಒಂದು ಅಲಿಖಿತ ರೂಢಿ. ಇಲ್ಲ ಸಲ್ಲದ ಪುಸ್ತಕ ಓದಿ,ಅದರ ಹುಚ್ಚು ವಿಚಾರವೋ ಅಥವಾ ಸಿದ್ದಂತಾಗಳನ್ನೋ ತಲೆಯಲ್ಲಿ ತುಂಬಿಕೊಂಡು ತಲೆ ಭಾರಗೊಳಿಸುವುದು ಯಾರಿಗೂ ಇಷ್ಟವಿಲ್ಲದ ಸಂಗತಿ. ಒಂದುವೇಳೆ ಓದಿದರೂ, ಅವುಗಳು ನಮ್ಮಲ್ಲಿನ ಸಿದ್ಧಾಂತಗಳಿಗೆ ಧಕ್ಕೆ ತರುವುದಿಲ್ಲವೆಂದು ಅರಿತಿದ್ದರೂ,ಎಲ್ಲೋ ಒಂದು ಕಡೆ ಮರುಳು ಮಾಡಿ ನಮ್ಮ ಸಿದ್ಧಾಂತ ಮತ್ತು ಚಿಂತನೆಗಳಿಗೆ ಒಂದಷ್ಟು ಕಲ್ಮಶ ಬೆರಸಲೂ ಬಹುದು.

ವಿಮುಕ್ತನಾಗು.

ಮುಕ್ತನಾಗು ವಿಮುಕ್ತನಾಗು ವಿರಕ್ತನಾಗು ಹುಸಿ ಸುಖ ದುಃಖಗಳಿಂದ ಪಾರಾಗು, ನೀನಾಗು ನಿನ್ನಲಿರುವವನಿಗೆ ಅಣಿಯಾಗು, ಬಂಧನಗಳ ಭಾರ ಹೆಚ್ಚಾದಷ್ಟು ಮುಳುಗುವೆ ಮುಲುಗುವೆ. ಅದನಿದನರಿಯುವ ಗೋಜಿಗೆ ಬಲಿಯಾಗದೆ ಅರಿಯಬೇಕಿದೆ ಇಲ್ಲಿ ತಾನೇನೆಂಬುದನ, ಬೆಸೆಯಕಿದೆ ಅವನೊಂದಿಗೊಂದು ಕೊಂಡಿ ಅಲ್ಲೆಲ್ಲೋ ಕಳೆದು ಹೋದ ಆತ್ಮದ ಅರಿವಿಗಾಗಿ. ಶೃಂಗಾರ ಜೀವಕ್ಕೂ ಹೌದು ಶವಕ್ಕೂ ಹೌದು ಮತ್ತೇಕೆ ಹಾತೊರೆಯಬೇಕಿದೆ ನಶ್ವರಕ್ಕೆ, ಕಂಡರೂ ಭಾವಸಾಗರದಾಚೆಗಿನ ತೀರ ಅದರೆಡೆಗೆ ಈಜುವಲ್ಲೇಕೆ ತತ್ಸಾರ,ತಿರಸ್ಕಾರ. ಸ್ವಭಾವದ ಮೇಲಿನ ಕ್ಷಣಿಕ ಪ್ರಭಾವಕ್ಕೊ ಲೌಕಿಕ ಬದುಕಿನ ವ್ಯಸನದ ಪ್ರವಾಹಕ್ಕೊ ಚೇತರಿಸಿಕೊ ಬಲಿಯಾಗಿ ಬಳಲುತ್ತಿರುವ ಮನಸ್ಥಿತಿಯ ಮತ್ತೆ ಚಿಗುರೊಡೆದು ಚಿಮ್ಮಬೇಕಿದೆ ಅವನೆಡೆಗೆ ಅವನೆತ್ತರದೆಡೆಗೆ.                                            ...............ಬಸವ.