ಭೈರಜ್ಜನ "ಕವಲು".



ದೈನಂದಿನ ಒತ್ತಡಗಳು,ಚಿಂತೆಗಳು,ಆಯಾಸಗಳಂತಹ ಹಲವು ವಿಷಯಗಳಿಂದ ದೂರ ಕೊಂಡೊಯ್ಯುವ ವಸ್ತುಗಳ ಪಟ್ಟಿಯಲ್ಲಿ ಪುಸ್ತಕವೂ ಒಂದು ಸ್ಥಾನ ಗಿಟ್ಟಿಸಿಕೊಂಡಿದೆ ಎಂದರೆ ಎಲ್ಲರೂ ಒಪ್ಪುವಂತಹ ವಿಷಯವೇ ಹೌದು.  ಯಾವುದಾದರೂ ಒಂದು ಪುಸ್ತಕದ ದೆಸೆಯಲ್ಲಿ ದಿನದ ಸ್ವಲ್ಪ ಭಾಗವಾದರು ಕಳೆಯಲೇಬೇಕು, ಒಂದು ಹೊಸತನವನ್ನ ಕೊಡುತ್ತಲೇ ಹೋಗುತ್ತವೆ. ಹೀಗಿದ್ದಾಗ,ಮಾಲ್ ವೊಂದರಲ್ಲಿ ಸುತ್ತಾಡುತ್ತಿದ್ದಾಗ ಸಪ್ನ ಪುಸ್ತಕ ಮಳಿಗೆಯಲ್ಲಿ ಮೆರೆಯುತ್ತಿದ್ದ ಹಲವು ಪುಸ್ತಕಗಳ ಕಪಾಟುಗಳಲ್ಲಿ ಎಸ್ ಎಲ್ ಭೈರಪ್ಪನವರ ಪುಸ್ತಕಗಳೂ ತಾವಾರಿಗಿಂತ ಕಮ್ಮಿಯಿಲ್ಲ ಎಂಬಂತ್ತೇ ಕುತಿದ್ದದ್ದು ಕಣ್ಣಿಗೆ ಬಿತ್ತು.
ಯಾವೊದೋ ಒಂದು ಪುಸ್ತಕ ತೆಗೆದುಕೊಂಡು ಓದುವ ಮೊದಲು ಅದರ ಮುನ್ನುಡಿ ಓದುವುದು ಒಂದು ರಿವಾಜು ಅಥವಾ ಆ ಪುಸ್ತಕ ಬರೆದವರ ಚಿಂತನೆಗಳನ್ನ  ತಿಳುದುಕೊಳ್ಳುವುದೋ ಅಥವಾ ಅದರ ಬಗೆಗಿನ ಮತ್ತೊರ್ವರು ಬರೆದ ವಿಮರ್ಶೆಯನ್ನ ಓದಿ ಪುಸ್ತಕ ತೆಗೆದು ಕೊಳ್ಳೋದು ಓದುಗರೆಲ್ಲರೂ ಪಾಲಿಸುವಂತಹ ಮತ್ತು ಪಾಲಿಸಲೇಬೇಕಾದ ಒಂದು ಅಲಿಖಿತ ರೂಢಿ. ಇಲ್ಲ ಸಲ್ಲದ ಪುಸ್ತಕ ಓದಿ,ಅದರ ಹುಚ್ಚು ವಿಚಾರವೋ ಅಥವಾ ಸಿದ್ದಂತಾಗಳನ್ನೋ ತಲೆಯಲ್ಲಿ ತುಂಬಿಕೊಂಡು ತಲೆ ಭಾರಗೊಳಿಸುವುದು ಯಾರಿಗೂ ಇಷ್ಟವಿಲ್ಲದ ಸಂಗತಿ. ಒಂದುವೇಳೆ ಓದಿದರೂ, ಅವುಗಳು ನಮ್ಮಲ್ಲಿನ ಸಿದ್ಧಾಂತಗಳಿಗೆ ಧಕ್ಕೆ ತರುವುದಿಲ್ಲವೆಂದು ಅರಿತಿದ್ದರೂ,ಎಲ್ಲೋ ಒಂದು ಕಡೆ ಮರುಳು ಮಾಡಿ ನಮ್ಮ ಸಿದ್ಧಾಂತ ಮತ್ತು ಚಿಂತನೆಗಳಿಗೆ ಒಂದಷ್ಟು ಕಲ್ಮಶ ಬೆರಸಲೂ ಬಹುದು.  ಆದರೆ ಭೈರಪ್ಪನವರ ಪುಸ್ತಕಗಳ ವಿಚಾರದಲ್ಲಿ ಈ ಎಲ್ಲಾ ಸಂಗತಿಗಳನ್ನ ಚಿಂತಿಸದೆಯೇ ಮುಕ್ತ ಮನಸ್ಸಿನಿಂದ ಓದುವ ಭರವಸೆಯನ್ನ ಅವರು ಅದಾಗಲೇ ಕೊಟ್ಟಿರುತ್ತಾರೆ.

ಅಂತೆಯೇ "ಕವಲು" ಪುಸ್ತಕ ಕೈಗೆತ್ತುಕೊಂಡು ಬ್ಯಾಗಿನಲಿ ತುರುಕಿದೆ.ಬಿಡುವಿನ ಸಮಯದಲ್ಲಿ ಓದಬೇಕು ಅಂತ ಹೇಳಿದರೆ ಭೈರಜ್ಜನ ಮತ್ತು ಆ ಪುಸ್ತಕದ ಘನತೆ ಕುಗ್ಗಿಸಿದೆನು ಅನ್ನುವ ಅಪಾರ್ಥ ಭಾವ ನನ್ನಲ್ಲಿ ಮೂಡಬಹುದು, ಹಾಗಾಗಿ ಸಮಯ ಬಿಡುವು ಮಾಡಿಕೊಂಡು ಓದಿದೆ ಅಂತಲೇ ಹೇಳುತ್ತೇನೆ ಮತ್ತು ಹೇಳಲೇಬೇಕಾದ ಘನತೆ ಇಬ್ಬರೂ ಕಾಯ್ದುಕೊಂಡಿದ್ದಾರೆ.

ಕವಲು ಎಂದಾಕ್ಷಣ ಕವಾಲುದಾರಿ ಅನ್ನುವ ಇನ್ನೊಂದು ಶಬ್ದ ತಕ್ಷಬವೇ ಪಕ್ಕಕ್ಕೆ ಬಂದು ಮುಖತೋರಿಸುತ್ತದೆ, ಶೀರ್ಷಿಕೆಯೇ ಹೇಳುವಂತೆ ವಿಚಾರಗಳು ಕವಲೊಡೆಯುವುದೋ ಅಥವಾ ಸಂಬಂಧಗಳು ಕವಲೊಡೆಯುವುದೋ ಅಥವಾ ಸಂಸ್ಕೃತಿ ಕವಲೊಡೆಯುವುದೋ ಅನ್ನುವ ಮುನ್ನೋಟ ಮೊದಲಿಗಾಗಿ ಹೊಳೆಯುತ್ತದೆ, ಕ್ರಮೇಣ ಅದು ಹೌದು ಅನ್ನುವ ನಿಲುವು ತಾಳಿಕೊಳ್ಳುತ್ತದೆ. 
ಹಳ್ಳಿಯಿಂದ ಬಂದು ವಿದ್ಯಾವಂತರಾಗಿ ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಂಡು ಬೃಹತ್ ಕಂಪನಿಗಳಿಗೆ ಸ್ವತಃ ಮಾಲೀಕರಾಗಿರುವ ಅದೆಷ್ಟೋ ದೃಷ್ಟಾಂತಗಳನ್ನ ಬೆಂಗಳೂರು ಒದಗಿಸುತ್ತದೆ. ಅದನ್ನ ಅವಲೋಕಿಸಿದ ಭೈರಪ್ಪನವರು, ಕಾಲ್ಪನಿಕ ಜಯಕುಮಾರ್ ಮತ್ತು ವಿನಯಚಂದ್ರ ಎಂಬ ಇಬ್ಬರನ್ನ ಎಳೆತಂದು ನಮ್ಮೆದುರಿಗೆ ಕುರಿಸುತ್ತಾರೆ, ಅವರಿಂದ ಕಥೆ ಹೇಳಿಸುತ್ತಾರೆ.

ಸ್ತ್ರೀವಾದಿ ಮತ್ತು ಸ್ತ್ರಿವಿಮೋಚನೆ ಎಂಬ ಪಾಶ್ಚಿಮಾತ್ಯದ ಬೀಜ ತನ್ನ ತಲೆಯಲ್ಲಿ ತನ್ನ ಅಧ್ಯಾಪಕಿಯಿಂದ ತುಂಬಿಕೊಂಡಿದ್ದ ಮಂಗಳೇ ಎರಡನೇ ಹೆಂಡಿತಿಯಾಗಿ ಜಯಕುಮಾರನ ಕೊರಳಿಗೂ ಮತ್ತು ನೆಮ್ಮದಿಗೂ ಜೋತು ಬಿಳುತ್ತಾಳೆ. ಮುಕ್ತ ಸಂಬಂಧಕ್ಕೆ ತನ್ನದೇನು ಅಡ್ಡಿಯಿಲ್ಲವೆಂಬಂತೆ ತನ್ನನ್ನು ತಾನೇ ಬಿತ್ತರಿಸಿಕೊಂಡು ಜಯಕುಮಾರನ ಬಂಗಲೆಯ ಶಯನಕೋಣೆಯ ಹಾಸಿಗೆಯಲ್ಲಿ ಬೆತ್ತಲಾಗಿ, ಸ್ತ್ರೀವಾದಿಗಳ ಸಂಘದ ಸಹಾಯ ಪಡೆದು,ಮಹಿಳೆಯರ ಪರವಾಗಿರುವ ಕಾನೂನುಗಳ ದೌರ್ಬಳಕೆಯಿಂದ ಹೆದರಿಸಿ ಬೆದರಿಸಿ ಜಯಕುಮಾರನ ಬಾಳಿನಲ್ಲಿ ಕತ್ತಲಾಗುತ್ತಾಳೆ. ಇತ್ತ ಇಳಾ ಎಂಬುವಳು ಆಕ್ಸ್ಫರ್ಡ್ ನಲ್ಲಿ ಓದಿ ಪದವಿ ಪಡೆದು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಭೋಧಿಸುತ್ತಿದ್ದ ಉಪನ್ಯಾಸಕಿ. ಭಾರತ ಮತ್ತು ಭಾರತೀಯ ಸಂಸ್ಕೃತಿಯನ್ನ ತುಚ್ಛವೆಂದು ಮನದಟ್ಟು ಮಾಡಿಕೊಂಡು ಸದಾ ಪಾಶ್ಚಿಮಾತ್ಯ ಸಂಸ್ಕೃತಿಯನ್ನ ಅಲ್ಲಿನ ಸ್ವಾತಂತ್ರ್ಯವೆಂಬ ಸ್ವೇಚ್ಛಾಚಾರವನ್ನ ಹೋಗಳುತ್ತಲೇ ಭಾರತೀಯತೆಯನ್ನ ತೆಗಳುತ್ತಿದ್ದವಳು.  ತನ್ನ ಮುಕ್ತ ವಿಚಾರ ಮತ್ತು ಸೋ ಕಾಲ್ಡ್ ಘನತೆಯ ಜೀವನಶೈಲಿಯಿಂದ ವಿನಯಚಂದ್ರನಿಗೆ ಮೋಹಿಸಿದವಳು ಪರಸ್ಪರ ಸಮ್ಮತಿಯೊಂದಿಗೆ ಮದುವೆಯಾಗಿ ವಿನಯಚಂದ್ರನ ಕುಟುಂಬದ ಬಗ್ಗೆ ತಾತ್ಸಾರ ಮುಡಿಸಿಕೊಂಡು ಇವರುಗಳು ತನಗೆ ಸಂಬಂಧವೇ ಇಲ್ಲ ಅನ್ನುವಂತೆ ತಾನೂ ಇದ್ದು ತನ್ನ ಗಂಡನನ್ನೂ ಇರುವಂತೆ  ಒತ್ತಾಯಿಸುವಾಕೆ.ಆದರೆ ಇದೆಲ್ಲಾ ತಿಳಿದ ವಿನಯಚಂದ್ರನಿಗೆ ಎಲ್ಲಿಲ್ಲದ ಸಂಕಟ ಶುರುವಾಗುತ್ತದೆ,ನೆಮ್ಮದಿ ಹಾಳಾಗಿರುತ್ತದೆ.

 ಸ್ತ್ರೀವಾದದ ಮಂಕು ಬುದ್ದಿಗೆ ಬಿದ್ದವಳನ್ನ ಮದುವೆಯಾದ ಇಬ್ಬರ ಪಾಡು ನೆಮ್ಮದಿ ಇಲ್ಲದಂತಾಗುತ್ತದೆ.  ವಿಚ್ಛೇದನ ಪ್ರಸ್ತಾವನೆ ಇಟ್ಟು ಅರ್ಧಕ್ಕಿಂತ ಹೆಚ್ಚು ಆಸ್ತಿ ಪಡೆದು, ಮಂಗಳೆ ಜಯಕುಮಾರನ ಬದುಕನ್ನ ಅಂಧಕಾರದಲ್ಲಿ ನುಕುತ್ತಾಳೆ. ಅವನ ಮೊದಲ ಹೆಂಡತಿಯ ಮಗಳಿಗೂ ಮತ್ತು ಅವನಿಗೂ ಕೆಟ್ಟ ಸಂಬಂಧವಿದೆ ಎಂಬ ಚುಚ್ಚು ಮಾತುಗಳನ್ನಾಡಿದಕ್ಕೆ ಜಯಕುಮಾರನು ಕೆರಳಿ, ಮಂಗಳೆಯ ಕೆನ್ನೆಗೆ ಎರಡು ಬಾರಿಸಿ,ಕಾಲಿನಿಂದ ಒದ್ದದ್ದಕ್ಕಾಗಿ ಒಂದು ರಾತ್ರಿ ಜೈಲುವಾಸವು ಅನುಭವಿಸುತ್ತಾನೆ. ವಿಚ್ಛೇದನದಿಂದ ಕೆಟ್ಟ ಗಂಡನಿಂದ ನೆಮ್ಮದಿ ಪಡೆಯಲಿ ಅನ್ನುವ ವಿಚಾರದಿಂದ ವಿಚ್ಛೇದನ ಕಾನೂನು ಬಂದಿದ್ದು ಸರಿಯಾದ ವಿಚಾರ,ಆದರೆ ಅದರ ದುರ್ಬಳಕೆಯೂ ಆಗುತ್ತಿರುವುದು ಭಾರತದ ಬಲಿಷ್ಠತೆಗೆ ಕಾರಣವಾದ ಕುಟುಂಬ ಪದ್ಧತಿಯನ್ನ ಅಲ್ಲಾಡಿಸುತ್ತಿದೆ. ವಿಚ್ಛೇದನದ ನಂತರ ಮಕ್ಕಳ ಮೇಲೆ ಏನು ಪರಿಣಾಮ ಬೀರುತ್ತದೆ ಅನ್ನುವ ಖಯಾಲಿ ದಂಪತಿಗಳು ಮಾಡದೆ ಇರುವುದು ಅವರ ಸ್ವಾರ್ಥವನ್ನ ಬಿಂಬಿಸುತ್ತದೆ. ಇದಕ್ಕೆ ಸಾಕ್ಷಿ ಅನ್ನುವಂತೆ  ಮಂಗಳೆಯ ಮಗ. ತಾನು ಜಯಕುಮಾರನ ಮಗನೊ ಅಥವಾ ಪ್ರಭಾಕರನ ಮಗನೊ ಅನ್ನುವ ಸಂಶಯವನ್ನ ಆ ಮಗುವಿನ ತಲೆಯಲ್ಲಿ ಮೂಡಲಿಕೆ ಕಾರಣ ತನ್ನ ತಾಯಿಯನ್ನ ಹಾದರದವಳು ಮತ್ತು ಅವನು ಹಾದರಕ್ಕೆ ಹುಟ್ಟಿದವನು ಅನ್ನುವ ಸಮಾಜದ ಚುಚ್ಚುಮಾತುಗಳು. ಇದರ ಸ್ಪಷ್ಠತೆ ಕೊಡಬೇಕಿದ್ದವಳೇ ಒಂದೆರಡು ಬಾರಿಸಿ ಸುಮ್ಮನಾಗಿಸುತ್ತಾಳೆ ಅಂದಲ್ಲಿ ಆ ಮಗುವಿನ ಮನಸ್ಸಿನ ಗೊಂದಲಗಳು ಇನ್ನೂ ಸ್ಫುಟಗೊಂಡು ನಿದ್ರಾಹೀನವಾಗಿ, ಮಗುವನ್ನ ಚಿಂತೆಗಿಡುಮಾಡುತ್ತವೆ.

ಹಾಗಿದ್ದರೆ ಇಲ್ಲಿ ಮಹಿಳೆಯರು ಸ್ತ್ರೀವಾದಿ ಆಗಿರಬಾರದೆ? ಸಮಾನತೆಗೆ ಅವರು ಹೋರಾಡಬಾರದೆ? ಸ್ವಾತಂತ್ರ್ಯ ಅವರಿಗೆ ಬೇಡವೇ? ಅನ್ನುವ ಹಲವು ಪ್ರಶ್ನೆಗಳು ತಲೆ ಎತ್ತುತ್ತವೇ.ಅವುಗಳಿಗೆ ಪ್ರತ್ಯುತ್ತರವಾಗಿ ಜಯಕುಮಾರನ ಮೊದಲನೆ ಹೆಂಡತಿ ವೈಜಯಂತಿ ಹೊರಹೊಮ್ಮುತ್ತಾಳೆ. ಅಪ್ಪಟ ಭಾರತೀಯ ನಾರಿಯಂತೆ ತುಂಬು ಸೆರಗಿನ ಸೀರೆ,ಹಣೆಗೆ ಕುಂಕುಮ,ಓಲೆ, ಬಳೆಗಳನ್ನ ಧರಿಸಿದ ಮಹಾಲಕ್ಷ್ಮಿ ಸ್ವರೂಪದವಳು. ಜಯಕುಮಾರನ ಕಂಪನಿಯನ್ನ ಕಟ್ಟಿ ಬೆಳಸಲಿಕೆ ಜಯಕುಮಾರನಿಗೆ ಬೆನ್ನೆಲುಬಾಗಿ ನಿಂತು, ತಾನೇ ಮುಂದಾಳತ್ವ ವಹಿಸಿ, ತನ್ನ ಒಡವೆಯನ್ನೆಲ್ಲಾ ಮಾರಿ,ಬೆಳೆಸಿದ ಕಂಪನಿಯ ಮೇಲ್ವಿಚಾರಕಿಯೂ ಆಗಿ, ಸ್ವಯಂ ಮಹಾಲಕ್ಷ್ಮಿಯೇ ಕಂಪನಿಯಲ್ಲಿ ತಿರುಗಾಡುತ್ತಿದ್ದಾಳೆನೋ ಅನ್ನುವ ಘನತೆ ಆವಳಲ್ಲಿತ್ತು ಮತ್ತು ಅಲ್ಲಿನ ಕಾರ್ಮಿಕರೆಲ್ಲರೂ ಅದೇ ಭಾವನೆಯಿಂದ ಗೌರವಿಸುತ್ತಿದ್ದರು. ಫೆಮಿನಿಸ್ಮ್ ಗೆ ತಾನೇ ರಾಯಭಾರಿ ಅನ್ನುವ ರೀತಿ ಬದುಕಿದವಳು ಜಯಕುಮಾರನ ಎರಡನೇ ಕಣ್ಣಾಗಿದ್ದವಳು.

ಭಾರತೀಯ ಸಂಸ್ಕೃತಿಯಲ್ಲಿ ಮೊದಲಿನಿಂದಲೂ ಸ್ತ್ರೀವಾದವಿದೆ, ಸ್ತ್ರೀ ಸಮಾನತೆ ಇದೆ, ಆದರೆ ಇತ್ತೀಚಿನ ದಿನಗಳ ಹೊಲಸು ಸಿದ್ಧಾಂತಗಳಿಗೆ ಬಲಿಯಾದ ಶೋಚನೀಯ ಮನಸ್ಥಿತಿ ಇರಲಿಲ್ಲ. ಅದೆಷ್ಟೋ ಮಹಾರಾಣಿಯರು ಇಡೀ ರಾಜ್ಯವನ್ನೇ ನಡೆಸಿಕೊಂಡು ಹೋಗುತ್ತಿದ್ದರಲ್ಲವೇ?,ಅದು ಸ್ತ್ರೀವಾದ. ಸ್ವಾಮೀನಿಷ್ಠೆಗೆ ಹೆಸರಾದ ಒನಕೆ ಓಬವ್ವಳು ದೇಶ ಪ್ರೇಮಿಯೂ ಹೌದೆನ್ನುವ ಸಂಗತಿ ಸ್ತ್ರೀವಾದ ಎತ್ತಿಹಿಡಿಯುತ್ತದೆ. ಅಲ್ಲದೆ ಭಾರತೀಯ ಸಂಸ್ಕೃತಿಯಲ್ಲಿ ನೆಲ ಜಲ ಪ್ರಕೃತಿಯನ್ನೆಲ್ಲಾ ಮಾತೆಗೆ ಹೋಲಿಸಿ ಪೂಜಿಸುವ ಮನೋಭಾವದ ಪಾವಿತ್ರ್ಯತೆ ಎಲ್ಲರಿಗೂ ತಿಳಿದಿರುವ ವಿಚಾರವೆ. ಸಮಾನತೆ ಅಂದಲ್ಲಿ ಅರ್ಧನಾರೀಶ್ವರನ ಚಿತ್ರ ಕಣ್ಣೆದುರಿಗೆ ಬರುತ್ತದೆ. ಹೀಗಿದ್ದಾಗಲೂ ಪಾಶ್ಚಿಮಾತ್ಯದ ಯಾವುದೋ ಯಕಃಶ್ಚಿತ ಮಹಿಳಾವಾದದ ಸಿದ್ಧಾಂತಗಳನ್ನ ತಲೆಯಲ್ಲಿ ತುಂಬಿಕೊಂಡು ಬಾಳು ಹಾಳುಮಾಡಿಕೊಳ್ಳುವುದು ಮತ್ತು ಹಾಳುಮಾಡುವ ಮನಃಸ್ಥಿತಿ ಬೆಳೆಸಿಕೊಳ್ಳುತ್ತಿರುವುದು ಇಂದಿನ ಭಾರತದ ಬಲಿಷ್ಠ ಕೌಟುಂಬಿಕ ಸಮಾಜವನ್ನ ಅಲ್ಲಾಡಿಸುವುದಕ್ಕೆ ಇವುಗಳೇ ಕಾರಣವೆಂದು ಹೇಳಬಹುದು.

ಇಳಾ ಮತ್ತು ಮಂಗಳೆಯ ಹಾದರದ ಹಮ್ಮಿರರಾದ ಪ್ರಭಾಕರ ಮತ್ತು ಮಂತ್ರಿಗಳು, ತಾವು ಇಷ್ಟಪಟ್ಟು ವರಿಸಿಕೊಳ್ಳೋದು ಭಾರತೀಯ ನಾರಿಯೇ ಹೊರತು ನಾರುವ ನಾರಿಯಲ್ಲ ಅನ್ನುವಂತ್ತೆ ಅವರನ್ನ ಧಿಕ್ಕರಿಸುವ ಸನ್ನಿವೇಶದಲ್ಲಿ ಪಾಶ್ಚಿಮಾತ್ಯ ಸ್ತ್ರೀವಾದ ಮಕಾಡೆ ಮಲಗಿರುತ್ತದೆ.
ಹೀಗೆ ಸ್ವಾತಂತ್ರ್ಯ ಮತ್ತು ಸ್ವೇಚ್ಚಾಚಾರದ ಮಧ್ಯೆ ಇರುವ ಕೂದಲೆಳೆಯ ಅಂತರವನ್ನ ಸೂಕ್ಷ್ಮವಾಗಿ ಎತ್ತಿಹಿಡಿದು ಹೆಣೆದ ಸುಂದರ ಕೃತಿ ಇದಾಗಿದ್ದು, ಎಲ್ಲರಲ್ಲಿಯೂ ಇಂದಿನ ಶೋಚನೀಯ ಸ್ಥಿತಿಬಗ್ಗೆ ಚಿಂತಿಸುವಂತೆ ಮಾಡಿ ನಮ್ಮಲ್ಲಿಯೇ ಹಲವು ಚಿಂತನ ಮಂಥನಗಳಿಗೆ ವೇದಿಕೆ ಮಾಡಿಕೊಡುತ್ತಾರೆ ಭೈರಪ್ಪನವರು.

Comments

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ