ಹೃದಯ ವೀಣೆ.
ಮಿಡಿಯುತ್ತಲೇ ಇರಲಿ ಹೃದಯ ವೀಣೆ
ಹೊಸ ರಾಗಕ್ಕು ಹಳೆಯ ರಾಗಕ್ಕು
ಅರಿತ ರಾಗಕ್ಕು ಬೆರೆತ ರಾಗಕ್ಕು
ಒಲವಿನೇಲ್ಲಾ ನಾದಗಳು ಪರಿಚಿತವೇ ಎಂಬ ಲಹರಿಯಲ್ಲಿ
ಮಿಡಿಯುತ್ತಲೆ ಇರಲಿ ಹೃದಯ ವೀಣೆ.
ಮುಳುವಾದ ಭಾವಗಳು ಹಗುರಾಗಲಿಕೆ
ಹೊಸತಾದ ಭಾವಗಳು ಹಿತವಾಗಲಿಕೆ
ಅಳುವ ಮನದ ಕನ್ನಡಿಯ ಮುಂದೆ ನಗುವಲೊಮ್ಮೆ
ಬೇಸತ್ತ ಮನದ ಕತ್ತಲೆಯಲ್ಲಿ ಬೆಳಕ ಚೆಲ್ಲಲೊಮ್ಮೆ
ಮಿಡಿಯುತ್ತಲೆ ಇರಲಿ ಹೃದಯ ವೀಣೆ.
ಭಾವ ತನ್ನದಾದರೂ ಸರಿ ತನ್ನದಲ್ಲದಿದ್ದರೂ ಸರಿ
ಅಳುವಿನಲ್ಲೊಮ್ಮೆ ತೆಳು ನಗುವ ಕಾಣಲಾದರೂ ಸರಿ
ಬಿರುಕು ಬಂಧನಗಳ ಹೊಲಿಯಲಾದರೂ ಸರಿ
ಆಚೆಗೀಚೆಗೆ ಪಾಲಾದ ಒಲವೊಂದ ತಣಿಸಲಾದರೂ ಸರಿ
ಮಿಡಿಯುತ್ತಲೇ ಇರಲಿ ಒಲವ ವೀಣೆ.
ತೀರಾ ಬಿಗುಗೊಂಡು ತಂತಿಗಳೊಮ್ಮೆ ಸಿಡಿಯುವ ಮೊದಲೇ
ಬವಣೆಗೆ ಬೇಸತ್ತು ತಂತಿಗಳು ತೆಳುವಾಗುವ ಮೊದಲೇ
ತಂತಿಗಳ ಮಿಟಲು ನಿರಾಸಕ್ತಿಯೋ, ಮರುವೋ ಹುಟ್ಟುವ ಮೊದಲೇ
ಹಸನಾದ ಹೊಸ ಭಾವವೊಮ್ಮೆ ಜೀವದೊಳು ತೇಲಿ ಬರಲು
ಮಿಡಿಯುತ್ತಲೇ ಇರಲಿ ಒಲವ ವೀಣೆ.
................ಬಸವ.
Very good bro
ReplyDeleteExllent bro 💥🥰
Delete