ವಿಮುಕ್ತನಾಗು.

ಮುಕ್ತನಾಗು ವಿಮುಕ್ತನಾಗು ವಿರಕ್ತನಾಗು
ಹುಸಿ ಸುಖ ದುಃಖಗಳಿಂದ ಪಾರಾಗು,
ನೀನಾಗು ನಿನ್ನಲಿರುವವನಿಗೆ ಅಣಿಯಾಗು,
ಬಂಧನಗಳ ಭಾರ ಹೆಚ್ಚಾದಷ್ಟು ಮುಳುಗುವೆ ಮುಲುಗುವೆ.

ಅದನಿದನರಿಯುವ ಗೋಜಿಗೆ ಬಲಿಯಾಗದೆ
ಅರಿಯಬೇಕಿದೆ ಇಲ್ಲಿ ತಾನೇನೆಂಬುದನ,
ಬೆಸೆಯಕಿದೆ ಅವನೊಂದಿಗೊಂದು ಕೊಂಡಿ
ಅಲ್ಲೆಲ್ಲೋ ಕಳೆದು ಹೋದ ಆತ್ಮದ ಅರಿವಿಗಾಗಿ.

ಶೃಂಗಾರ ಜೀವಕ್ಕೂ ಹೌದು ಶವಕ್ಕೂ ಹೌದು
ಮತ್ತೇಕೆ ಹಾತೊರೆಯಬೇಕಿದೆ ನಶ್ವರಕ್ಕೆ,
ಕಂಡರೂ ಭಾವಸಾಗರದಾಚೆಗಿನ ತೀರ
ಅದರೆಡೆಗೆ ಈಜುವಲ್ಲೇಕೆ ತತ್ಸಾರ,ತಿರಸ್ಕಾರ.

ಸ್ವಭಾವದ ಮೇಲಿನ ಕ್ಷಣಿಕ ಪ್ರಭಾವಕ್ಕೊ
ಲೌಕಿಕ ಬದುಕಿನ ವ್ಯಸನದ ಪ್ರವಾಹಕ್ಕೊ
ಚೇತರಿಸಿಕೊ ಬಲಿಯಾಗಿ ಬಳಲುತ್ತಿರುವ ಮನಸ್ಥಿತಿಯ
ಮತ್ತೆ ಚಿಗುರೊಡೆದು ಚಿಮ್ಮಬೇಕಿದೆ ಅವನೆಡೆಗೆ ಅವನೆತ್ತರದೆಡೆಗೆ.

                                           ...............ಬಸವ.

Comments

  1. Bassu this one is my favorite yaar. All your writings are superb. But THIS ONE IS BEYOND YAAR. NO WORDS TO EXPRESS. JUST 🙏🙏. "ಶೃಂಗಾರ ಜೀವಕ್ಕೂ ಹೌದು ಶವಕ್ಕೂ ಹೌದು" WHAT AN COMPARISON.

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ