ಇಣುಕಿ ನೋಡೋಮ್ಮೆ


ಆತ್ಮವು ಅಂಟಿಕೊಳ್ಳದ ದೇಹವಿದು
ಮತ್ತೇಕೆ ಮರುಗುವೆ ಅಳಲು ಕೊರಗುಗಳೊಂದಿಗೆ
ಮುಂದೊಂದು ದಿನ ಮಾಯವಾಗುವ ದೇಹಕ್ಕೆ.


ಸಿಕ್ಕಿತೋ ಸೌಖ್ಯವೆನ್ನುವ ಮನಸ್ಥಿತಿಯೇ ಅಸ್ಥಿತಿ
ಸಿಗದದೊಂದು ಸುಣ್ಣಕ್ಕೆ ಸೋಗುಡುವುದೇಕೆ?
ಶೃಂಗಾರಗೊಳಿಸುವ ಸಾವಿರಬಣ್ಣಗಳಿವಲ್ಲಿ
ಮರೆತು ಮುನ್ನಡೆ ನೂಕು ನುಗ್ಗಲ ಮಧ್ಯೆ.


ಹಾತಾಶೆಗಳಿದ್ದಷ್ಟು ಹರಿತ ಹೊಡೆತ ಹೃದಯಕ್ಕೆ
ಮರೆಯಲೆತ್ನಿಸಿದಷ್ಟು ಮೆಲಕುವುದು ಮನ 
ಬೇಡದ ನೆನಪುಗಳ,
ಪದೇ ಪದೇ ನೋವುಗಳಿಗಷ್ಟೇ ಕುಣಿದಂತ್ತಾಗುತ್ತಿದೆ
ಮರೆತು ಮನದಲಿರುವ ಸಾವಿರ ಸಡಗರಗಳ.


ಎಲ್ಲೋ ಮುರಿದು ಮುಳುಗಿ ನೋಡುವದಕ್ಕಿಂತ
ನನ್ನವರೊಡನೆ ಎದ್ದು ನೋಡುವಂತಾಗಲಿ ಬದುಕು,
ಅದಾವುದೇ ಮನಸ್ಸಿಗಾಗಿ ಬಿಕ್ಷುಕನಂತೇಕೆ ಬೇಡುವೆ?
ಮರುಗುತಿಹದದು ನಿನ್ನಲ್ಲೇ ನಿನ್ನದೊಂದು ಮನಸು,
ಇಣುಕಿ ನೋಡೋಮ್ಮೆ ಅಣುಕಿಸುವವರ ಮರೆತೊಮ್ಮೆ.

                                            
                                                        ......ಬಸವ

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ