ಹಳೆ ಸಂತೆಯ ವ್ಯಾಪಾರಿ.

ನಾ ಅದೇ ಹಳೆ ಸಂತೆಯ ವ್ಯಾಪಾರಿ,
ನೋವು ನಲಿವುಗಳೆಂಬ ಏರುಪೇರು,
ಕೈಗಟುಕದ ನಲಿವುಗಳು, ನೋವುಗಳನ್ನೇ
ಖರೀದಿಸಿ ಸಾಗುವಂತ್ತಾಗಿದೆ.

ಸಾಗರ ದಡದಲ್ಲಿನ ಮರುಳಿನಂತ್ತೆ ಕನಸುಗಳು,
ಕಟ್ಟಿಯೇ ತಿರುವೆವು ನಾವು ಕಲ್ಪನೆಗಳ ಮಹಲುಗಳು,
ಬಿಡದೆ ಬಹಿಸ್ಕರಿಸುವವು ಅಲೆಮಾರಿ ಅಲೆಗಳು.

ಕತ್ತಲೆಯಲ್ಲಿ ಕಾಣದ ಚಿತ್ರ ಚಿತ್ರಿಸಿ,
ನಮ್ಮಿಂದಾಗದ ಬೆಲೇಯೊಂದ ಹೇರಿ,
ಬೆಳಕಿಗೆ ಮಂಕಾಗಿ ಮನೆಗೆ ನಡೆಯುವದೇ
ದಿನ ನಿತ್ಯದ ಕಂಬನಿಗಳ ಕರೆಯೋಲೆಯಾಗಿದೆ.

ಕಂತೆಗಳ ಹೊತ್ತು ತರುವರು ಬಾಳ ಸಂತೆಗೆ,
ಕಿಂಚಿತ್ತೂ ಕರಗದೆ ರೋಧಿಸಿ ಹೋಗುವರು ಎಲ್ಲಾ,
ಬಣ್ಣ ಬಳಿದಾದರು ಸರಿ ಮಾರಿಯೇ ತಿರುವೆನೆಂಬ ಹುಚ್ಚು
ಪಡೆದವರ ಹೊಟ್ಟೆತಂಪು ಕೆಡಿಸದಿರಲಿ.

                                      ................ಬಸವ.

Comments

  1. ಕತ್ತಲೆಯಲ್ಲಿ ಕಾಣದ ಚಿತ್ರ ಚಿತ್ರಿಸಿ...👌👌👌

    ReplyDelete
  2. ಕನಸುಗಳು ಹೊತ್ತು ತರುವೆವು ಬಾಳ ಸಂತೆಯಲ್ಲಿ

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ