ಅಳಿವ ದೇಹಕ್ಕೆ ಅಳುವ ನಂಟುಗಳೇಕೆ?

ಬಿಡದ ಬಂಧನಗಳಿಗೆ ಸೆರೆಯಾಗಿರುವೆವು
ಕಣ್ಣೆದುರೇ ಕಾಣದಾಗುವವೆಂದು ಮರೆತಿರುವೆವು,
ನೋಯಿಸುವ ನೋವುಗಳಿಗೆ ಸೆರೆಯಾಗಿರುವೆವು
ಅಸರೆಗಳೆಂಬ ಉಸಿರುಗಳಿಗೆ ಸೋತಿರುವೆವು.

ವಯ್ಯಾರವೆಂಬ ಬಣ್ಣ ಬಣ್ಣದ ಚಿತ್ರಗಳಿವು
ರಂಗು ರಂಗಾಗಿರುವ ತನಕವಷ್ಟೆ ಸೊಗಸು,
ಎಡವಿದೋಡೆ ಕೆಡುವ ಭಾವನೆಗಳಿವು
ನಿಸ್ವಾರ್ಥವೇ ಪರಮಸತ್ಯವೆಂದು ನುಡಿದಿವೆ.

ಭಗವಂತನ ಆಣೆಯಿಡದೆ ಆಟಕ್ಕೆ ಒಪ್ಪಿ
ಅಳುವುದೇಕೆ ಜೀವನೊದ್ಧೇಶವ ತಪ್ಪಿ?
ಅರಿಯದ ಮನಕೆ ಮುನಿಸು ಕಲಿಸುವುದುಕೆ?
ಅಳಿವ ದೇಹಕ್ಕೆ ಅಳುವ ನಂಟುಗಳೇಕೆ?

ಭಿನ್ನತೆಗೆ ಬಡಿದಾಡುವ ಹೃದಯ ಮರೆತಂತಿತಿದೆ
ತಾನು ಬಯಸಿದ್ದು ತನ್ನತನದ ಹೃದಯವೆಂದು,
ಹೆಸರಿಡದೆ ಉಸಿರಾಡುವ ಜೀವಕ್ಕೆ
ಬಿಸಿಯುಸಿರೆಳೆವ ಗತಿ ಬಾರದಿರಲಿ.

                                                 .................ಬಸವ.

Comments

  1. ಅಳಿವ ದೇಹಕ್ಕೆ ಅಳುವ nanteke...

    ReplyDelete
  2. ಅಳಿವ ದೇಹಕ್ಕೆ ಅಳುವ ನಂಟುಗಳೇಕೆ?

    Waah anna superb yaar. 👌👌👌

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ