ನಿನ್ನೊಲಿದವ

ನಿನೋಂದು ಅರಿಯದ ಪ್ರಣೀತ ಗಣಿತ
ತಿಳಿಯದ ನುಡಿಗಳ ಮತ್ತೆ ಮತ್ತೆ ಸ್ಮರಿಸಿದಂತೆ
ನಿನ್ನೊಡನೆ ಮೂಡಿ ಮಾಗಿದ ನೆನಪುಗಳ
ಸ್ಮರಣೆಯಲೇ ಕಾಲಹರಣಿಸುತ್ತಿರುವೆ.

ಬೆಚ್ಚಿ ಬೀಳುವ ಮುಂಚೆ ಎಚ್ಛೆತ್ತು ಅಪ್ಪಿಕೊಳ್ಳುವೆ
ಸದ್ದಿಲ್ಲದೆ ಸಾಗುವ ಸರ್ಪದಂತೆ ಹಿಂಬಾಲಿಸುವೆ
ನಿನ್ನ ಪಿಡಿಸುವ ವ್ಯಥೆಗಳನ್ನಲ್ಲೇ  ಬೇಡವಾಗಿಸುವೇ
ನಿನ್ನಾಸೆ ನಿ ಕೇಳುವ ಮುನ್ನವೇ ಪೂರೈಸುವೆ.

ಸಜ್ಜಾದ ಜೇನಿನಂತೆ ಸಿದ್ಧಗೊಳಿಸುವೆ ನಿನ್ನ
ನಿ ಕಾಣಬಯಸುವ ಬಣ್ಣವನ್ನೇ ಬಳೆಯುವೆ ಈ ಜಗಕೆ
ನಿನ್ನಿಚ್ಛೆಯಂತೆ ವಯ್ಯಾರಗೊಳಿಸುವೆ ಆ ಚಂದಿರನ
ನಿನ್ನೊಲ್ಲದ ಸಂಜೆ ಬಾರದದು....
ಬಾರದು ಬಾರದಂತೆ ಬಂಧಿಸುವೆ ಆ ರವಿಯ.

                        .................ನಿನ್ನೊಲಿದವ

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ