ನೂಲಿಗೊಲೇದ ಸ್ವಾತಂತ್ರ್ಯವಲ್ಲವಿದು



ಗರಿ ಗರಿಯಾದ ನೂಲಿಗೊಲೇದ ಸ್ವಾತಂತ್ರ್ಯವಲ್ಲವಿದು
ಗುರಿ ಇಲ್ಲದ ಗುಂಡುಗಳನ್ನೆದುರಿಸಿ 
ನದಿಯಂತೆ ಹರೆದ ನೆತ್ತರಿನಲಿ ತೇಲಿಬಂದ ಸ್ವಾತಂತ್ರ್ಯವಿದು.

ಮರಣ ಮೃದಂಗಗಳ ಮಧ್ಯೆಯೂ 
ಜನ್ಮಭೂಮಿಯ ಅಳಲು ಕೇಳಿ
ಆಳುವವರ ಅಸ್ತಿತ್ವನ್ನಳಿಸಿಯೇ ಬಿಡುವೆನೆಂಬ 
ಧೀರ ದಿಟ್ಟತನಕ್ಕೊಲಿದ  ಸ್ವಾತಂತ್ರ್ಯವಿದು.

ಸಾಗರದಷ್ಟು ಬಲಿದಾನಿಗಳ ಮೇಲೆ 
ಅಳುಕದೆ ನಿಂತ ತ್ರಿವರ್ಣದ ತೇಜಸ್ಸು
ಒಲಿದದ್ದಿದು ಅಳಲುಗಳಿಗಲ್ಲ
ಭಾರತಾಂಬೆಯ ಪಾದಕ್ಕಂಟಿದ ನೆತ್ತರಕ್ಕೊಲಿದ ಸ್ವಾತಂತ್ರ್ಯವಿದು.


ಹಗಲಿರುಳೆನ್ನದೆ,ಬೆವರೋ ರಕ್ತವೆಂದರಿಯದೆ
ಸ್ವಾಭಿಮಾನವೋ, ದೇಶಭಕ್ತಿಯೆಂದರಿಯದೆ
ವಂದಿಸುತ ವಂದಿಸುತ ವಧೆಗೊಂದಲ್ಲಿ ಒಲಿದ ಸ್ವಾತಂತ್ರ್ಯವಿದು.
       
                                      ....ಬಸವ

ಸ್ವಾತಂತ್ರ್ಯೋತ್ಸವದ ಶುಭಾಶಯಗಳು🇮🇳🇮🇳🙏

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ