ಆತ್ಮ ದಾಹ

ತನು ಮನ ಕಾಣದ ಸುಖದಲ್ಲೇ ಸೋಲುತ್ತಿಹೇ ನೀನು
ತಡಬಡಿಸುವ ಆತ್ಮದ ಕೊರಗೊಮ್ಮೆ ಕೇಳದೆ
ಹಗಲೊತ್ತಲ್ಲೇ ಇಳಿ ಸಂಜೆಯಡೆಗೆ ನುಗ್ಗುತ್ತಿರುವೆ ನೀನು,
ಕೈ ಹಿಡಿಯುವ ಜ್ಞಾನವ ಇಚ್ಚಿಸೋಮ್ಮೆ
ಕರುಣಿಸಾನು ಅವನು ನಿನ್ನಲ್ಲೇ ಅಡಗಿದವ.

ಮೆಚ್ಚಲು ಮೆಚ್ಚಿಸಲು ದುಡುಕುವ ಹೆಜ್ಜೆಗಳು
ದರಿದ್ರವನೂ ಮೆಟ್ಟಿ ನಿಲ್ಲಲು ನಿಂತಿವೆ ಕಣ್ಮುಂದೆ,
ಅರಿತರು ಮತ್ತಷ್ಟು ಆಳಕ್ಕಿಳಿಯುವ ಮೂರ್ಖತೆ
ಮೂಕನಾದಮೇಲೆ ಕಿರುಚುವ ನಿನ್ನ ರಗಳೆಗೆ 
ಬಿಟ್ಟದ್ದಲ್ಲ ಹುಚ್ಚನ ಪಟ್ಟ ನಿನಗೆ.

ಅತೃಪ್ತಿಯದು ಅಳುಕುತ್ತಿಹದು ಜೀವದಲ್ಲಿ
ಮತ್ತದೇ ಮದ ದ ಬೆನ್ಹತ್ತಿ ಬಾಗುತ್ತಿರುವೆ,
ಹೇಳುವರನ್ನೇಕೆ ಹುಡುಕಲಿಲ್ಲ ನೀನು 
ಬೇಕಾಗಿದ್ದು ಜ್ಞಾನವದು, ಅಜ್ಞಾನದ ಹೊರೆಯಲ್ಲವೆಂದು.

ಭಯವಿರದ ಭಕ್ತಿಯನ್ನೊಮ್ಮೆ ಅನುಭವಿಸಲು,
ತಾನೇ ಪರಮಾತ್ಮನೆಂಬುದನ ಅರಿಯಲು,
ಕತ್ತಲು-ಬೆಳಕೆನ್ನದ, ಧನ-ಋಣವೆನ್ನದ ಲೋಕವನರಿಯಲು,
ಅರಿಯೊಮ್ಮೆ ನಿನ್ನಲ್ಲೇ ಪರಮಾತ್ಮನ ಅರಿವ ಜ್ಞಾನವ.

                                           ...........ಬಸವ


Comments

  1. This comment has been removed by the author.

    ReplyDelete
    Replies
    1. ಅರ್ಥಗರ್ಭಿತ

      Delete
    2. Wonderful content!
      Meaning is hidden! Beyond Comprehension!
      Keep it up. You can print it as a book.

      Delete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ