"ಕಾಶ್ಮೀರ್ ಫೈಲ್ಸ್" ಎಂಬ ರಕ್ತ ಸಿಂಚನದ ಕಥೆ.



ಯುವ ಸಮೂಹವೊಂದು "ಜೈ ಶ್ರೀ ರಾಮ್" ಎನ್ನುತ್ತಲೋ ಅಥವಾ "ಭಾರತ್ ಮಾತಾ ಕಿ ಜೈ" ಎನ್ನುತ್ತಲೋ ಗುಂಪು ಗುಂಪಾಗಿ ಹೊರ ಬರುತ್ತಿದ್ದಾರೆ. ಬೀದಿಗಳಲ್ಲೊ ಅಥವಾ ರಾಜಕೀಯ ಪಕ್ಷದ ಸಭೆಯಿಂದಲೋ ಅಲ್ಲಾ, ಬದಲಾಗಿ ಒಂದು ಚಿತ್ರ ಮಂದಿರದಿಂದ ಹೊರಬರುತ್ತಿದ್ದಾರೆ. ವಯಸ್ಕ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ, ಗಂಡಸರು "ಈಗಲಾದರೂ ಎಚ್ಚೆತ್ತುಕೊಳ್ಳಿ" ಎಂಬ ಎಚ್ಚರಿಕೆಯ ಮಾತುಗಳನ್ನ ಯುವಸಮೂಹಕ್ಕೆ ಹೇಳುತ್ತಿದ್ದಾರೆ, ಅತ್ತಕಡೆ ಇನ್ನೊಂದು ಬಣ ಹಲವು ದಶಕಗಳ ಹಳೆಯ ರಾಜಕೀಯ ಪಕ್ಷಕ್ಕೆ ಛಿ!, ಥು! ಎನ್ನುತ್ತಾ ಹೊರಬರುತ್ತಿದ್ದಾರೆ.  ಏನಿದು? ಯಾವಚಿತ್ರವಿದು? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ "ದಿ ಕಾಶ್ಮೀರ್ ಫೈಲ್ಸ್" ಅನ್ನುವ ರಕ್ತ ಸಿಂಚನದ ಕಥೆ ಹೊರಹೊಮ್ಮುತ್ತದೆ.

ಚಲನಚಿತ್ರವೆಂದರೆ ಹೀರೋ ಹೀರೋಯಿನ್, ವಿಲನ್, ಸಿಳ್ಳೆಗಳು, ಚಪ್ಪಾಳೆಗಳಿಂದ ಕುಡಿರುತ್ತಿತ್ತು, ಆದರೆ ಇದು ಸಂಪೂರ್ಣ ವಿಭಿನ್ನ. ಚಿತ್ರದುದ್ದಕ್ಕೂ ಇಲ್ಲಿ ಪರಿಪೂರ್ಣ ನಿರವತೆ, ಅಲ್ಲೆಲ್ಲೋ ಮೂಲೆಯಲ್ಲಿರುವವರು ದುಃಖಿಸುವ ಸದ್ದು ಸಹ ಕೇಳಬಹುದಾದಂತಹ ನಿಶಬ್ದ ಚಿತ್ರಮಂದಿರದಲ್ಲಿ. ಚಿತ್ರಮಂದಿರದಲ್ಲಿ ನಿರವತೆ ತುಂಬಿದೆಯಾದರು, ಅಲ್ಲಿಯ ಮನಸ್ಸುಗಳಲ್ಲಿ ಭಾವೋದ್ವೇಗ ಉಕ್ಕುತ್ತಿದೆ. ಕೆಲವರು ದುಃಖದಲ್ಲಿದ್ದಾರೆ, ಕೆಲವರು ಕೋಪದಲ್ಲಿದ್ದಾರೆ, ಇನ್ನೂ ಕೆಲವರು ತಮ್ಮನ್ನ ಆ ಸ್ಥಿತಿಯಲ್ಲಿ ಕಲ್ಪಿಸಿಕೊಳ್ಳುತ್ತಿದ್ದಾರೆ. ಹೀಗೆ ಹತ್ತು ಹಲವು ಚಿಂತನೆಗಳಲ್ಲಿ ಮನಸ್ಸುಗಳು ತಲ್ಲೀನವಾಗಿರಬೇಕಾದಲ್ಲಿ ಚಿತ್ರ ಮಂದಿರದಲ್ಲಿ ನಿರವತೆ ಸಾಮಾನ್ಯವಾಗಿತ್ತು. ಇಂತಹ ಸನ್ನಿವೇಶವನ್ನ ಚಿತ್ರಮಂದಿರದಲ್ಲಿ ಅನುಭವಿಸಿದ್ದು ನಿಜಕ್ಕೂ ವಿಭಿನ್ನ ಅನುಭವವೇ ಹೌದು, ಇಂತಹ ಸನ್ನಿವೇಶಕ್ಕೆ ಚಿತ್ರಮಂದಿರಗಳು ಸಾಕ್ಷಿಯಾಗುತ್ತವೇ ಅನ್ನುವದನ್ನ ಯಾರೂ ಸಹ ಕಲ್ಪಿಸಿಕೊಂಡರಲಿಕಿಲ್ಲ. ಆದರೆ ಇದೀಗ ಅದು ವಾಸ್ತವವಾಗಿದೆ.

ಇತಿಹಾಸ ಅಂತ ಹೇಳಲಿಕೂ ಆಗದಷ್ಟು ಇತ್ತೀಚಿನ ವರ್ಷಗಳಲ್ಲಿ ನಡೆದ ಘಟನೆಯದು, ಮೂರು ದಶಕಗಳ ಹಿಂದೆ ಕಾಶ್ಮೀರದಲ್ಲಿ ರಾತ್ರೋ ರಾತ್ರಿ "ಇಸ್ಲಾಮ್ ಗೆ ಮಂತಾಂತರಗೊಳ್ಳಿ, ಇಲ್ಲವಾದಲ್ಲಿ ಇಲ್ಲಿಂದ ತೊಲಗಿ ಅಥವಾ ನಿಮ್ಮ ಪ್ರಾಣವನ್ನ ಬಿಡಿ" ಅನ್ನುವ ಮಾತುಗಳನ್ನ ಅಲ್ಲಿಯ ಮೌಲ್ವಿಗಳು ಪ್ರತಿಯೊಂದು ಮಸೀದಿ ಇಂದ ನೇರವಾಗಿ ಸ್ಪೀಕರ್ ಗಳ ಮೂಲಕ ಹೇಳುತ್ತಿದ್ದಾರೆ, ಉಗ್ರರು ಬಂದೂಕು ಹಿಡಿದು ಮನೆ ಮನೆಗೆ ಭೇಟಿಕೊಟ್ಟು "ನಿಮ್ಮ ಮನೆಯ ಹೆಂಗಸರನ್ನ ಇಲ್ಲೇ ಬಿಟ್ಟು, ಈ ಮನೆ ಖಾಲಿ ಮಾಡಿ ಹೋಗಿ" ಎಂದು ತಾಕೀತು ಮಾಡುತ್ತಿದ್ದಾರೆ, ಒಪ್ಪದಿದ್ದಲ್ಲಿ ರಕ್ತದೋಕುಳಿ, ಕಣ್ಣೆದುರೇ ಮನೆಯ ಹೆಂಗಸರ ಶೀಲ ಹರಣ, ಕಾಪಾಡಲು ಕೃಷ್ಣನೇ ಬರಬೇಕು ಎಂದರು ಆಗದ ದುಸ್ಥಿತಿ, ಅಲ್ಲಿಯ ಹಿಂದುಗಳು ಎಂದೂ ಪುಟಿದೇಳುವ ಸಾಹಸಕ್ಕೆ ಕೈ ಹಾಕಿರಲಿಲ್ಲ, ನಪುಂಸಕರ ವರ್ತನೆ. ಹೀಗೆ ಆಧುನಿಕ ಭಾರತದ ಕಣ್ಣೆದುರಲ್ಲೇ ಅಂತಹ ಘಟನೆಯೊಂದು ನಡೆದೇ ಹೋಯಿತು. ನೂರಾರು ಜನ ಪ್ರಾಣ ಬಿಟ್ಟರು, ಮತಾಂತರಗೊಂಡರು,ಲಕ್ಷಾನುಗಟ್ಟಲೇ ಜನ ಪಲಾಯನ ಮಾಡಿದರು. ತಮ್ಮದೇ ದೇಶದಲ್ಲಿ ವಲಸಿಗರಾದರು. ಇಂತಹದೊಂದು ಘಟನೆಯ ಕರಾಳ ಸತ್ಯ ಅದಾಗಲೇ ಹೊರ ಬಿದ್ದಿತ್ತು, ಆದರೂ ಅದು ಎಲ್ಲರಲ್ಲಿಗೆ ತಲುಪಲು ಅದರಲ್ಲಿ ಅಷ್ಟು ಶಕ್ತಿ ಇರಲಿಲ್ಲ, ಅಷ್ಟು ಪ್ರಕಾಶತೆ ಆ ಸತ್ಯದಲ್ಲಿರಲಿಲ್ಲ, ಕೇಳಿದರು ಕೆಳದಂತ್ತೆ ವರ್ತಿಸುವ ಸರ್ಕಾರಗಳು, ನಮ್ಮದಲ್ಲ ವಿಷಯ ಎಂದು ಪತ್ರಿಕೆಯ ಪೇಜು ಹೊರಳಿಸುವ ಬುದ್ಧಿಜೀವಿಗಳು. ಹೀಗೆ ಅದೊಂದು ಘಟನೆ ಕಥೆಯಾಯ್ತು,ಇತಿಹಾಸವೂ ಆಯ್ತು. ಅಂತಹದನ್ನ ಮಿಂಚಿನ ವೇಗದಲ್ಲಿ ವಿಷಯವನ್ನ ಪಸರಿಸುವ ಸಿನಿಮಾ ಎಂಬ ಜಾದೂ ಶಂಖದಿಂದ ಊದಿದ್ದು ಡೈರೆಕ್ಟರ್ ವಿವೇಕ್ ಅಗ್ನಿಹೋತ್ರಿ. 

ಆರ್ಟಿಕಲ್ 370 ರದ್ದುಗೊಳಿಸಿದಾಗ ಭಾರತದ ಕೆಲ ಬಣ ಇದನ್ನ ವಿರೋಧಿಸಿತ್ತು. ಆದರೆ ಜಗತ್ತಿನ ಮೂಲೆ ಮೂಲೆಯಲ್ಲಿರುವ ಅನೇಕ ಕಾಶ್ಮೀರಿ ಹಿಂದುಗಳು ಪ್ರಧಾನಿ ಮೋದಿಯನ್ನ ಕಂಡಾಗಲೊಮ್ಮೆ ಕಾಲಿಗೆ ಎರಗಿ ಬಿಳುವರು,ಅಪ್ಪಿ ಅಳಲಾರಂಭಿಸುವರು, ಏಕೆಂದರೆ ಅದರ ಮಹತ್ವ ಅವರಿಗೆ ತಿಳಿದಿದೆ. ಇದರ ತಿಳಿ ಸತ್ಯ ನಮಗೆ ಈ ಚಿತ್ರ ನೋಡಿದಾಗ ಅರ್ಥವಾಗುತ್ತದೆ. ಆದರೆ ಈ ಚಿತ್ರ ಕೆಲವೇ ಕೆಲವು ಸನ್ನಿವೇಶಗನ್ನಿಟ್ಟುಕೊಂಡು, ಭಾರತದಲ್ಲಿ ಬುದ್ಧಿಜೀವಿಗಳು ಅದು ಹೇಗೆ ಒಂದು ಯುವ ಸಮೂಹವನ್ನ ಬ್ರೈನ್ ವಾಷ್ ಮಾಡುತ್ತದೆ ಎಂಬ ಚಿತ್ರಣಗಳಿನ್ನುಟ್ಟುಕೊಂಡು ತೆರೆ ಮೇಲೆ ಬಂತು. ಮೊದಲಿಗೆ ಇದೊಂದು ಫ್ಲ್ಯಾಪ್ ಚಿತ್ರ ಅನ್ನುವ ಹಣೆಪಟ್ಟಿಯನ್ನ ದಾವುದನ ಬಾಲಿವುಡ್ ಕೊಟ್ಟಿತ್ತು. ಆದರೆ ಸಮಯ ಬದಲಾಗಿದೆ, ಇದು ನವ ಭಾರತ, ಇಲ್ಲಿ ಬಾಲಿವುಡ್ ನ ಯಕಶ್ಚಿತ ನಟ ನಟಿಯರನ್ನ ಆರಾಧಿಸುವುದು ನಿಂತಾಗಿದೆ. ಕಾಶ್ಮೀರ್ ಫೈಲ್ಸ್ ಅನ್ನ ಬೆಂಬಲಿಸಲೇಬೇಕು ಎಂಬ ಸುನಾಮಿ ಎದ್ದದ್ದೇ ತಡ, ಮುಚ್ಚಿದ ಥಿಯೇಟರ್ ಗಳು ಈ ಫೈಲ್ಸ್ ಅನ್ನ ಓಪನ್ ಮಾಡಲು ಆರಂಭಿಸಿದವು, ಒಂದು ಅದ್ಭುತ ಚಿತ್ರದ ಯಶಸ್ವಿಗೆ ಪ್ರತಿಯೋರ್ವ ಹಿಂದುಗಳು ಕಾರಣವಾದರು. ಲಕ್ಷ ಸಂಪಾದನೆಯಿಂದ ಕೋಟಿ ಕೋಟಿಗೆ ಏರಿತು, ಕೇಸರಿ ಶಾಲು ಹೊದ್ದು ಗುಂಪು ಗುಂಪುಗಟ್ಟಲೇ ಜನ ಹೊರಟರು, ಸಾಧು ಸಂತರು, ವಯೋವೃದ್ಧರು, ಅಧಿಕಾರಿಗಳು ಹೀಗೆ ಸಮಾಜದಲ್ಲಿ ಎಲ್ಲರೂ ಇದನ್ನ ನೋಡಲೇಬೇಕು ಅಂತ ಅಲ್ಲಿಯ ಸ್ಥಳೀಯ ಮುಖಂಡರು ಉಚಿತ ಪ್ರದರ್ಶನವೂ ಏರ್ಪಡಿಸಿದರು, ಸುನಾಮಿಯಂತ್ತೆ ಹಬ್ಬಿಯೇ ಬಿಟ್ಟಿತು. ದಾವುದನ ಬಾಲಿವುಡ್ ಅಕ್ಷರಶಃ ಬೆತ್ತಲಾಯಿತು, ಹಿಂದುಗಳು ಜಾಗೃತರಾಗುತ್ತಿದ್ದಾರೆ ಎನ್ನುವ ಸಣ್ಣ ಸಂದೇಶವೊಂದು ದೇಶದಲ್ಲಿನ ವಿರೋಧಿಗಳಿಗೆ ತಲುಪಿತು.

ಚಿತ್ರದಲ್ಲಿನ ನಟರ ನಟನೆಯ ಬಗ್ಗೆ ಮಾತಾಡಿದರೆ ಈ ಚಿತ್ರಕ್ಕೆ ಅಗೌರವ ಎಂದಂತ್ತಾಗುತ್ತದೆ, ಎಲ್ಲರದ್ದೂ ಅಪ್ರತಿಮ ನಟನೆ.  ತುಂಬಾ ಸೂಕ್ಷ್ಮವಾಗಿ ಕಥೆಯನ್ನ ನೈಜ ಘಟನೆಗಳನ್ನಾಧಾರಿಸಿ ಹೆಣೆಯಲಾಗಿದೆ, ನೋಡುಗರನ್ನ ಬಡಿದೆಬ್ಬಿಸುವ ಕೆಲಸವೇ ಮುಖ್ಯಗುರಿ, ತದನಂತರ ಕಾಶ್ಮೀರದ ಹಿಂದುಗಳ ಕಣ್ಣೀರು ಹೇಳುತ್ತದೆ. ಕೊನೆಯ ಸನ್ನಿವೇಶವಂತ್ತು ದುರ್ಬಲ ಹೃದಯಗಳಿಗೆ ಬೇಡವಾದದ್ದು. ಸಂಪೂರ್ಣ ನಿರವತೆಯಲ್ಲಿ ಕೇಳಿಸುವುದು ಒಂದೊಂದಾಗಿ ಕೇವಲ ಗುಂಡಿನ ಶಬ್ದಗಳು. ಅದೆಷ್ಟೋ ಭಾರಿ ಕಣ್ಣು ವದ್ದೆಯಾಗುತ್ತದೆ, ಕಣ್ಣೀರುಗಳು ಸುರಿದೇ ಬಿಡುತ್ತವೆ. ಅಯ್ಯೋ! ಅಯ್ಯೋ! ಅನ್ನುವ ಸಣ್ಣ ಧ್ವನಿಯ ಶಬ್ದಗಳು ಥಿಯೇಟರಲ್ಲಿನ ಮನಸ್ಸುಗಳು ಉದ್ಘರಿಸಿಯೇ ಬಿಡುತ್ತವೆ.

ಚಿತ್ರವನ್ನ ಎಲ್ಲರೂ ನೋಡಲೇಬೇಕು ಅನ್ನುವದಕ್ಕಿಂತ ನೋಡಿ ಎಚ್ಚೆತ್ತುಕೊಳ್ಳಲೇಬೇಕು ಎಂದರೆ ತಪ್ಪಾಗದು. "ಕಾಶ್ಮೀರ್ ಫೈಲ್ಸ್" ಅನ್ನುವದು ಕೇವಲ ಒಂದೇ ಒಂದು ಫೈಲ್ಸ್ ಅಷ್ಟೇ.ಪಾಕಿಸ್ತಾನ, ಅಫಘಾನಿಸ್ತಾನ್ ಮತ್ತು ಬಾಂಗ್ಲಾದೇಶದಲ್ಲಿ ಇಂತಹ ಕಥೆಗಳನ್ನ ಫೈಲ್ಸ್ ಅನ್ನದೆ "ಗ್ರಂಥಗಳು" ಅನ್ನಬಹುದಾದಂತಹ ದಾರುಣತೆ ಅಲ್ಲಿಯ ಹಿಂದೂ ಸಂಸ್ಕೃತಿ ಕಂಡಾಗಿದೆ. ಈತರ ಅನೇಕ ಫೈಲ್ಸ್ ಗಳನ್ನ ಭಾರತವೂ ಸಾವಿರಾರು ವರ್ಷಗಳಿಂದ ಕಂಡಿದೆ, ಇಂತಹ ಫೈಲ್ಸ್ ಗಳನ್ನ ನಾಳೆಯದಿನ ಕಾಣಬಾರದು ಎಂದಲ್ಲಿ ಎಲ್ಲರೂ ಒಂದೊಮ್ಮೆ ಚಿತ್ರವನ್ನ ನೋಡಿ, ಸೆಕ್ಯೂಲಾರಿಸಮ್ ಅನ್ನುವ ಪರದೆಯಿಂದ ಹೊರಬರಲೇಬೇಕು, ಇಲ್ಲವಾದಲ್ಲಿ ಉಸಿರುಗಟ್ಟುವ ವಾತಾವರಣಕ್ಕೆ ಎಲ್ಲರೂ ಬಲಿಯಾಗಬೇಕಾದಿತು ಅಷ್ಟೇ.

                                          ...............ಬಸವ.

Comments

  1. Maga I really feel proud of you..
    All I can say to your word is.... 🙏
    Thank you Maga... Really it was soul touching.

    ReplyDelete
  2. ಮೊದಲು ಇದು ಬಾಯಿ ಬಾಯಿ ಅನ್ನೋರು ನೋಡಬೇಕು

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ