ನೀನೆಂಬ ಉತ್ತುಂಗ

ನೀನೆಂಬ ಊಹಿಸದ ಸಾಹಿತ್ಯದಲ್ಲಿ ಉತ್ತುಂಗಕ್ಕೇರಿರುವೆ,
ಆಳ ಸಾಗರದಲ್ಲಡಗಿದ ನುಡಿಮುತ್ತುಗಳಿಗೆ ಬಲೆಬಿಸಿರುವೆ,
ದೂರವಾಗ ಬಯಸಿದ್ದಷ್ಟು ಮತ್ತಿಷ್ಟು ಹತ್ತಿರವಾಗಿರುವೆ,
ಮುಗಿಯದ ಕಡಲ ಅಲೆಗಳೆಂಬ ನಿನ್ನ ನೆನಪುಗಳಿಗೆ ಶಾಶ್ವತವಾಗಿ ಮಾರುಹೋಗಿರುವೆ.

ಬಿಡದೆ ಹರಿಯುವ ನದಿಗೆ ಬಂದಿಸಲಾಗದಂತ್ತೆ,
ಸೂರ್ಯನ ಪ್ರಕಾಶತೆಯ ಮುಚ್ಚಿಡಲಾಗದಂತ್ತೆ,
ನನ್ನೊಳಿರುವ ನಿನ್ನ ಮಾಗಿಸಲಾಗದೆಂದು.

ಸಿಕ್ಕಷ್ಟು ಸ್ವೀಕರಿಸುವಾಸೆ ನಿನ್ನ,
ಬಯಕಗಳಿಗಿಲ್ಲ ನನ್ನಲ್ಲಿ ಕೊನೆ,
ನಿನ್ನವನಾಗುವ ಬಯಕೆ ನನ್ನಲ್ಲೇ ನಾ
ಅತಿಗಾಡವಾಗಿ ಗೀಚಿಕೊಂಡಿರುವೆ.

ನೂರೆಂಟು ನೆಲೇಗಳಿದ್ದರು ನಿನ್ನಲ್ಲಿಯೇ
ನಿನ್ನ ನೆರಳಲ್ಲಿಯೇ ದಣಿವಾರಿಸಿಕೊಳ್ಳುವಾಸೆ,
ನಾ ಸುಖವಾಗಿದ್ದರು ನಿನ್ನನ್ನ ನೋವಾಗಿಯಾದರು
ನನ್ನೊಳು ಮಾಗದ ಗಾಯದಂತ್ತೆ ಮುಡಿಸಿಕೊಳ್ಳುವಾಸೆ,
ನೀನೊಂದು ಅರಿಯದ ಭಾಷೆಯಾದರು ಸರಿ ನಿನ್ನೊಡನೆ
ಮುಗಿಯದ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುವಾಸೆ.

                                                  ........ಬಸವ

Comments

Popular posts from this blog

ಹೃದಯ ವೀಣೆ.

ಬಾಬಾ ಶಿವಾನಂದ - ಒಂದು ವ್ಯಕ್ತಿ ಪರಿಚಯ.

ಒಲವ ಬೀದಿಗಳು.