ನಡುಕದ ನುಡಿಗಳು.

ನೀನೆಂಬ ಉತ್ತುಂಗಕ್ಕೆ ಅಂತರಾಳದಿ ಚುಂಬಿಸಿದ್ದೆ,
ಇಂದು ನೀನಿಲ್ಲದ ನನ್ನನ್ನು  ನಾ ಕಂಡುಕೊಂಡಿರುವೇ,
ಮತ್ತೆ ನೀನೆಂಬ ಕಲ್ಪನೆಗಳಿಗೆ ವ್ಯಸನಿಯ ನಾನಾಗಲಾರೆ.

ನನ್ನತನವೇ ಹುಸಿಎನ್ನುವ ಮಟ್ಟಕ್ಕೆ ನಿನ್ನ ಅಲಂಕರಿಸಿದ್ದೆ,
ನಿ ಸಿಗದಿದ್ದರೂ ನಿನ್ನ ನೆನಪುಗಳಲ್ಲೇ ಸ್ವರ್ಗ ಅನುಭವಿಸುವೆ,
ಎಲ್ಲದಕ್ಕಿಂತ ನೀನೇ ಮಿಗಿಲೆನ್ನುವ ಪದ ತುಂಬಾ ಅಚ್ಚಾಗಿ ಪರಿಪಾಲಿಸಿದ್ದೆ.

ನೀನಿಲ್ಲದ,ನಿನ್ನೊಂದಿಗಿಲ್ಲದ
ತನು ಮನಗಳೆರಡು ಚಡಪಡಿಸುತ್ತಿವೆ,
ನಿನ್ನೊಂದಿಗಿದ್ದು ನಿ ಉಣಬಡಿಸುವ ತಾರತಮ್ಯಕ್ಕಿಂತ
ನಾ ಸದಾ ನಿನ್ನ ನೆನಪುಗಳಲ್ಲಿ ಏಕಾಂಗಿಯಾಗಿ ಇರಬಯಸುವುದೇ ನೆಮ್ಮದಿಯಂತ್ತಿದೆ.

ಅದ್ಹೇಗೆ ಮರೆಯಲಿ ನಿನ್ನ?
ನಿನ್ನ ನುಡಿ ನಡೆಗಳನ್ನ ಸದಾ ಕಾಣಬಯಸಿದವನು ನಾ,
ಅದ್ಹೇಗೆ ಮರೆಯಲಿ ನಿನ್ನ?
ನೀನಿಲ್ಲದೆಯೇ ನಿ ನನ್ನವಳು ಎಂದು ಕೂಗಿಹೇಳಿದವನು ನಾ,
ಅದ್ಹೇಗೆ ಮರೆಯಲಿ ನಿನ್ನ?
ನನಗಿಂತ ನೀನೇ ಸದಾ ಅಪರಂಜಿ ಎಂದವನು ನಾ,
ಅದ್ಹೇಗೆ ಮರೆಯಲಿ ನಿನ್ನ ?

                           ................ಬಸವ

Comments

  1. Nenapugalali ekangi yagirive...👌👌👌

    ReplyDelete
  2. ಅವಳೆಂಬ ಉತ್ತುಂಗ ಅಂದ್ರೆ ಇನ್ನು ಚನ್ನಾಗಿರುತಿತ್ತು..

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ