ಮಾಯವಾದ ಮಾಯೆ.

ನೀನೆಂಬ ಮುಖಪುಟಕ್ಕೆ ಮಾರುಹೋದವನು ನಾನು,
ನೀನೆಂದು ಬಿಚ್ಚಿಡಲಿಲ್ಲ ನೀನೆಂಬ ಪುಸ್ತಕವ,
ನಿನ್ನರಿಯುವ ಜೀಜ್ನ್ಯಾಸೆಯೋಮ್ಮೊಮ್ಮೆ ನಾನೆಲ್ಲಿ ನಿನ್ನ ಕಳೆದುಕೊಂಡು ಬಿಡುವೆನೆಂಬ ಭಯದ ನಾಂದಿಹಾಡುತ್ತಿದೆ.

ಮತ್ತೊಂದು ಹೃದಯಕ್ಕೆ ಗಾಯಗೊಂಡು
ನನ್ನಾವರಿಸಿದೆಯಾ ನೀನು.....?
ಘಾಸಿಗೊಳಿಸಿದ ಹೃದಯ ಅಪ್ಪಿಕೊಂಡಾಗ ಇಂದು,
ಮೆಲ್ಲನೆ ಮಂಕಾಗಿ ಮರೆಯಾದೇಯಾ.....?
ಎಂದು ಪ್ರಶ್ನಿಸುತ್ತಿದೆ ತಬ್ಬಲಿ ಹೃದಯ,
ಸಿಗದಾದಲ್ಲಿ ಉತ್ತರಗಳು ತನ್ನಲ್ಲಿ ತಾನೇ
ಖಾತರಿಗೊಂಡಿದೆ ಪ್ರಶ್ನಿಸಿದ ಪ್ರಶ್ನೆಗಳೇ ಉತ್ತರಗಳೆಂದು.

ನಿನ್ನ ತಲುಪುವುದೊಂದೆ ಗುರಿ ಎಂದುಕೊಂಡಿತ್ತು ಈ ಹೃದಯ,
ಬಿಟ್ಟೆನೆಂದರು ಬಿಡದಂತ್ತೆ ಗಟ್ಟಿಯಾಗಿ ಸಾಗುತ್ತಿತ್ತು
ನಿ ನುಡಿಸಿ ಮೂಡಿಸಿದ ಹಳಿಗಳಮೇಲೆ,
ಕಾಣದ ಗುರಿ ತಲುಪಲೇಲ್ಲಿ ಎಂದು
ತಟಸ್ತವಾಗಿ ನಿಂತಿದೆ ಇಂದು.

ಓಲೈಕೊಗೋ,ಆರೈಕೆಗೊ....!
ಮನವೊಲಿಕೆಗೊ,ಮನವರಿಕೆಗೋ...!
ನಾಟಕಕ್ಕೊ,ಆಡಂಬರಕ್ಕೋ.....!
ಆವೇಶಕ್ಕೋ,ಅಭಾಸಕ್ಕೋ....!
ನೀನೊಮ್ಮೊಮ್ಮೆ ಹತ್ತಿರವಾದದ್ದು ಮಾತ್ರ ಕಟು ಸತ್ಯ.

ನನ್ನಲ್ಲಿ ನಾ ಮುಳುಗುವ ತನಕ
ನೀನೆಂಬ ಮಾಯೆ ಬಿಡದು ನನ್ನ,
ನಿನ್ನಗಲಿದರು ಇಂದು ನಾ ಕಾಣಲಾರೆ
ನಿನ್ನಲ್ಲಿ ಅದಾಗದ ಮಾಗದ ದುಃಖ ಶೋಕಗಳ,
ಡಾಂಭಿಕತೆಗೂ ಕೋರುಗದಿರು ನನ್ನಗಲಿಕೆಯಿಂದ,
ಮತ್ತೆ ನಿನ್ನಲ್ಲಿ ಜಾರಿ ಬೀಳಲು,
ಬಿದ್ದು ಪರಿತೇಪಿಸುವುದು ಹೊಸತೇನಲ್ಲ.

           
                                          ..............ಬಸವ.

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ