ನಗುತ್ತಲೇ ಇರುವನು ದೇವರು.

ದೇವರೇ ಕೊಟ್ಟ ಲೌಕಿಕ ಬದುಕ ಬದುಕುವವನಿಗೇಕೆ
ಮನೋಲ್ಲಾಸದ ಕಡಿವಾಣಗಳು,
ಹರುಷಕ್ಕೊಂದು ನಗು,ದುಃಖಕ್ಕೊಂದು ಅಳಲು
ಸಹಜ ಸಾಮಾನ್ಯವಿಲ್ಲದೆ ಇಲ್ಲಿ ಮತ್ತೇನು ಜಯಿಸುವುದಿದೆ ಅಲ್ಲಿ,
ಅವನಿಗರಿವಿಲ್ಲದ್ದೆನಿದೆ ಎಂದರಿತರು ಮತ್ತದೇ ಕ್ರೌರ್ಯಗಳ ಕರ್ತು ನಾವಾಗಿರುವುದು ದೇವರಿಗಿದು ಅಸಮಂಜಸ.

ಬಾನು ಭುವಿಯನಿಟ್ಟ ದೇವನಿಗೆಯೇ
ಮನೆಯ ಮಾಡಿ ಮುದ್ದಾಡುವ ಮನುಜನಿವ,
ತಾನು ಹುಟ್ಟಿಸಿದವರೆ ತನ್ನ ಹುಟ್ಟು ಆಚರಿಸುವದನ ಕಂಡು
ನಗುತ್ತಲೇ ಇರುವನು ದೇವರು ನಮ್ಮವರ ಮುಗ್ದತೆಗೆ,
ಸಿಡಿದ್ದೆದ ಕೋಪಗಳಿಗೂ,ದಾರುಣ ದುಃಖಗಳಿಗೂ,ಹರ್ಷೋದ್ಗಾರಕ್ಕೂ
ತನ್ನನ್ನೇ ನೆನೆಯುವರ ಕಂಡು ತನ್ಮಯನಾಗಿಹ ದೇವರು.

ನಮ್ಮೆಲ್ಲರ ಬಯಕೆಗಳು ಅವನರಿತರು
ಅವನಿಗೆಯೇ ಆಸೆಯನೊಡ್ಡಿ ಪಡೆಯುವ 
ನಮ್ಮ ಕುಚೇಷ್ಟೆ ಅವನ ಲೀಲೆಗಳನ್ನೇ ಹಿಂದಿಕ್ಕಿವೆ,
ಅವನೆಂದೂ ಅರಿಯದ ತಾರತಮ್ಯಗಳ 
ಅವನಲ್ಲಿಯೇ ಮೂಡಿಸಿ ಮುಜುಗರಗೊಳಿಸಿದ ನಾವು
ಇನ್ನೂ ಅವನನ್ನ ಅರಿಯುವಲ್ಲಿ ಅಂಬೆಗಾಲನ್ನಿಡುತ್ತಿರುವೆವು.

                                                              .........ಬಸವ.

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ