ಮುಗಿಯದ ಮಾಯೆಗಳು.

ಉರಿ ಬಿಸಿಲಿನಲ್ಲೊಂದು ಹಸಿರ ಕಾನನ
ತಮಗೊಂದು ತನಗೊಂದು ಎಂಬಂತ್ತೆ ಅಡಗಿಹರು ಅದರೊಳಗೆ
ನಿನ್ನ ಪಾದದ ಉಗುರಿನಲ್ಲೊಂದು ಮನೆಯ ಬೇಡವೇ ನನಗೆ?

ಗಹಗಹಿಸಿ ನಗುವ ನೂರು ವಿಚಲಿತ ಮನಗಳು
ತಿಳಿದೋ ತಿಳಿಯದೆಯೋ ತಿವಿದು ನಗುತಿಹರು ಎಲ್ಲೆಡೆ
ನಿನ್ನ ಕಣ್ಣೆದುರಲ್ಲಿ ನನಗೊಂದು ಮುಗುಳುನಗೆಯೂ ಬೇಡವೇ?

ನಾನರಿಯದ ಅರಿವಿನಲ್ಲಿ ಅದದ್ದೊಂದು ಅಕರ್ಮ
ಅರಿವಿನಲ್ಲೇಕೆ ಅದಕೆ ಶಿಕ್ಷೆಯನ್ನಿಟ್ಟಿರುವೆ ನೀನು
ಅವರಂತೆಯೇ ನನಗೆಂದು ಕರುಣಿಸುವೆ ಹೊಸ ಕನಸುಗಳು?

ಎಲ್ಲವೂ ನಿನ್ನದೇ ಇದ್ದರು ನಿನ್ನೆ ಮರೆತಿಹರು ಅವರು
ಒಳಿತೋ ಕೆಡಕೋ ಎನ್ನದೆ ಎಲ್ಲವೂ ಸ್ವೀಕರಿಸಿರುವೆನು ನಾನು
ನಿ ಇನ್ನು ಮುಗಿಸಲೊಲ್ಲೆ ಏಕೆ ಮಾಯೆಯೊಳಗಿನ ಮಾಯೆ?

                                                       .........ಬಸವ.

Comments

  1. ನಿ ಇನ್ನು ಮುಗಿಸಲೊಲ್ಲೆ ಏಕೆ ಮಾಯೆಯೊಳಗಿನ ಮಾಯೆ?

    Best one👌👌👌

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ