ನಂಬಿಕೆಗಳೆಂಬ ಅಪನಂಬಿಕೆಗಳು

ಕಗ್ಗತ್ತಲಲ್ಲಿ ಬೆಸೆದ ಬದುಕುಗಳು,
ಕತ್ತಲಲ್ಲೇ ಮೂಡಿದ ನಂಬಿಕೆಗಳು,
ಕತ್ತಲೇರಚಿಯೇ ಹೋದವು ಸುಳ್ಳುಗಳು.

ಸುಳ್ಳುಗಳ ಸೆಲೆಯಲ್ಲಿ ಸಿಲುಕಿಸಿ,
ನಂಬಿಕೆಗಳೆಂಬ ಬಣ್ಣದ ಮಾತುಗಳಿಗೆ ಬಾಗಿಸಿ,
ಸತ್ಯವೆಂದು ಕಾಣದಂತ್ತೆ ಆಡಂಬರದ ಕಣ್ ಪಟ್ಟಿಯ ಕಟ್ಟಿ,
ಬೆರಳ ತುದಿಯಲ್ಲೇ ಕುಣಿಸುವರು,ನರ್ತಿಸುವರು,
ಬಾಳೆಲ್ಲ ಹೆಣೆದ ನಂಬಿಕೆಗಳ ಕೊಲ್ಲುವರು.

ಅಪನಂಬಿಕೆಯ ಹೊಡೆತಕ್ಕೆ ಹೆದರಿ
ಕುರುಡನಂತ್ತೆ ನಂಬಿದೆವು ಎಲ್ಲದಕೂ ಬೆದರಿ,
ಅಪನಂಬಿಕೆಯ ವಾಸನೆ ಗ್ರಹಿಸಿದರೂ
ಮರೆಸಿತ್ತು ಹುಸಿ ವಿಶ್ವವಾಸವೆಂಬ ದುರ್ನಾತ.

ಸುಳಿವೇ ಸಿಗದಂತ್ತೆ,
ವಿಷ ಭರಿತ ಸರ್ಪದಂತ್ತೆ,
ಮೆಲ್ಲನೆ ಮೈಯೆಲ್ಲಾ ಏರಿ ವಿಷಕಾರಿತ್ತು ನಂಬಿಕೆ,
ನಂಬಿಕೆ ಎಂಬ ಅಪನಂಬಿಕೆ ಮೆಲ್ಲಗೆ ನಂಜೇರಿ
ಮೈಯೆಲ್ಲಾ ನೀಲಗೊಳಿಸಿ ಅಪನಂಬಿಕೆಯಾಗಿಯೇ ಬಿಟ್ಟಿತ್ತು.

                                                      .........ಬಸವ

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ