ನಂಬಿಕೆಯ ಬಿಂಬಗಳಲ್ಲಿ

ಹೊಸತೆಂಬ ಅನುಕಂಪದ ಆದರಕ್ಕೆ,
ಬಿಟ್ಟು ಕೊಡಲಾಗದ ಬುದ್ಧಿಯ ಮೂಕದಾಟಕ್ಕೆ,
ಬಲಿಯಾದದ್ದು ಮಾತ್ರ ಬಯಲೇ ಕಾಣದ ಮನಸ್ಸು.

ತನ್ನವರು ಎಂಬ ನಂಬಿಕೆಯಲ್ಲಿ
ಎಡೆ ಬಿಡದೆ ನುಡಿದಿದೆ ಮನಸ್ಸಿಲ್ಲಿ,
ಕಾಣದೆ ಹೋದಲ್ಲಿ ನಂಬಿಕೆಯ ಬಿಂಬಗಳು
ನೂರೆಂಟು ಆತಂಕಗಳ ಸೆಲೆಯಲ್ಲಿ ಚಿತ್ತದ ಚಿತ್ರಗಳು.

ಹೊಸತಾದ ಮುಖದೊಡಗಿನ ಒಡನಾಟ
ಬಾರದ ಭಾಷೆಗೂ ತಲೆ ಅಲ್ಲಾಡಿಸುತ್ತಿತ್ತು ಅಂದು,
ಇಂದೇಕೋ ನನ್ನವರಲ್ಲವೆಂಬ ದೂರದ ಗಾಳಿಗೆ!!
ಕಿರುಚಿ ಚಿರಾಡಿದರು ಕೇಳಿಯು ಕೆಳದಂತ್ತೆ ನಟಿಸುತ್ತಿದೆ ಇಂದು.

ಈಗಿಗಲೇ ಮೂಡಿದ ಇಳಿ ತಂಪ ಸಂಜೆ
ನೋಡು ನೋಡುತ್ತಲೇ ಕಗ್ಗತ್ತಲಾಗಿತ್ತು...
ಬೆತ್ತಲಾಯಿತು ಹಲವು ಸತ್ಯಗಳ ಸಂಪತ್ತು
ನಂಬಿಕೆ ದ್ರೋಹವೆಂಬ ಹೆಗಲೇರಿ ಬಂದೇಬಿಟ್ಟಿತ್ತು ವಿಪತ್ತು.

                                          .....................ಬಸವ

Comments

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ