ಅನುಕಂಪದ ತ್ರಿಶೂಲ.



ಮೋಕ್ಷ ಮುಂದಿಟ್ಟದ್ದು ನೀನೆಯೇ ಆದರು
ಅತ್ತಿತ್ತ ಮಾಯೆಗಳನ್ನೇಕೆ ಹೊಂದಿಸಿಟ್ಟಿರುವೆ?
ಜಾರು ನೆಲದ ಮೇಲೆ ಓಡುವವರು ನಾವು
ಬಿದ್ದೆದ್ದು  ಓಡುವ ಓಟದಲ್ಲಿ ಬೇಸರವ ನೀಡದಿರು.

ಕೊಳೆತ ಕಣ್ಣಿಗೂ ಹೊಳೆಯುವ ಕಾಂತೀಯ ಕರುಣಿಸಿ
ಒಮ್ಮೆಲೇ ಕತ್ತಲೆ ಬಯಸುವಂತಹ ಮನಸ್ಸೇಕೆ ಮಾಡಿಟ್ಟೆ?
ಬಾಳ ಬದುಕಲೆಂದು ಈಜು ಕಲಿತವರು ನಾವು
ಪ್ರಳಯದಲ್ಲಿ ನೂಕಿ ಈಜು ಈಜೇಂದು ನಗದಿರು.

ಮುಗಿಯದಷ್ಟು ಮುಂದಾಲೋಚನೆಗಳ ಕೊಟ್ಟು
ಅತೀತದಲ್ಲಿಯೇ ನಾವಾವುದರ ಅತಿಥಿಯೆಂದೇಕೆ ಹೇಳಲಿಲ್ಲ?
ಮನದ ನೋವುಗಳಲ್ಲಿಯೂ ನಗುವ ಕಲೆತವರು ನಾವು
ಸ್ಮಶಾಣದ ಆವರಣದಲ್ಲಿಯೂ ನಗುವ ಕುಚೇಷ್ಟೆಯ ಕೊಡದಿರು.

                                                  .............ಬಸವ.

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ