ಯಾರವರು ಒಲವ ಗುತ್ತಿಗೆದಾರರು?


ಒಮ್ಮೆಲೇ ಮಾತನಾಡದೆ ಮನದ ಮೌನ ಮುರಿದು ಹೋದವರು,
ಹೃದಯದೊಳಗೆ ಅಗಲಿಕೆಯ ಭೀತಿಯ ಡಮರುಗ ಬಾರಿಸಿದವರು,
ಬಿಗಿ ಗಂಟಲ ದುಃಖಗಳನ್ನ ಅಲೆಅಲೆಯಾಗಿ ಕಣ್ಣೀರಲ್ಲಿ ತೇಲಿಸಿಹೋದವರವರು,
ಯಾರವರು ಒಲವ ಗುತ್ತಿಗೆದಾರರು?

ಎಂದೂ ಕಾಣದ ಹೊಸ ಅನುಭವಗಳಿಗೆ ನಾಂದಿ ಹಾಡಿದವರು,
ಉರಿ ಬಿಸಿಲಲ್ಲೂ ತಂಪಿನ ಅನುಭೂತಿಯ ಕೊಟ್ಟವರು,
ಸರ್ವಸ್ವವೂ ನಿಸ್ವಾರ್ಥದೊಂದಿಗೆ ಬಿಟ್ಟುಕೊಡುವ ಭರವಸೆಯ ಕೊಟ್ಟವರು,
ಎಲ್ಲದಕ್ಕಿಂತಲೂ ಎಲ್ಲರಿಗಿಂತಲೂ ಮಿಗಿಲೆಂದವರು,
 ನಗೆ ಮೂಡುವುದೊರಳಗೆಯೇ ಕಣ್ಣೀರ ಮುಡಿಸಿದವರವರು,
ಯಾರವರು ಒಲವ ಗುತ್ತಿಗೆದಾರರು?

ಅರಿಯದೇ ಇದ್ದ ತೀರಾ ಆತ್ಮೀಯತೆಯ ಅನುಭವವ ಕೊಟ್ಟವರು,
ಮನದ ನಿರಂಜತೆಗೆ ಕಾಮನಬಿಲ್ಲಿನ ಚಿತ್ತಾರ ಮುಡಿಸಿದವರು,
ಇರುಳುಗಳೇ ಅರಿಯದ ಕಣ್ಣುಗಳಿಗೆ ಹುಣ್ಣಿಮೆಯ ತಂಪ ಪಸರಿಸಿದವರು,
ಸದಾ ನಗಿಸುತ್ತಲೇ ಇರುವೆನೆಂದವರು
ಒಮ್ಮೆಲೇ ಅಳಲುಗಳ ಕೂಪಕ್ಕೆ ನೂಕಿದವರವರು,
ಯಾರವರು ಒಲವ ಗುತ್ತಿಗೆದಾರರು?

                                         .............ಬಸವ.

Comments

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ