ಚಂದ್ರಮೌಳೇಶ್ವರನೆಡೆಗೆ.



ಬೆಳಿಗ್ಗೆ 10ರ ಸುಮಾರು ನಾನು ಮತ್ತೆ ಮಹೇಶ ಎಂದಿನಂತೆಯೇ ತಿಂಡಿ ಮುಗಿಸಿ ಕುಳಿತಿದ್ದೆವು.
ಅವಾಗ್ ಅವಾಗ ಅಲ್ಲಲ್ಲಿ ಹೋಗುವ ನನ್ನ ಬೇಡಿಕೆಗಳಿಗೆ ಮಹೇಶ ಕಣ್ಣು ಮುಚ್ಚಿ ಹುಗುಡುತ್ತಿದ್ದ, ಅಂತೆಯೇ ಸುಮ್ಮನೆ ಕುಳ್ತಿದ್ದಾಗ ಪೂಜಾ ಫೋನ್ ಮಾಡಿ ಹುಬ್ಬಳ್ಳಿಗೆ ಹೋಗುವದರ ಬಗ್ಗೆ ಹೇಳಿದ್ದೆ ತಡ ತಕ್ಷಣವೇ ರೆಡಿ ಅದ್ವಿ, ಹೋಗುವುದು ನಿಶ್ಚಯ ವಾಗಿದ್ದು ಬೈಕ್ ಇದ್ರೆ ಚಂದ ಅಂತ ಹೇಳಿ ನಾನು ಮತ್ತೆ ಮಹೇಶ ಬೌನ್ಸ್ ಬೈಕ್ ತಗೆದುಕೊಳ್ಳುವ ನಿರ್ಧಾರಕ್ಕೆ ಬಂದ್ವಿ,ಮಹೇಶನ ಬೈಕ್ ಹೊರಪಡಿಸಿ ಇನ್ನೊಂದು ಬೈಕ್ ನ ಅವಶ್ಯಕತೆ ಇತ್ತು ಹಾಗಾಗಿ ಮಹೇಶನ ಲೈಸೆನ್ಸ್ ಅಲ್ಲಿಯೇ ಬುಕ್ ಮಾಡಿಕೊಂಡೆವು.
ಮಹೇಶ ಮತ್ತು ನಾನು ಇಬ್ಬರು ಒಂದೊಂದು ಬೈಕ್ ನ ಮೇಲೆ ಹೋಗಿ ಪೂಜಾ ಮತ್ತೆ ಸೌಮ್ಯಾಳಿಗೆ ಸರ್ಪ್ರೈಸ್ ಕೊಟ್ಟಾಗಿತ್ತು.
ನನ್ನದು ಸ್ಕ್ಯೂಟಿ ಇದ್ದ ಕಾರಣ ಇಲಿಯಂತಿದ್ದ ಪೂಜಾಳನ್ನ ನನ್ನ ಗಾಡಿಯ ಮೇಲೆಯೇ ಹತ್ತಿಸಿಕೊಂಡೇ, ಉಳಿದ ಮಾತು ಸೌಮ್ಯಳ ಬಗೆಗಿಂದು ಹೇಳುವ ಅವಶ್ಯಕತೆಯೇ ಬರುವುದಿಲ್ಲ ಇವಳು ಇಲಿ ಅಂದಲ್ಲಿ ಅವಳು ಆನೆ ಅನ್ನುವುದು ಕಣ್ಣೆದುರಿಗಿನ ಸತ್ಯ.

ಪೂಜಾ ಹುಬ್ಬಳ್ಳಿಗೆ ಹೋಗಬಯಸಿದ್ದು ದೇವಸ್ಥಾನಕ್ಕೆ, ಹುಬ್ಬಳ್ಳಿಯ ಹತ್ತಿರವೇ ಮಧ್ಯ ರಸ್ತೆಯಲ್ಲೇ ಇರುವ ಶಿವಾಲಯ,"ಕಂಡ ದೇವರಿಗೊಂದು ಹರಕೆ" ಅನ್ನುವಂತ್ತೆ ಪೂಜಾ ಈ ದೇವರಿಗೆ ಬರುತ್ತೇನೆಂಬ ಹರಕೆ ಬಸ್ಸಲ್ಲೇ ಕಣ್ಣು ಮುಚ್ಚಿ ಬೇಡಿಕೊಂಡಿದ್ದಳಂತ್ತೆ ಹಾಗಾಗಿ ಅಲ್ಲಿಗೆ ಹೋಗುವ ನಿರ್ಧಾರವಾಗಿತ್ತು. 
ಮಹೇಶ್ ಬೈಕ್ ಓಡಿಸುವ ಶರ ವೇಗಕ್ಕೆ ನಾನೇ ಅಂಜಿ ಅಳುಕಿದ್ದು ಉಂಟು, ಇನ್ನು ಸೌಮ್ಯಾಳದು ಅಧೋಗತಿ ಅನ್ನುವ ನನ್ನ ಮತ್ತು ಪೂಜಾಳ ವಿಚಾರ್ ಅವತ್ತು ಉಲ್ಟಾ ಹೊಡೆದಿದ್ದವು,ಏಕೆಂದರೆ ಮಹೇಶ ಅಂದು ನನಗಿಂತಲೂ ನಿಧಾನವಾಗಿ ಬೈಕ್ ಓಡಿಸಿದ್ದ. ಅಂತೆಯೇ ಇದರ ಹಿಂದೆ ಸೌಮ್ಯಳ ಮನವೊಲಿಕೆ ಕಷ್ಟ ಸ್ಪಷ್ಟವಾಗಿ ಕಾಣುತ್ತಿತ್ತು. ಮೆಲ್ಲನ್ನೇ ಕುಚೇಷ್ಟೆ ಮಾಡುತ್ತ ನನ್ನ ಬೈಕ್ ಓಡಿಸುವ ಪರಿಗೆ ಪೂಜಾ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಳು.
ಸ್ಪಲ್ಪವೆ ಸಮಯದ ನಂತರ ಪೂಜಾ ಹೇಳಿದ್ದ ದೇವಸ್ಥಾನಕ್ಕೆ ಹೋದೆವು,ಅಂತಹದ್ದೇನಿದೆ ಈ ದೇವಾಲಯದ ವಿಶೇಷ ಅನ್ನುವ ಪ್ರಶ್ನೆಗೆ ಅವಳ ಉತ್ತರ ಮಾತ್ರ ಹಾಸ್ಯಾಸ್ಪದವಾಗಿತ್ತು,"ನಟ್ಟ ನಡಬಾರ್ಕ್ ರೋಡಿನ್ಯಾಗ್ ಇದು ಗುಡಿ ಅದ ಅಂದ್ರ್ ಇದರ ತಾಕತ್ ನೋಡ್ ನಿ ಜರಾ" ಅನ್ನುವ ಅವಳ ಲೆಕ್ಕಾಚ್ ಅವಳ ಭಕ್ತಿಯ ವಿಶೇಷತೆ. ದೇವಸ್ಥಾನದಲ್ಲಿ ಕೈ ಮುಗಿದಿದ್ದಕ್ಕಿಂತ ಸೆಲ್ಫಿ ತೆಗೆದುಕೊಂಡಿದ್ದೆ ಹೆಚ್ಚಾಗಿತ್ತು ಏಕೆಂದರೆ ನಮ್ಮೊಡನಿದ್ದಿದ್ದು ಸೌಮ್ಯ,"ಸೆಲ್ಫಿ ರಾಣಿ" ಅಂತ ಹೇಳಿದರು ತಪ್ಪಾಗದು. ಅವಳ ಆಟಕ್ಕೆ ಹು ಅನ್ನುವ ಮಹೇಶ ಫೋಟೋಗ್ರಾಫಿ ಅಲ್ಲಿ ಅವನ ನಿಪುಣತೆ ತೋರಿಸಿಯೇ ಬಿಡುತ್ತಿದ್ದ. ಸಾಕು ಸಾಕೆಂದು ಕೂಗಿ ಕೂಗಿ ಚಂದ್ರಮೌಳೇಶ್ವರನ ಕಡೆಗೆ ಸಾಗಿದೆವು.

ಉಣಕಲ್ ಕ್ರಾಸ್ ಇಂದ ಎಡಕ್ಕೆ ಒಂದು ಕಿಲೋಮೀಟರ್ ಅಂತರದಲ್ಲಿಯೇ ದೇವಸ್ಥಾನವಿದೆ. ದೇವಸ್ಥಾನದ ವಿಶೇಷತೆ ಹೇಳಬೇಕು ಅಂದ್ರೆ ಇದು 11ನೆ ಅಥವಾ 12ನೆ ಶತಮಾನದ ದೇವಸ್ಥಾನ. ಅಂದರೆ ಸರಿ ಸುಮಾರು 900 ವರ್ಷ ಹಳೆಯ ದೇವಸ್ಥಾನ ಅನ್ನಬಹುದು, ಇದಕ್ಕೆ ನಾಲ್ಕು ಬಾಗಿಲುಗಳಿವೆ ಮತ್ತೆ ಪ್ರದಕ್ಷಿಣೆ ಪಥವು ಇದೆ. ದೇವಸ್ಥಾನದ ಒಳಗಡೆ ಎರಡು ಶಿವ ಲಿಂಗಗಳಿವೆ ಅದರಲ್ಲಿ ಒಂದು ಶಿವಲಿಂಗಕ್ಕೆ ನಾಲ್ಕು ಮುಖಗಳಿವೆ. ದೇವಸ್ಥಾನದ ಸುತ್ತಲೂ ಅದ್ಭುತ ಕೆತ್ತನೆಗಳಿವೆ ಮುಖ್ಯವಾಗಿ ಗಣೇಶ ನೃತ್ಯ ಮತ್ತು ಅಪ್ಸರೆಯರ ನೃತ್ಯಗಳು ಕಂಡುಬರುತ್ತವೆ.ಕೆಲವು ಮೂಲಗಳ ಪ್ರಕಾರ ತಿಳಿದು ಬಂದಂತ್ತೆ ಇದು ದೇವಸ್ಥಾನ ಒಂದೇ ದಿನದಲ್ಲಿ ನಿರ್ಮಿಸಲಾಗಿದೆಯಂತ್ತೆ, ಆ ಸಮಯದಲ್ಲಿ ರಾಜರು ವಾಸ್ತುಶಿಲ್ಪ ಮತ್ತು ದೇವಸ್ಥಾನ ನಿರ್ಮಾಣದ ಪ್ರಾಭಲ್ಯ ತೋರಿಸುವದಕ್ಕೆ ಆಗಿನ ಶ್ರೇಷ್ಠ ಶಿಲ್ಪಿ ಜಕಣಚಾರ್ಯರಿಗೆ ಇದನ್ನು ಒಪ್ಪಿಸಿದ್ದರಂತ್ತೆ. ಆ ಕಾರಣಕ್ಕಾಗಿಯೇ ಒಂದೇ ದಿನದಲ್ಲಿ ಪೂರ್ಣಗೊಳಿಸುವಲ್ಲಿ ವಿಫಲಗೊಂಡು ದೇವಸ್ಥಾನ ಶಿಖರ ವಿಲ್ಲದಂತೆಯೇ ನಿಂತಿದೆ ಅನ್ನುವುದು ಇತಿಹಾಸಕಾರರ ಹೇಳಿಕೆಗಳು. ಈ ದೇವಾಲಯದ ಇನ್ನೊಂದು ವಿಶೇಷತೆ ಏನೆಂದರೆ ಯುಗಾದಿಯ ದಿನದಂದು ಸೂರ್ಯನ ಕಿರಣಗಳು ಬೆಳಗ್ಗೆ ನೇರವಾಗಿ ಶಿವಲಿಂಗದ ಮೇಲೆಯೇ ಬೀಳುತ್ತವಂತ್ತೆ. ಈ ದೇವಾಲಯ ಬಾದಾಮಿ,ಐಹೊಳೆ ಮತ್ತು ಪಟ್ಟದಕಲ್ಲು ದೇವಾಸ್ಥಾನಗಳ ಸಾಲಿನಲ್ಲಿಯೇ ಗುರುತಿಸಲ್ಪಡುತ್ತದೆ. ಇದೀಗ ದೇವಸ್ಥಾನ ಪುರಾತನ ದೇವಾಸ್ತನಗಳ ಅಡಿಯಲ್ಲಿ ಬರುತ್ತದೆ. ಇಂತಹ ಹಲವು ದೇವಸ್ಥಾನಗಳು ಭಾರತದಲ್ಲಿವೆ,ಇವುಗಳನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನುವುದು ನನ್ನ ಆಸೆ, ದೊಡ್ಡ ದೊಡ್ಡ ದೇವಸ್ಥಾನಗಳಿಗೆ ಧನಿಕರು ಕೋಟ್ಯಂತರ ರೂಪಾಯಿ ದೇಣಿಗೆ ನೀಡುವಂತೆಯೇ ಅಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಳೆ ದೇವಸ್ಥಾನಗಳ ಜೀರ್ಣೋದ್ದಾರ ಕೆಲಸಕ್ಕೆ ಕೈ ಹಾಕಿದ್ದರೆ ಇವತ್ತು ಎಲ್ಲಿಯೂ ಕೂಡ ಹಾಳು ಬಿದ್ದ ದೇವಸ್ಥಾನಗಳು ಕಾಣುತ್ತಲೇ ಇರಲಿಲ್ಲ.

ಎಲ್ಲರನ್ನ ದೇವಸ್ಥಾನವನ್ನ ಇನ್ನಷ್ಟು ಆಳವಾಗಿ ತೋರಿಸಬೇಕು ಅನ್ನುವುದು ನನ್ನ ಇಚ್ಛೆ ಆದಲ್ಲಿ ಉಳಿದವರಿಗೆ ಸೆಲ್ಫಿ ಗು ಸಮಯವಿಲ್ಲದಂತ್ತಾಗಿತ್ತು, ಇಡೀ ದೇವಸ್ಥಾನದ ಸುತ್ತಲಿನ ಕೆತ್ತನೆಗಳು ತೋರಿಸಿದಾಗಳೊಮ್ಮೊಮ್ಮೆ ಒಂದೊಂದು ಸೆಲ್ಫಿಗಳು ಕ್ಲಿಕ್ ಆಗ್ತಿದ್ವು. ಸೌಮ್ಯಾಳಿಗೆ ಇವಾಗಲು ಸಹ ದೇವಸ್ಥಾನದ ಹೆಸರು ನೆನಪಿರಲಿಕ್ಕಿಲ್ಲ ಏಕೆಂದರೆ ಅಷ್ಟು ಫೋಟೋಗಳ ಗುಂಗಿನಲ್ಲಿ ಮುಳುಗಿದ್ದಳು.

ಉರಿ ಬಿಸಿಲು ಮನೆಗೆ ನಡೆಯಿರಿ ಅನ್ನುವ ಸಂದೇಶ ಬಿಸಿಲಲ್ಲೇ ಹೇಳತೊಡಗಿತ್ತು ಅಂತೆಯೇ ಎಲ್ಲರೂ ಅಲ್ಲಿಂದ ಹೊರಟೆವು,ಮನಸ್ಸಿಗೆ ತುಂಬಾ ಹಿತಕರ ನೆನಪುಗಳು ಕೊಡುವ ದಿನ ಅದಾಗಿತ್ತು.
                                             .......ಬಸವ

Comments

  1. ಚಂದ್ರಮೌಳೇಶ್ವರನ ಸವಿನೆನಪು

    ReplyDelete
  2. ನೀ ಅರಿತ ಅರಿವು ಜಗದ ಅರಿವ ಅರಿಯುವಂತೆ...
    ಇದನೊಮ್ಮೆ ಓದಲು ಎನ್ನ ನಾ ಮರೆಯುವಂತೆ.....

    ReplyDelete
  3. Howdu tumba olle ಸ್ಥಳ adu nanu ಸಹ ಹೋಗ್ಬೇಕು ಅಂತ ಅನ್ಕೊಂಡಿದ್ದೆ ಆದ್ರೆ ಜೊತೆ ಯಾರು ಇರ್ಲಿಲ್ಲ... ನೀವು ನೀಡಿದ ಮಾಹಿತಿಗೆ tqd

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ