ಬಿಕ್ಕಟ್ಟು



ಓಗೊಡಲೇ ಬೇಕು ಭಗವಂತನ ಕರೆಗೆ
ನೋವಾದರೂ ನರ್ತಿಸಲೇ ಬೇಕು ವಿಧಿಗೆ,
ನೋವಿನ ಕತ್ತಲಾದರೇನು ಸುಖದ ಬೆಳಕಾದರೇನು 
ಸರ್ವವೂ ಕಣ್ ತೆರೆದೇ ನೋಡುತ್ತಿಹನವನು.

ಇಲ್ಲಿ ಅತಿಥಿಗಳು ನಾವು ನೀವೆಲ್ಲರೂ ಸಿಕ್ಕಿದ್ದು ಸ್ವೀಕರಿಸು
ಮಿಕ್ಕಿದ್ದು ಉಣಬಡಿಸು ನಿರ್ಗತಿಕನಿಗೆ ನಿನ್ನದಲ್ಲವೆಂದು,
ಅರಿತಷ್ಟು ಆತ್ಮವರಿಯಬೇಕು ಕರ್ಮಕ್ಕೆ ತಕ್ಕಂತ್ತೆ
ಏನೂ ಬಯಸದೆ ಬಾಗು ಭಗವಂತನ ನಡೆಗಳಿಗೆ.

ಉದ್ದೇಶವರಿತರು ಉದ್ದಾರವಾಗದಿರಲು
ಮತ್ತೊಬ್ಬರ ನೋವುಗಳಿಗೆ ನಗುವ ಚಿತ್ತವೇ ಕಾರಣ,
ಬಿರುದುಗಳ ಪಡೆದೇನೆಂದು ಬೀಗಿದಷ್ಟು ಭಯಂಕರ ಬದುಕು
ನಟಿಸದಿರು ನೋವುಗಳಿಗೆ ಮರೆತು ನಿನ್ನವವೇ ನೋವೆಂದು.

ಖಾಲಿಯದಂತ್ತೆ ಹಗುರವಿರಲಿ ಹಂಗುಗಳ ಹಂದರ
ನೈಜ್ಯತೆಯ ಅರಿತು ತಣಿಸು ಜೀವನದ ಜಿಡ್ಡುಗಳ,
ಬಂಧನಗಳಲ್ಲಿ ಇಳಿದಷ್ಟು ಬದುಕು ಬಿಕ್ಕಟ್ಟು
ಅರಿತರು ಅವ್ಹಾನಿಸದಿರು ಅಲೌಕಿಕ ಇಕ್ಕಟ್ಟು.


                                                 .........ಬಸವ


Comments

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ